ಕನ್ನಡಪ್ರಭ ವಾರ್ತೆ ಉಡುಪಿ
ಈ ರಥವು ಭಾನುವಾರ ಶ್ರೀ ಕ್ಷೇತ್ರವನ್ನು ತಲುಪಿದ್ದು, ಶೋಭಾ ಯಾತ್ರೆಯಲ್ಲಿ ತರಲಾದ ರಥವು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆಗೈದು ಮುಖ್ಯರಸ್ತೆಯಾಗಿ ಸಾಗಿ ಬಂದು ಶ್ರೀ ಶನಿ ಕ್ಷೇತ್ರಕ್ಕೆ ಬಂದು ತಲುಪಿತು
ಚಂದ್ರಮಂಡಲ ರಥದ ಶೋಭಾ ಯಾತ್ರೆಯಲ್ಲಿ ತಟ್ಟಿರಾಯ, ಕೀಲುಕುದುರೆ, ಬಿರುದಾವಳಿ, ಚಂಡೆವಾದನ, ಕುಣಿತ ಭಜನೆ, ಶ್ರೀ ಮದ್ವಾಚಾರ್ಯ ಸ್ಥಬ್ಧಚಿತ್ರ, ಮಂಗಳವಾದ್ಯ ಗಳೊಂದಿಗೆ ನೂರಾರು ಭಕ್ತರು ಭಾಗವಹಿಸಿದ್ದರು. ನಂತರ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳಾದ ರಥಶುದ್ಧಿ ರಥಾದಿವಸ, ರಥ ಸಮರ್ಪಣೆ ಪೂಜೆಗಳನ್ನು ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ, ವಿಜಯಲಕ್ಷ್ಮೀ ಆಚಾರ್ಯ, ಪ್ರಹ್ಲಾದ ಆಚಾರ್ಯ, ಪೂರ್ಣಿಮಾ ಆಚಾರ್ಯ, ಯತೀಶ್ ಆಚಾರ್ಯ ಹಾಗೂ ನೂರಾರು ಭಕ್ತರೂ ಉಪಸ್ಥಿತರಿದ್ದರು. ಇಂದು (ಮೇ 26ರಂದು) ಸಗ್ರಹಮಖ ಶನಿಶಾಂತಿ, ನರಸಿಂಹ ಯಾಗ, ಶನೈಶ್ವರ ಉತ್ಸವ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಚಕ್ರಾಬ್ದ ಮಂಡಲ ಪೂಜೆ ಬಳಿಕ ನೂತನ ರಥದಲ್ಲಿ ಶ್ರೀ ಶನೈಶ್ವರ ದೇವರ ರಥೋತ್ಸವ ನಡೆಯಲಿದೆ.