ಕೆಎಸ್ಸಾರ್ಟಿಸಿ : ಬೆಂಗಳೂರು ಬಸ್ ಪ್ರಯಾಣದರ ಕಡಿತ

KannadaprabhaNewsNetwork |  
Published : Jan 04, 2026, 03:15 AM ISTUpdated : Jan 04, 2026, 09:09 AM IST
KSRTC

ಸಾರಾಂಶ

 ಮಂಗಳೂರು ವಿಭಾಗದಿಂದ ಕೆಎಸ್ಸಾರ್ಟಿಸಿ ನಿಗಮದ ಕುಂದಾಪುರ/ ಉಡುಪಿ/ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ವಿವಿಧ ಮಾದರಿಯ ಬಸ್ಸುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10ರಿಂದ ಶೇ.15ರವರೆಗೆ ಪ್ರಯಾಣ ದರಗಳನ್ನು ಕಡಿಮೆಗೊಳಿಸಲಾಗಿದ್ದು, ಜ.5ರಿಂದ ಜಾರಿಗೆ ಬರಲಿದೆ.

ಮಂಗಳೂರು: ಮಂಗಳೂರು ವಿಭಾಗದಿಂದ ಕೆಎಸ್ಸಾರ್ಟಿಸಿ ನಿಗಮದ ಕುಂದಾಪುರ/ ಉಡುಪಿ/ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ವಿವಿಧ ಮಾದರಿಯ ಬಸ್ಸುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10ರಿಂದ ಶೇ.15ರವರೆಗೆ ಪ್ರಯಾಣ ದರಗಳನ್ನು ಕಡಿಮೆಗೊಳಿಸಲಾಗಿದ್ದು, ಜ.5ರಿಂದ ಜಾರಿಗೆ ಬರಲಿದೆ.

ಪ್ರಯಾಣ ದರದ ವಿವರ:

ಅಂಬಾರಿ ಉತ್ಸವ: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ (ಪ್ರತಿ ಪ್ರಯಾಣಿಕರಿಗೆ) 1510 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು- ಉಡುಪಿ 1460 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1350 ರುಪಾಯಿ.ಡ್ರೀಮ್ ಕ್ಲಾಸ್: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1350 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು- ಉಡುಪಿ 1300 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1200 ರುಪಾಯಿ.

ಮಲ್ಟಿ ಆಕ್ಸಿಲ್- 2.0: 

ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1310 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು– ಉಡುಪಿ 1250 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1150 ರುಪಾಯಿ.ಮಲ್ಟಿ ಆಕ್ಸಿಲ್: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1110 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು– ಉಡುಪಿ 1060 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1000 ರುಪಾಯಿ.ನಾನ್ ಎಸಿ ಸ್ಲೀಪರ್: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1050 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1000 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 900 ರುಪಾಯಿ.

ಪಲ್ಲಕ್ಕಿ ನಾನ್ ಎಸಿ ಸ್ಲೀಪರ್: 

ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1100 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1060 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 950 ರುಪಾಯಿ.

ರಾಜಹಂಸ: 

ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 750 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 700 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 650 ರುಪಾಯಿ ಎಂದು ಮಂಗಳೂರು ಕೆಎಸ್ಸಾರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು