ಬಾಣಸಮುದ್ರದಲ್ಲಿ ನೂತನ ನಾಗರಕಲ್ಲು ಪ್ರತಿಷ್ಠಾಪನೆ

KannadaprabhaNewsNetwork |  
Published : May 02, 2025, 12:10 AM IST
1ಕೆಎಂಎನ್ ಡಿ11 | Kannada Prabha

ಸಾರಾಂಶ

ಬಾಣಸಮುದ್ರ ಗ್ರಾಮದ ಚೌಡೇಗೌಡರ ಪುತ್ರ ಸಿದ್ದೇಗೌಡರು ಜನರಿಗೆ ಒಳ್ಳೆಯದಾಗಲಿ, ಯಾವುದೇ ರೋಗ ರುಜನೆಗಳು ಬರದಂತೆ ತಡೆಗಟ್ಟುವುದು, ಅಭಿವೃದ್ಧಿ ಕಾರ್ಯಗಳು ನೆರವೇರಲಿ ಎಂದು ಪ್ರಾರ್ಥಿಸಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಬಾಣಸಮುದ್ರ ಗ್ರಾಮದಲ್ಲಿ ನೂತನ ನಾಗರಕಲ್ಲು ಪ್ರತಿಷ್ಠಾಪನೆ ಕಾರ್ಯ ನಡೆಯಿತು.

ಗ್ರಾಮದ ಚೌಡೇಗೌಡರ ಪುತ್ರ ಸಿದ್ದೇಗೌಡರು ಜನರಿಗೆ ಒಳ್ಳೆಯದಾಗಲಿ, ಯಾವುದೇ ರೋಗ ರುಜನೆಗಳು ಬರದಂತೆ ತಡೆಗಟ್ಟುವುದು, ಅಭಿವೃದ್ಧಿ ಕಾರ್ಯಗಳು ನೆರವೇರಲಿ ಎಂದು ಪ್ರಾರ್ಥಿಸಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮದ ಮುಖಂಡ ಬಿ.ಟಿ.ರಮೇಶ್ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ನಾಗರಕಲ್ಲು ಪ್ರತಿಷ್ಠಾಪಿಸಲಾಗಿತ್ತು. ಗ್ರಾಮದಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆಸಲು ಹೊರ ಗ್ರಾಮಗಳಿಂದ ದೇವರ ಬಸವಗಳನ್ನು ಕರೆತರಲಾಗುತ್ತಿತ್ತು. ಆ ಬಸವಗಳು ಇದೇ ಸ್ಥಳದಲ್ಲಿ ಹೆಚ್ಚು ನಿಲ್ಲುತ್ತಿದ್ದವು. ಆದ್ದರಿಂದ ಸಿದ್ದೇಗೌಡರು ನೂತನವಾಗಿ ನಾಗರಕಲ್ಲು ಪ್ರತಿಷ್ಠಾಪಿಸಲು ಸಹಕಾರಿಯಾಗಿದ್ದಾರೆ ಎಂದರು.

ಚಂದ್ರ ಕುಮಾರ ಆರಾಧ್ಯ, ರಮೇಶ್ ಆರಾಧ್ಯ ಅವರ ನೇತೃತ್ವದಲ್ಲಿ ಹೋಮ ಹವನಗಳನ್ನು ನಡೆಸಿ ನಾಗರಕಲ್ಲನ್ನು ಗುರುವಾರ ಬೆಳಗ್ಗೆ ನೂತನವಾಗಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.

ಅರ್ಚಕ ರಮೇಶ್ ಮಾತನಾಡಿ, ಇಂದಿನಿಂದ 48 ದಿವಸಗಳ ಕಾಲ ಪೂಜೆ, ಪುನಸ್ಕಾರಗಳನ್ನು ಭಕ್ತಿಯಿಂದ ನಡೆಸಿಕೊಂಡು ಹೋಗಿ. ನಿಮ್ಮ ಗ್ರಾಮಕ್ಕೆ ಹಾಗೂ ನಿಮಗೆ ಆರೋಗ್ಯ, ಐಶ್ವರ್ಯ ವೃದ್ಧಿಯಾಗಲಿದೆ ಎಂದರು.

ಈ ವೇಳೆ ಬಸವರಾಜು (ಭುವನ) ರಮೇಶ, ಪ್ರಕಾಶ, ಶಿವರಾಜು, ಸಿದ್ದೇಗೌಡ, ನವೀನ, ಸಿದ್ದು, ಸೌಮ್ಯ, ಶೋಭಾ ಶ್ರೀ, ಯೋಗೇಶ್‌, ದೇವರಾಜು, ಮಹದೇವ, ಧರ್ಮೇಶ ರವಿಕುಮಾರ್, ಬಿ.ಟಿ.ರಮೇಶ್ ಸೇರಿದಂತೆ ಇತರರು ಇದ್ದರು.

೮ರಂದು ಶ್ರೀ ಶನೇಶ್ವರಸ್ವಾಮಿ ನೂತನ ದೇಗುಲ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ಸಬ್ಬನಹಳ್ಳಿಯಲ್ಲಿ ಮೇ ೭ ಮತ್ತು ೮ ರಂದು ಶ್ರೀಶನೇಶ್ವರ ಸ್ವಾಮಿ ನೂತನ ದೇವಾಲಯ ಉದ್ಘಾಟನೆ, ೪೩ನೇ ವಾರ್ಷಿಕೋತ್ಸವ, ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೇ ೭ರಂದು ಸಂಜೆ ದೇವಾಲಯದ ಮುಂಭಾಗ ಧ್ವಜಾರೋಹಣ, ದೈವಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಮೇ ೮ರಂದು ಮೂಲ ವಿಗ್ರಹ ಸ್ಥಾಪನೆ, ಕಳಧಾನ, ಕಳಸ ಸ್ಥಾಪನೆ, ನೇತ್ರೋಮ್ಮಿಲನ, ದಿಗ್ಬಲಿ, ಪ್ರಧಾನ ಕಳಸ ಕದಳಿಛೇದನ, ಪೂರ್ಣಾಹುತಿ ನಡೆಯಲಿದೆ. ಶ್ರೀ ಸೀತಾಳಲಿಂಗೇಶ್ವರ ಸನ್ನಿಧಿಯಿಂದ ಉತ್ಸವ ಆರಂಭವಾಗಿ ಬಾಯಿಬೀಗ, ಮುಡಿ ಸಲ್ಲಿಸುವ ಕಾರ್ಯದೊಂದಿಗೆ ಪೂಜಾ ಕುಣಿತ ನಡೆಯಲಿದೆ. ಮಧ್ಯಾಹ್ನ ೧.೩೦ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೯ ಗಂಟೆಗೆ ಶ್ರೀಶನೇಶ್ವರ ಪ್ರಭಾವ ನಾಟಕ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ