ಕನ್ನಡಪ್ರಭ ವಾರ್ತೆ ಭೇರ್ಯಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ನಿರ್ಮಾಣವಾದ ಸಮುದಾಯ ಭವನಗಳು ಜ್ಞಾನ ಸಂಪಾದನೆಯ ಕೇಂದ್ರಗಳಾಗಬೇಕು ಆಗ ಮಾತ್ರ ಸಮಾಜ ಪರಿವರ್ತನೆಯಾಗಿ ಸುಧಾರಣೆ ಆಗಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಬಾಬಾ ಸಾಹೇಬರು ನಮ್ಮೆಲ್ಲರಿಗೂ ಮನೆ ದೇವರಿದ್ದಂತೆ. ಅವರು ರಚಿಸಿಕೊಟ್ಟ ಸಂವಿಧಾನದಿಂದ ಇಂದು ನಾವೆಲ್ಲ ಇಂತಹ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದೇವೆ ಎಂದರು.ಸಂವಿಧಾನ ರಚನಾ ಸಮಿತಿಗೆ ನೇಮಕವಾದ ಹಲವರು ಬಿಟ್ಟು ಹೋದರು. ಆದರೂ ಕೂಡ ಛಲ ಬಿಡದೆ ವಿಶ್ವದ ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ. ಅನೇಕ ಧರ್ಮ, ಜಾತಿ, ಸಂಸ್ಕೃತಿ, ಇತಿಹಾಸವನ್ನು ಹೊಂದಿರುವ ನಮ್ಮ ಭಾರತ ದೇಶಕ್ಕೆ ಬಡವರು, ಶೋಷಿತರು, ಮಹಿಳೆಯರ ಪರವಾಗಿ ಸರ್ವರಿಗು ಸರ್ವಕಾಲಕ್ಕೂ ಸಲ್ಲುವ ಸಂವಿಧಾನವನ್ನು ರಚಿಸಿಕೊಟ್ಟ ಮಹಾತ್ಮ ಅಂಬೇಡ್ಕರ್ ಎಂದು ಅವರು ಗುಣಗಾನ ಮಾಡಿದರು.ಕಾರ್ಯಕ್ರಮವನ್ನು ಕುರಿತು ಬಂತೆಜಿ, ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿದರು. ಮುಸ್ಲಿಂ ಧರ್ಮ ಗುರುಗಳಾದ ಸೂಪಿ ಮಹಮ್ಮದ್, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ತಹಸಿಲ್ದಾರ್ ಜಿ. ಸುರೇಂದ್ರಮೂರ್ತಿ, ಟಿಎಸ್‌ಡಬ್ಯು ಎಚ್.ಎಲ್. ಶಂಕರಮೂರ್ತಿ, ಪಿಡಿಓ ಶಲ್ಯ, ಆರ್‌ಐ ಪ್ರಕಾಶ್, ಗ್ರಾಮ ಆಡಳಿತ ಅಧಿಕಾರಿ ನವೀನ್, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಎಚ್.ಎಸ್. ಸ್ವಾಮಿ, ವೆಂಕಟೇಶ್, ಬ್ಯಾಂಕ್ ಮೋಹನ್, ಕೀರ್ತಿ, ರಾಮಯ್ಯ, ವೆಂಕಟೇಶ್, ಶ್ರೀನಿವಾಸ್, ಹೇಮಂತ್, ನಿರ್ಮಿತಿ ಕೇಂದ್ರದ ಎಇ ಎಂ. ಚೇತನ್ ಕುಮಾರ್ ಭಾಗವಹಿಸಿದ್ದರು.-----------------