ಶಿವಾನಂದ ಗೊಂಬಿ
ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ದಂಡವನ್ನು ಶೇ. 50ರಷ್ಟು ರಿಯಾಯಿತಿಯಡಿ ಪಾವತಿಸಲು ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ದಂಡ ಪಾವತಿಸಿಕೊಳ್ಳಲು ವಾಹನ ತಡೆಯುವ ಪೊಲೀಸರು, ದಂಡ ಪಾವತಿಸಬೇಕೆಂಬ ಸವಾರರು ಕಂಗಾಲಾಗುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡ ಪಾವತಿಸಲು ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಶೇ. 50ರಷ್ಟು ರಿಯಾಯಿತಿ ನೀಡಿದೆ. ಜೂ. 21ರಿಂದ ಪ್ರಾರಂಭವಾಗಿರುವ ಈ ವಿಶೇಷ ಯೋಜನೆಯು ಜು. 10ರ ವರೆಗೆ ಜಾರಿಯಲ್ಲಿರಲಿದೆ. 2026ರ ಮೇ ಮೊದಲು ಇಲಾಖೆಯ ಸಂಚಾರ ಇ-ಚಲನ್‌ಗಳಲ್ಲಿ ಬಾಕಿ ಕೇಸ್‌ಗಳ ದಂಡದ ಮೊತ್ತ ಯೋಜನೆಯಡಿ ಮತ್ತು 1991ರಿಂದ 2022ರ ವರೆಗೆ ದಾಖಲಾಗಿರುವ 1.87 ಲಕ್ಷಕ್ಕೂ ಹೆಚ್ಚು ಡಿಪಾರ್ಟ್‌ಮೆಂಟ್ ಸ್ಟ್ಯಾಟ್ಯುಟರಿ ಆ್ಯಕ್ಷನ್ ಪ್ರಕರಣಗಳ ದಂಡ ಪಾವತಿಸಿಕೊಳ್ಳಲಾಗುತ್ತಿದೆ. ಆದರೆ ಜೂ. 21ಕ್ಕೆ ಇದು ಪ್ರಾರಂಭವಾಗಿದ್ದು ದಂಡ ಪಾವತಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಸಾಧ್ಯವೇ ಆಗುತ್ತಿಲ್ಲಅಂದಿನಿಂದಲೇ ಬೆಳಗ್ಗೆಯಿಂದ ಸಂಜೆ ವರೆಗೂ ಸಂಚಾರಿ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನಗಳನ್ನು ತಡೆದು ಬಾಕಿಯುಳಿದಿರುವ ದಂಡ ಎಷ್ಟು ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ದಂಡ ಪಾವತಿಸಿಕೊಳ್ಳಲು ಮಾತ್ರ ಸಾಧ್ಯವೇ ಆಗುತ್ತಿಲ್ಲ.
ಕೆಎಸ್‌ಪಿ ಫೈನ್ (ksp fine- karnataka state police) ವೆಬ್‌ಗೆ ಹೋದರೆ ದಂಡ ಪಾವತಿಯ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ವಾಹನದ ಸಂಖ್ಯೆ ಹಾಕಿದರೆ ಕ್ಯಾಪ್ಚಾ ನಮೂದಿಸುವಂತೆ ಬರುತ್ತದೆ. ಆದರೆ ಕ್ಯಾಪ್ಚಾ ಬಟನ್ ಕ್ಲಿಕ್ ಮಾಡಿದರೆ ಸಾಕು "ನೆಟ್ವರ್ಕ್ ಎರರ್ " (network error) ಎಂದೇ ಬರುತ್ತಿದೆ. ಕೆಲವೊಮ್ಮೆ ಬ್ರೌಸಿಂಗ್ ಎಂದು ಸುತ್ತುತ್ತಲೇ ಇರುತ್ತವೆ. ಇಲ್ಲವೇ ಸರ್ವರ್ ಡೌನ್ ಎಂದು ಕೂಡ ತೋರಿಸುತ್ತಿರುತ್ತದೆ. ಹೀಗಾಗಿ. ಈ ವರೆಗೂ ಸರಿಯಾಗಿ ದಂಡ ಪಾವತಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಇನ್ನು ನಾವೇ ಆನ್‌ಲೈನ್‌ನಲ್ಲಿ ಮಾಡಲು ಪ್ರಯತ್ನಿಸಿದರೂ ಇದೇ ಪರಿಸ್ಥಿತಿ.
ಈ ವರೆಗೂ ಅಲ್ಲೊಬ್ಬರು ಇಲ್ಲೊಬ್ಬರಿಂದ ಮಾತ್ರ ದಂಡ ಪಾವತಿಸಿಕೊಳ್ಳಲಾಗಿದೆ. ಹಿಂದೆ ಅನೌನ್ಸ್ ಮಾಡಿದಾಗ ಈ ರೀತಿ ಇರಲಿಲ್ಲ. ಆದರೆ, ಈಗ ಬಹಳ ಸಮಸ್ಯೆಯಾಗುತ್ತಿದೆ. ದಂಡ ಪಾವತಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ದಂಡ ಪಾವತಿಸಬೇಕಾದ ಸವಾರರು ಏನ್ ಸರ್ ಸರ್ವರ್ ಸರಿಯಿಲ್ಲ. ಸರ್ವರ್ ಸರಿಯಾದ ಬಳಿಕ ಎಲ್ಲಿಯಾದರೂ ಪಾವತಿಸುತ್ತೇನೆ ಬಿಡಿ ಎಂದು ಅಲ್ಲಿಂದ ಕಾಣೆಯಾಗುತ್ತಿದ್ದಾರೆ.
ಎಎಸ್‌ಐ
ರಾಘವೇಂದ್ರ ಕುಲಕರ್ಣಿ, ಬೈಕ್ ಸವಾರ