ರೇಣುಕಾ ಆಸ್ಪತ್ರೆಯಲ್ಲಿ ಬಡವರಿಗಾಗಿ ನೂತನ ಡಯಾಲಿಸಿಸ್ ಕೇಂದ್ರ ಪ್ರಾರಂಭ

KannadaprabhaNewsNetwork |  
Published : Jun 28, 2025, 12:23 AM IST
ರೇಣುಕಾ ಆಸ್ಪತ್ರೆಯಲ್ಲಿ ಬಡವರಿಗಾಗಿ ನೂತನ ಡಯಾಲಿಸಿಸ್ ಕೇಂದ್ರ ಪ್ರಾರಂಭ | Kannada Prabha

ಸಾರಾಂಶ

ಇವತ್ತಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಬಡವರಿಗಾಗಿ ಇದನ್ನು ತೆರೆಯಲಾಗಿದ್ದು, ರೋಗಿಗಳು ಡಯಾಲಿಸಿಸ್ ಕೇಂದ್ರದ ಉಪಯೋಗ ಪಡೆದುಕೊಳ್ಳಲಿ.

ಸಿದ್ದರಬೆಟ್ಟ ರೋಟರಿಸಂಸ್ಥೆಯಿಂದ ಡಯಾಲಿಸಿಸ್ ಕೇಂದ್ರ

ಕನ್ನಡಪ್ರಭ ವಾರ್ತೆ ಕೊರಟಗೆರೆ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದ್ದು, ಇದು ನಮ್ಮದು ಎಂಬ ಭಾವನೆ ಜನರಲ್ಲಿ ಬರಬೇಕಿದೆ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದ ರೇಣುಕಾ ಆಸ್ಪತ್ರೆಯಲ್ಲಿ ಸಿದ್ಧರಬೆಟ್ಟ ರೋಟರಿ ಸಂಸ್ಥೆ ವತಿಯಿಂದ ನೀಡಲಾದ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದರು.

ಪಟ್ಟಣದ ರೇಣುಕಾ ಆಸ್ಪತ್ರೆಯಲ್ಲಿ ತೆರೆದಿರುವ ಡಯಾಲಿಸಿಸ್ ಕೇಂದ್ರಕ್ಕೆ ಸಿದ್ಧರಬೆಟ್ಟದ ರೋಟರಿ ಸಂಸ್ಥೆ ಯಂತ್ರಗಳನ್ನು ಉಚಿತವಾಗಿ ನೀಡಿದ್ದು, ಈ ಕೇಂದ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಈ ಕಾರ್ಯವನ್ನು ಆಸ್ಪತ್ರೆಯ ವೈದ್ಯರಾದ ಡಾ.ಮಲ್ಲಿಕಾರ್ಜುನ್ ರವರು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬ ನಂಬಿಕೆ ನಮ್ಮೆಲ್ಲರದ್ದು, ಪಾವಗಡದ ನಮ್ಮ ಆಶ್ರಮದಿಂದ ಇಲ್ಲಿವರೆಗೂ ೫೦ ಸಾವಿರ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ. ೬೫೦ ಅಂಗವಿಕಲ ನಿವಾರಣೆ, ಸಾವಿರಾರು ಜನರ ಕುಷ್ಠರೋಗ ನಿವಾರಣೆ, ಜಿಲ್ಲೆಯಲ್ಲಿ ೪ ಸಾವಿರ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದು, ನಾವೆಲ್ಲರೂ ಈ ಜಿಲ್ಲೆಯ ಸಿದ್ಧಗಂಗಾ ಶ್ರೀಗಳ ಆದರ್ಶ ಪಾಲಕರಾಗಿದ್ದೇವೆ ಎಂದರು.

ಶಾಕಾಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಡವರು ಡಯಾಲಿಸಿಸ್ ಮಾಡಿಸಿಕೊಳ್ಳುವುದು ತುಂಬಾ ಕಷ್ಟಕರ, ಅದಕ್ಕಾಗಿ ಅತಿ ಕಡಿಮೆ ಬೆಲೆಯಲ್ಲಿ ಈ ಚಿಕಿತ್ಸೆ ನೀಡಲಿದ್ದು, ಅದನ್ನೂ ಕಟ್ಟಲಾಗದ ಬಡವರಿಗೆ ರೋಟರಿ ಸಂಸ್ಥೆ ಸಹಾಯ ಮಾಡುತ್ತದೆ. ಆದರೆ ಉಳ್ಳವರು ಹಣ ನೀಡಿ ಮಾಡಿಸಿಕೊಂಡರೆ ಬಡವರಿಗೆ ಅನುಕೂಲವಾಗುತ್ತದೆ. ಸಿದ್ಧರಬೆಟ್ಟದ ರೋಟರಿ ಸಂಸ್ಥೆಯಿಂದ ಹಲವಾರು ಸಾಮಾಜಿಕ ಕೆಲಸ ನಡೆದಿವೆ ಎಂದರು.

ಎಲೆರಾಂಪುರದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಇವತ್ತಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಬಡವರಿಗಾಗಿ ಇದನ್ನು ತೆರೆಯಲಾಗಿದ್ದು, ರೋಗಿಗಳು ಡಯಾಲಿಸಿಸ್ ಕೇಂದ್ರದ ಉಪಯೋಗ ಪಡೆದುಕೊಳ್ಳಲಿ ಎಂದರು.

ರೇಣುಕಾ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ್, ಡಾ.ರೇಣುಕಾ, ತಹಸೀಲ್ದಾರ್ ಮಂಜುನಾಥ್, ಬಿಕೆಎಫ್ ಅಧ್ಯಕ್ಷ ಶ್ರೀರಾಮ್, ಡಾ.ಲಕ್ಷ್ಮೀಕಾಂತ್, ಡಾ.ಆತ್ಮರಾಮ್ ಶಟ್ಟಿ, ರೋಟರಿ ಸಂಸ್ಥೆಯ ಗೌರ್ನರ್ ಮಹಾದೇವ ಪ್ರಸಾದ್, ತಾಲೂಕು ಅಧ್ಯಕ್ಷ ಕೆ.ಎನ್.ರಘು, ದರ್ಶನ್ ಬಾಲಾಜಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ