ಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಚಿಕ್ಕಮಗಳೂರು-ಬಾಳೆಹೊನ್ನೂರು-ಎನ್.ಆರ್.ಪುರ ಮಾರ್ಗವಾಗಿ ಬಹುದಿನಗಳಿಂದ ಬೇಡಿಕೆಯಿದ್ದ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯಕ್ಕೆ ಶಾಸಕರ ಸತತ ಪ್ರಯತ್ನದಿಂದ ಚಾಲನೆ ನೀಡಲಾಗಿದೆ ಎಂದು ಎನ್.ಆರ್.ಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಹೇಳಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಚಿಕ್ಕಮಗಳೂರು-ಬಾಳೆಹೊನ್ನೂರು-ಎನ್.ಆರ್.ಪುರ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು ಮೂಲಕ ಎನ್.ಆರ್. ಪುರಕ್ಕೆ ಈ ಹಿಂದೆ ಕೇವಲ ಒಂದು ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಮಾತ್ರ ಸಂಜೆ ವೇಳೆಗೆ ಇತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತಲ್ಲದೇ, ರಾಜ್ಯ ಸರ್ಕಾರದ ಜನಪ್ರಿಯ ಶಕ್ತಿ ಯೋಜನೆ ಸೌಲಭ್ಯ ಪಡೆದ ಮಹಿಳಾ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು.
ಬಾಳೆಹೊನ್ನೂರು-ಎನ್.ಆರ್.ಪುರ ಮಾರ್ಗವಾಗಿ ಸಂಚರಿಸುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಅಂಗವಿಕಲರು ಮುಂತಾದವರು ರಿಯಾಯಿತಿ ದರದ ಪಾಸ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೂ ಸಹ ಸಮಸ್ಯೆಯಾಗಿತ್ತು. ಸಾರ್ವಜನಿ ಕರಿಂದ ಈ ಬಗ್ಗೆ ಸಾಕಷ್ಟು ಬೇಡಿಕೆಯೂ ಬಂದಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ, ಕ್ಷೇತ್ರದ ಶಾಸಕರು ಸತತವಾಗಿ ಪ್ರಯತ್ನಿಸಿ ಹೊಸ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಬಸ್ ನಿತ್ಯವೂ ಬೆಳಿಗ್ಗೆ 7 ಗಂಟೆಗೆ ಚಿಕ್ಕಮಗಳೂರಿನಿಂದ ಹೊರಟು ಬಾಳೆಹೊನ್ನೂರು ಬಸ್ ನಿಲ್ದಾಣವನ್ನು ಬೆಳಿಗ್ಗೆ 9 ಗಂಟೆಗೆ ಬಂದು, 10 ಗಂಟೆಗೆ ಎನ್.ಆರ್.ಪುರಕ್ಕೆ ತಲುಪಲಿದೆ. ಈ ಬಸ್ ನಿತ್ಯವೂ 3 ಅಥವಾ 4 ಟ್ರಿಪ್ ನಡೆಸಲಿದ್ದು, ಮುಂದಿನ ಹದಿನೈದು ದಿನದಲ್ಲಿ ಮತ್ತೊಂದು ಬಸ್ಸನ್ನು ಈ ಮಾರ್ಗದಲ್ಲಿ ಓಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಬಿ.ಕೆ.ಮಧುಸೂದನ್, ಶಶಿಕಲಾ ಉಮೇಶ್, ಸರಿತಾ, ಪಿಸಿಎಆರ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಸ್.ಕೌಶಿಕ್ ಪಟೇಲ್, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅರುಣ್‌ಕುಮಾರ್, ಟಿ.ಟಿ.ಇಸ್ಮಾಯಿಲ್, ಹೂವಮ್ಮ, ಶೃಂಗೇರಿ ತಾಲೂಕು ಸಮಿತಿ ಅಧ್ಯಕ್ಷ ರಾಜು, ಎಂ.ಆರ್.ರವಿಗೌಡ, ಕಾರ್ತಿಕ್ ಕಾರ್‌ಗದ್ದೆ ಮತ್ತಿತರರು ಇದ್ದರು.೨೬ಬಿಹೆಚ್‌ಆರ್ ೩:ಬಾಳೆಹೊನ್ನೂರು-ಎನ್.ಆರ್.ಪುರ ಮಾರ್ಗದ ನೂತನ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಚಾಲನೆ ನೀಡಿದರು. ರವಿಚಂದ್ರ, ಮಧುಸೂದನ್, ಶಶಿಕಲಾ, ಸರಿತಾ, ಕೌಶಿಕ್ ಪಟೇಲ್, ಜಯಪ್ರಕಾಶ್ ಇದ್ದರು.