ನವದೆಹಲಿ: ಮೂರು ದಿನಗಳ ‘ಪ್ರಸನ್ನಾಭಿವಂದನಮ್‌’ಗೆ ಚಾಲನೆ

KannadaprabhaNewsNetwork |  
Published : Oct 31, 2023, 01:15 AM IST
ನವದೆಹಲಿಯಲ್ಲಿ ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿ ಪ್ರಸನ್ನಾಭಿವಂದನಮ್ ಗೆ ಚಾಲನೆ | Kannada Prabha

ಸಾರಾಂಶ

ಶ್ರೀಗಳನ್ನು ನಗರದಲ್ಲಿ ಶ್ರೀಹರಿ ಭಟ್ , ನವನೀತ್ ಕಠಾನಾ ಮೊದಲಾದವರ ಸಂಯೋಜನೆಯಲ್ಲಿ ಶೋಭಾಯಾತ್ರೆಯ ಮೂಲಕ ಬರಮಾಡಿಕೊಳ್ಳಲಾಯಿತು. ಮಠದ ಆವರಣದಲ್ಲಿ ಶ್ರೀಗಳು ಮತ್ತು ಗಣ್ಯರು ಸಸಿಗಳನ್ನು ನೆಟ್ಟರು.

ಕನ್ನಡಪ್ರಭ ವಾರ್ತೆ ಉಡುಪಿ ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಠ್ಯಬ್ದಿ ಪ್ರಯುಕ್ತ ನವದೆಹಲಿಯಲ್ಲಿ ಅಭಿಮಾನಿಗಳು ಮತ್ತು ಶಿಷ್ಯರು ಸಂಯೋಜಿಸಿರುವ ಮೂರು ದಿನಗಳ ಪ್ರಸನ್ನಾಭಿವಂದನಮ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಭಾರತೀಯ ಭಾಷಾ ಅಧ್ಯಯನ ಸಮಿತಿ ಅಧ್ಯಕ್ಷ ಪ್ರೊ.ಚ. ಮೂ. ಕೃಷ್ಣಶಾಸ್ತ್ರಿ ಉದ್ಘಾಟಿಸಿದರು. ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಅಲೋಕ್ ಕುಮಾರ್, ಉದ್ಯಮಿ ರಮೇಶ್ ವಿಗ್, ಗುವಾಹಟಿಯ ಕುಮಾರ ಭಾಸ್ಕರ ವರ್ಮ ಸಂಸ್ಕೃತ ಮತ್ತು ಪುರಾತನ ಅಧ್ಯಯನ ವಿ.ವಿ. ಉಪಕುಲಪತಿ ಡಾ.ಪ್ರಹ್ಲಾದ್ ಜೋಶಿ, ನವದೆಹಲಿಯ ಪೂರ್ಣಪ್ರಜ್ಞ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಎ.ವಿ.ನಾಗಸಂಪಿಗೆ, ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿ.ವಿ. ಉಪಕುಲಪತಿ ಡಾ. ಮುರಲಿಮನೋಹರ ಪಾಠಕ್, ದೆಹಲಿ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ವಿಠೋಬಾಚಾರ್ಯ, ವಿದ್ವಾನ್ ಆನಂದತೀರ್ಥಾಚಾರ್ಯ, ದೆಹಲಿ ವಿಹಿಂಪ ಪ್ರಾಂತ ಕಾರ್ಯದರ್ಶಿ ಸುರೇಂದ್ರ ಗುಪ್ತಾ ಸೇರಿದಂತೆ ಅನೇಕ ಮಹನೀಯರು ಉಪಸ್ಥಿತರಿದ್ದರು. ಕೇಂದ್ರೀಯ ಸಂಸ್ಕೃತ ವಿ.ವಿ. ಉಪಕುಲಪತಿ ಹಾಗೂ ಉತ್ಸವ ಸಮಿತಿ ಪ್ರಧಾನ‌ ಕಾರ್ಯದರ್ಶಿ ಡಾ.ಶ್ರೀನಿವಾಸಾಚಾರ್ಯ ವರಖೇಡಿ ಸ್ವಾಗತಿಸಿರು. ವಿದ್ವಾನ್ ನಾರಾಯಣಾಚಾರ್ಯ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಮೊದಲು ಶ್ರೀಗಳನ್ನು ನಗರದಲ್ಲಿ ಶ್ರೀಹರಿ ಭಟ್ , ನವನೀತ್ ಕಠಾನಾ ಮೊದಲಾದವರ ಸಂಯೋಜನೆಯಲ್ಲಿ ಶೋಭಾಯಾತ್ರೆಯ ಮೂಲಕ ಬರಮಾಡಿಕೊಳ್ಳಲಾಯಿತು. ಮಠದ ಆವರಣದಲ್ಲಿ ಶ್ರೀಗಳು ಮತ್ತು ಗಣ್ಯರು ಸಸಿಗಳನ್ನು ನೆಟ್ಟರು. ಮಂಗಳವಾರ ಈ ಕಾರ್ಯಕ್ರಮದಂಗವಾಗಿ ಭಗವದ್ಗೀತಾ ಜೀವನ್ಮಾರ್ಗದರ್ಶಿನಿ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ಅನೇಕ ವಿದ್ಯಾಪೀಠ ಹಾಗೂ ಸಂಸ್ಕೃತ ವಿ.ವಿ. ಪ್ರಾಧ್ಯಾಪಕರು ವಿದ್ವಾಂಸರು ಭಾಗವಹಿಸಲಿರುವರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ