ಕನ್ನಡಪ್ರಭ ವಾರ್ತೆ ಗುಬ್ಬಿ
ಗುಬ್ಬಿ ಪಟ್ಟಣದ 18 ಕೋಮಿನ ಜನರು ಚಿಂತನೆ ಮಾಡಿ ಈ ಮಠಕ್ಕೆ ಸ್ವಾಮಿಗಳನ್ನು ನೇಮಕ ಮಾಡಬೇಕೆಂದು ತೀರ್ಮಾನಿಸಲಾಗಿ ಶ್ರೀ ಚಂದ್ರಶೇಖರದೇಶಿಕೇಂದ್ರ ಸ್ವಾಮಿಗಳನ್ನು ಈ ಮಠಕ್ಕೆ ಉತ್ತರಾಧಿಕಾರಿಯಾಗಿ ಜೂನ್ 11 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಏಳು ಜನ ಸ್ವಾಮೀಜಿಗಳ ಸಮ್ಮುಖದಲ್ಲಿ ಪಟ್ಟಾಧಿಕಾರ ನಡೆಯಲಿದೆ.
ಜೂನ್ 11ರಂದು ಬುಧವಾರ ಚಿಕ್ಕತೊಟ್ಲುಕೆರೆ ಶ್ರೀ ಅಟವಿ ಶಿವಲಿಂಗ ಸ್ವಾಮೀಜಿ , ಶ್ರೀ ಸದಾಶಿವ ಸ್ವಾಮೀಜಿ, ಸಿದ್ದಗಂಗಾ ಮಠ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಜಿ, ಹಾಗೂ 18 ಕೋಮುವಿನ ಸಮಸ್ತ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಚಂದ್ರಶೇಖರ್ ದೇಶಿ ಕೇಂದ್ರ ಸ್ವಾಮಿಗಳ ಮಹೋತ್ಸವ ಚರ ಪಠಾಧಿಕಾರ ಮಹೋತ್ಸವ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ. ಜೂನ್ 12ರಂದು ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಸಂಸ್ಕಾರಗಳು ನಡೆಯುತ್ತವೆ. ಶ್ರೀ ಅಟವಿ ಚನ್ನಬಸವ ಸ್ವಾಮಿಗಳು ಎಂದು ನಾಮಕರಣ , ಪಾದಪೂಜೆ, ಪಾದೋದಕ ಪ್ರಸಾದ ನಡೆಯುತ್ತದೆ. ಧಾರ್ಮಿಕ ಕಾರ್ಯಕ್ರಮದ ನಂತರ ಶ್ರೀಗಳನ್ನು ಪಲ್ಲಕ್ಕಿ ಉತ್ಸವದಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಮಾಡಲಾಗುತ್ತದೆ ಹಾಗೂ ದಾಸೋಹ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ಕಾರ್ಯಕ್ರಮಕ್ಕೆ ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ .ಸೋಮಣ್ಣ , ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಶಾಸಕ ಎಸ್ ಆರ್ ಶ್ರೀನಿವಾಸ್, ಮಾಜಿ ಸಂಸದ ಜಿ.ಎಸ್.ಬಸವರಾಜು ಇತರರು ಭಾಗವಹಿಸಸುವರು.