ಕನ್ನಡಪ್ರಭ ವಾರ್ತೆ ಮೈಸೂರು
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೈನೋದ್ಯಮ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಅದರಲ್ಲೂ ಹಾಲಿನ ದರದಲ್ಲಿ ಬರುವ ಲಾಭಾಂಶದಲ್ಲಿ ಹೆಚ್ಚಿನ ಭಾಗವನ್ನು ರೈತರಿಗೆ ನೀಡುತ್ತದೆ. ಅಲ್ಲದೆ, ಅವರಿಂದ ಹಾಲನ್ನು ಪಡೆದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದೇವೆ. ಆ ಮೂಲಕ ಹೈನೋದ್ಯಮವನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತದೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ಸಹಕಾರದಿಂದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಹೇಳಿದರು.
ಮೈಸೂರು ಹಾಲು ಒಕ್ಕೂಟಗಳ ಸಹಕಾರ ಸಂಘದ ಅಧ್ಯಕ್ಷ ಆರ್. ಚೆಲುವರಾಜ, ನಿರ್ದೇಶಕರಾದ ಕೆ. ಉಮಾಶಂಕರ, ಲೀಲಾ ಬಿ.ಕೆ. ನಾಗರಾಜ್, ಬಿ. ಗುರುಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್, ಪಿ ಅಂಡ್ ಐ ವ್ಯವಸ್ಥಾಪಕ ಕರಿಬಸವರಾಜ್, ಮೂಡಲಹುಂಡಿ ರವಿಕುಮಾರ್, ಸಂಘದ ಅಧ್ಯಕ್ಷ ಎಂ. ಮುದ್ದುಬಸವ, ವಿಸ್ತಾರಣಾಧಿಕಾರಿ ಡಾ.ಎಂ. ಪರಮೇಶ್, ಡಾ. ಶಿವಕುಮಾರ್, ರಮ್ಯಶ್ರೀ, ಮೇಘನಾ, ಮೈಮುಲ್ ತಾಲೂಕು ಮೇಲ್ವಿಚಾರಕ ಎಸ್. ಸಂತೋಷ್ ಕುಮಾರ್, ಸಂಘದ ಉಪಾಧ್ಯಕ್ಷ ಎಂ. ಮಹದೇವಸ್ವಾಮಿ, ಎಂ.ಟಿ. ರವಿಕುಮಾರ್, ಸಾಕಪ್ಪ, ಎಂ. ರಾಜು, ಮಾಕಣ್ಣ, ಎಸ್. ಮಹದೇವಸ್ವಾಮಿ, ಕೆ. ಬಸವರಾಜು, ನವೀನಕುಮಾರಿ, ಭಾಗ್ಯಾ ಮೊದಲಾದವರು ಇದ್ದರು.