- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕ ಶಾಂತನಗೌಡ ಚಾಲನೆ
ಹೊನ್ನಾಳಿ: ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬಡವರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ದೇಶದಲ್ಲಿನ ಇತರೆ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು ಸಂತಸದ ಸಂಗತಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಸೋಮವಾರ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾದ ಹೊನ್ನಾಳಿ- ಬೆನಕನಹಳ್ಳಿ- ಕೈಮರ- ದಾಗಿನಕಟ್ಟೆ- ಕತ್ತಲಗೆರೆ ಬಸವಾಪಟ್ಟಣ ಮಾರ್ಗ ಮೂಲಕ ದಾವಣಗೆರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬೆಳಗ್ಗೆ ಹೊನ್ನಾಳಿಯಿಂದ ಈ ಮಾರ್ಗವಾಗಿ ದಾವಣಗೆರೆಗೆ 4 ಸಿಂಗಲ್ ಟ್ರಿಪ್ ಮಾಡಿ ನಂತರ ಸಂಜೆ 6 ಗಂಟೆಗೆ ಹೊನ್ನಾಳಿಯಿಂದ ಶಿವಮೊಗ್ಗ ತಲುಪಿ, ಸಂಜೆ 7 ಗಂಟೆಗೆ ಶಿವಮೊಗ್ಗದಿಂದ ಹೊನ್ನಾಳಿಗೆ ರಾತ್ರಿ 8 ಗಂಟೆಗೆ ಬಂದು ತಲುಪಲಿದೆ. ಜನತೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಕಾಂಗ್ರೆಸ್ ಹೊನ್ನಾಳಿ ಬ್ಲಾಕ್ ಅಧಕ್ಷ್ಯ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ, ಕೆಎಸ್‌ಆರ್‌ಟಿಸಿ ಡಿಪೋ ವ್ವವಸ್ಥಾಪಕ ರಾಮಚಂದ್ರಪ್ಪ, ಮೇಲ್ವಿಚಾರಕ ಮಂಜುನಾಥ ಸೇರಿದಂತೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಇದ್ದರು.
-22ಎಚ್.ಎಲ್.ಐ2: