ಮುಂದಿನ ವಾರ್ಷಿಕ ಮಹಾಸಭೆ ವೇಳೆಗೆ ನೂತನ ಕಟ್ಟಡ ಉದ್ಘಾಟನೆ: ಅಧ್ಯಕ್ಷ ಸಿ.ಟಿ.ಶಂಕರ್

KannadaprabhaNewsNetwork |  
Published : Sep 17, 2025, 01:05 AM IST
16ಕೆಎಂಎನ್ ಡಿ25 | Kannada Prabha

ಸಾರಾಂಶ

ಸಂಘದಿಂದ ಕಿಸಾನ್ ಕಾರ್ಡ್ ಸಾಲ 3.55 ಕೋಟಿ, ಮಧ್ಯಮಾವಧಿ ಸಾಲ 27 ಲಕ್ಷ ರು, ಸ್ವಸಹಾಯ ಗುಂಪಿನ ಸಾಲ 18 ಲಕ್ಷ ರು. ಹಾಗೂ ಗೊಬ್ಬರ ಮಾರಾಟದಿಂದ 18.50 ಲಕ್ಷ ರು. ವಹಿವಾಟು ಆಗಿದೆ. ಸಂಘದ ನೂತನ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮೀಣ ಪ್ರದೇಶದ ರೈತರ ಅನುಕೂಲಕ್ಕಾಗಿ ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಲಾಭದಾಯಕವಾಗಿ ಮುಂದುವರೆಸಲಾಗುವುದು ಎಂದು ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಹೇಳಿದರು.

ಗ್ರಾಮದ ಸಂಘದ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ 6.50 ಲಕ್ಷ ರು. ಲಾಭಗಳಿಸಿದೆ. ಸಂಘದಲ್ಲಿ 1362 ಮಂದಿ ಸದಸ್ಯರಿದ್ದಾರೆ. ವಾರ್ಷಿಕ 7.53 ಕೋಟಿ ವಹಿವಾಟು ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ಸಂಘದಿಂದ ಕಿಸಾನ್ ಕಾರ್ಡ್ ಸಾಲ 3.55 ಕೋಟಿ, ಮಧ್ಯಮಾವಧಿ ಸಾಲ 27 ಲಕ್ಷ ರು, ಸ್ವಸಹಾಯ ಗುಂಪಿನ ಸಾಲ 18 ಲಕ್ಷ ರು. ಹಾಗೂ ಗೊಬ್ಬರ ಮಾರಾಟದಿಂದ 18.50 ಲಕ್ಷ ರು. ವಹಿವಾಟು ಆಗಿದೆ. ಸಂಘದ ನೂತನ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ವಾರ್ಷಿಕ ಸಭೆ ವೇಳೆಗೆ ಉದ್ಘಾಟನೆಯಾಗಲಿದೆ. ಕಟ್ಟಡದಲ್ಲಿ ಸಭಾಂಗಣ, ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳು ಸೇರಿದಂತೆ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಲಿದೆ ಎಂದರು.

ಈಗಾಗಲೇ ಕಟ್ಟಡ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರು 10 ಲಕ್ಷ ರು. ಅನುದಾನ ನೀಡಿದ್ದಾರೆ. ಸಂಘದಿಂದ ವಾಟ್ಸಪ್ ಗ್ರೂಪ್ ತೆರೆದು ಷೇರುದಾರರಿಗೆ ಸಕಾಲದಲ್ಲಿ ದೊರೆಯುವ ಸಾಲ, ಗೊಬ್ಬರ, ಸಭಾ ಸೂಚನಾ ಪತ್ರ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗ್ರೂಪ್ ತೆರೆಯುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಸಂಘದ ವೇಳೆ ಉಪಾಧ್ಯಕ್ಷ ಬಸವರಾಜು, ನಿರ್ದೇಶಕರಾದ ಮಹದೇವು, ಬೋರೆಗೌಡ, ಶಿವಣ್ಣ, ಜಯಲಕ್ಷ್ಮಮ್ಮ, ಗಂಟಯ್ಯ, ರಘುನಂದನ್, ಮಲ್ಲಿಕಾ, ಕೆ.ಟಿ.ಪ್ರಕಾಶ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಮಣಿ, ಸಿಬ್ಬಂದಿ ಕೃಷ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ