ಮೌನಾನುಷ್ಠಾನದಿಂದ ಆತ್ಮಬಲ ವೃದ್ಧಿ: ಬಸವಲಿಂಗ ಶ್ರೀಗಳು

KannadaprabhaNewsNetwork |  
Published : Jun 28, 2026, 03:30 AM IST
(26ಎನ್.ಆರ್.ಡಿ5 ಮೌನ ಲಿಂಗಾನುಷ್ಟಾನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಬಸವಲಿಂಗ ಶ್ರೀಗಳು ಆರ್ಶೀವಚನ ನೀಡಿದರು.)   | Kannada Prabha

ಸಾರಾಂಶ

ಮೌನಾನುಷ್ಠಾನದಿಂದ ಮನಸ್ಸು ಏಕಾಗ್ರತೆ ಹೊಂದುತ್ತದೆ. ಆತ್ಮಬಲದೊಂದಿಗೆ ಆತ್ಮಕಲ್ಯಾಣ ಶಕ್ತಿ ವೃದ್ಧಿಯಾಗುತ್ತದೆ. ಸಮಾಜಕಲ್ಯಾಣ ಸೇವೆ ಮಾಡುವ ಇಚ್ಛೆ ಬೆಳೆಯುತ್ತದೆ ಎಂದು ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ತಿಳಿಸಿದರು.

ನರಗುಂದ: ಮೌನಾನುಷ್ಠಾನದಿಂದ ಮನಸ್ಸುಏಕಾಗ್ರತೆ ಹೊಂದುತ್ತದೆ. ಆತ್ಮಬಲದೊಂದಿಗೆ ಆತ್ಮಕಲ್ಯಾಣ ಶಕ್ತಿ ವೃದ್ಧಿಯಾಗುತ್ತದೆ. ಸಮಾಜಕಲ್ಯಾಣ ಸೇವೆ ಮಾಡುವ ಇಚ್ಛೆ ಬೆಳೆಯುತ್ತದೆ ಎಂದು ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ತಿಳಿಸಿದರು.

ತಾಲೂಕಿನ ಶಿರೋಳ ಗ್ರಾಮದ ಶಿವಯೋಗಾಶ್ರಮದ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರ ಮೌನಾನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿಗಳೆಂದರೆ ಸಮಾಜದ ಸೇವಕರು ಹೊರತು ಸಮಾಜದ ಸರ್ವ ವರ್ಗದಜನರ ಸಮಾಜದ ಅಭಿವೃದ್ಧಿಯೇ ಮುಖ್ಯ. ಸ್ವಾಮಿಗಳು ಸಮಾಜ ಬಿಟ್ಟರೆ, ಸ್ವಾಮಿಗಳಿಗೆ ಅಸ್ತಿತ್ವ ಇರುವುದಿಲ್ಲ. ಮೀನು ನೀರನ್ನು ಸ್ವಚ್ಛ ಮಾಡಿದ ಹಾಗೆ ಸ್ವಾಮಿಗಳು ಸಮಾಜದ ಓರೆಕೋರೆಗಳನ್ನು ತಿದ್ದಿ, ವ್ಯಸನಮುಕ್ತ ಪರಿಶುದ್ಧ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತಾರೆ. ಅನುಷ್ಠಾನದ ಪ್ರಭೆ ಸದಾಕಾಲ ಸಮಾಜದ ಮೇಲಿರಲಿ. ಮಳೆ- ಬೆಳೆ ಸಮೃದ್ಧಿಯಿಂದಾಗಿ ರೈತರ ಮೊಗದಲ್ಲಿ ಹರ್ಷ ತುಂಬಲಿ ಎಂದರು.

ಶಿರೋಳ ಶಿವಯೋಗಾಶ್ರಮದ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಬಗ್ಗೆ ಸಮಾಜದಲ್ಲಿ ಒಳ್ಳೆಯ ವಿಶ್ವಾಸ ಇದೆ. ಅದಕ್ಕೆ ಮಂಗಲೋತ್ಸವ ಕಾಯಕ್ರಮಕ್ಕೆ ಹರಿದುಬಂದ ಜನಸಾಗರವೇ ಸಾಕ್ಷಿ ಎಂದರು.

ರೋಣ ತಾಲೂಕಿನ ಯಾ.ಸ. ಹಡಗಲಿ ಗ್ರಾಮದ ಸಾಧು ವೀರಪ್ಪಜ್ಜನ ಮಠದಲ್ಲಿ 21 ದಿನಗಳ ಕಾಲ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಲೋಕ ಕಲ್ಯಾಣಾರ್ಥವಾಗಿ15ನೇ ವರ್ಷದ ಮೌನಲಿಂಗಾನುಷ್ಠಾನ ಮಾಡಿದ್ದಾರೆ ಎಂದರು.

ಮುರನಾಳ, ಯಾವಗಲ್ಲದ ಮಠದ ಮೇಘರಾಜೇಂದ್ರ ಶ್ರೀಗಳು, ಗದಗ ಕದಳಿವನ ಮಠದ ಅಕ್ಕಮಹಾದೇವಿ ತಾಯಿ, ಶಿರೋಳ ಶಿವಯೋಗಾಶ್ರಮದ ಮಾತೋಶ್ರೀ ಅಕ್ಕಮಹಾದೇವಿ ತಾಯಿ, ಚೋಳಚಗುಡ್ಡ ವೇದಾಶ್ರಮದ ಅಮ್ಮಿನಗಡ ಪಾರ್ವತಿ ಪರಮೇಶ್ವರ ಅಮ್ಮ, ಬಾಪುಗೌಡ ತಿಮ್ಮನಗೌಡ್ರ, ಪ್ರಭಾಕರ ಉಳ್ಳಾಗಡ್ಡಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಂಗಲೋತ್ಸವ ನಿಮಿತ್ತ ಯಾ.ಸ. ಹಡಗಲಿ ಗ್ರಾಮದ ಅಕ್ಕನ ಬಳಗದಿಂದ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರಿಗೆ ತುಲಾಭಾರ ಸೇವೆ ಮಾಡಿದರು.

ಕಾರ್ಯಕ್ರಮದಲ್ಲಿ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಅಜ್ಜನವರು, ನಿಂಗಯ್ಯ ಪೂಜಾರ, ಎಂ.ಆರ್. ವಿಠ್ಠಪ್ಪನವರ, ಸೋಮೇಶ ಚರೇದ, ಜಗದೀಶ ಭೋಪಳಾಪೂರ, ಫಕಿರಗೌಡ ಪೊಲೀಸಪಾಟೀಲ, ಅಶೋಕ ಶಿದ್ದಲಿಂಗಪ್ಪನವರ, ಎಂ.ಬಿ. ಮಲ್ಲಾಡದ, ಯಲಪ್ಪಆಲೂರ ವೆ. ಬಸವರಾಜ ಹಿರೇಕೊಪ್ಪ, ವೀರಬಸಪ್ಪಅಂದಾನಪ್ಪನವರ ಇತರರು ಇದ್ದರು. ಕಲ್ಲಪ್ಪ ಕಂಬಳಿ ಸ್ವಾಗತಿಸಿದರು. ಚನ್ನಬಸಯ್ಯ ಪೂಜಾರ ಕಾರ್ಯಕ್ರಮ ನಿರೂಪಿದರು. ವಿ.ಎಂ. ತೋಂಟದ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ಮುಚ್ಚಿದರೆ ಸಂಸ್ಕೃತಿ ನಾಶವಾದಂತೆ: ವಾಸರೆ
ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ: ಡಾ. ನಿವಿಯಾ ಗೋಮ್ಸ