New order for the release of water from the Bhadra Dam!
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೀರು ಬಿಡುಗಡೆಗೆ ವಿರೋಧದ ಹೋರಾಟದ ಬೆನ್ನಲ್ಲೇ ಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ಆದೇಶ ಮಾರ್ಪಡಿಸಿದ ರಾಜ್ಯ ಸರ್ಕಾರ ಭದ್ರಾ ಎಡದಂಡೆ ಕಾಲುವೆಗೆ ಮಾತ್ರ ನೀರು-ಬಲದಂಡೆಗೆ ಸದ್ಯಕ್ಕೆ ಇಲ್ಲ ಎಂಬ ಹೊಸ ಆದೇಶ ಜಲಸಂಪನ್ಮೂಲ ಇಲಾಖೆ ಹೊರಡಿಸಿದೆ. ಹಿಂದಿನ ಆದೇಶ-16.11.2026 ರ ಪತ್ರದಲ್ಲಿ ಎರಡೂ ಕಾಲುವೆಗಳಿಗೆ ನೀರು ಹರಿಸಲು ಸೂಚನೆ ಇತ್ತು! ಈಗ ಸಚಿವರ ಹೊಸ ಟಿಪ್ಪಣಿ - 19.11.2026 ರಂದು ಆದೇಶವನ್ನು ಭಾಗಶಃ ಮಾರ್ಪಡಿಸಲಾಗಿದೆ. ಎಡದಂಡೆ ಕಾಲುವೆಗೆ ಮಾತ್ರ 380 ಕ್ಯುಸೆಕ್ ನಂತೆ 10 ದಿನಗಳವರೆಗೆ ನೀರು ಹರಿಸಬೇಕು ಎಂದು ಮಾರ್ಪಾಡು ಮಾಡಿ, ಕರ್ನಾಟಕ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಿಗೆ ಜಲಸಂಪನ್ಮೂಲ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಶುಭಾ ಕೆ., (ತಾಂತ್ರಿಕ-1), ಸಹಿ ಇರುವ ಪತ್ರ ಪತ್ರ ಕಳುಹಿಸಲಾಗಿದೆ. ಬಲದಂಡೆ ಕಾಲುವೆಗೆ ಸದ್ಯಕ್ಕೆ ನೀರು ಹರಿಸುವ ಆದೇಶವಿಲ್ಲ. ಅದನ್ನು ತಡೆಹಿಡಿಯಲಾಗಿದ್ದು, ಭದ್ರಾ ಅಚ್ಚುಕಟ್ಟಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸುವ ಬಗ್ಗೆ ಮುಂದೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು ಎಂದು ಆದೇಶದಲ್ಲಿ ಸೂಚನೆ ನೀಡಿದೆ. ಲಭ್ಯವಿರುವ ನೀರನ್ನು ಆಧರಿಸಿ, ಸಭೆಯ ತೀರ್ಮಾನದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.