ಕುಮಾರಗಿರಿ ದೇವಾಲಯಕ್ಕೆ ನೂತನ ಮರದ ರಥ ಹಸ್ತಾಂತರ

KannadaprabhaNewsNetwork |  
Published : Apr 02, 2026, 01:45 AM IST
ಸ | Kannada Prabha

ಸಾರಾಂಶ

ಚಿಕ್ಕಮಗಳೂರುನಗರದ ಉದ್ಯಮಿ ಶ್ರೀ ವೆಂಕಟರಾಮು ಮತ್ತು ಅವರ ಮಗ ಅಯ್ಯಪ್ಪ ಕುಟುಂಬವರು ತಾಲೂಕಿನ ಮಲ್ಲೇನಹಳ್ಳಿಯ ಕುಮಾರಗಿರಿ ದೇವಸ್ಥಾನಕ್ಕೆ ಮರದ ರಥವನ್ನು ಹಸ್ತಾಂತರಿಸುವ ಕಾರ್ಯಕ್ರಮ ಸೋಮವಾರ ನಡೆಯಿತು.

ಉದ್ಯಮಿ ಶ್ರೀ ವೆಂಕಟರಾಮು, ಅವರ ಮಗ ಅಯ್ಯಪ್ಪಕುಟುಂಬದ ಕೊಡುಗೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಉದ್ಯಮಿ ಶ್ರೀ ವೆಂಕಟರಾಮು ಮತ್ತು ಅವರ ಮಗ ಅಯ್ಯಪ್ಪ ಕುಟುಂಬವರು ತಾಲೂಕಿನ ಮಲ್ಲೇನಹಳ್ಳಿಯ ಕುಮಾರಗಿರಿ ದೇವಸ್ಥಾನಕ್ಕೆ ಮರದ ರಥವನ್ನು ಹಸ್ತಾಂತರಿಸುವ ಕಾರ್ಯಕ್ರಮ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ದೇವಾಸ್ಥಾನದ ಆವರಣದಲ್ಲಿ ಚಂದ್ರಶೇಖರ್ ಮತ್ತು ಆದಿತ್ಯಭಟ್ ನೇತೃತ್ವದಲ್ಲಿ ಗಣಪತಿ, ಸುಬ್ರಹ್ಮಣ್ಯ, ವಾಸ್ತು, ನವಗ್ರಹ, ಅಧಿದೇವತೆ ಯಾಗ ಮತ್ತು ಮೃತ್ಯುಂಜಯ ಹೋಮ ಹಾಗೂ ಪೂರ್ಣಾಹುತಿ ನೇರವೇರಿಸಯಿತು. ನಂತರ ರಥಕ್ಕೆ ವಿಶೇಷ ಪೂಜೆ ನೇರವೇರಿಸಿ ಕಳಶ ಕೂರಿಸಲಾಯಿತು.ದೇವಸ್ಥಾನದ ಅಧ್ಯಕ್ಷ ಗುಣಶೇಖರ್, ಕಾರ್ಯದರ್ಶಿ ವಿಜಯಕುಮಾರ್ ನೇತೃತ್ವದಲ್ಲಿ ರಥವನ್ನು ದೇವಾಲಯಕ್ಕೆ ಹಸ್ತಾಂತರ ಮಾಡಲಾಯಿತು.ಈ ವೇಳೆ ಮಾತನಾಡಿದ ಕಾರ್ಯದರ್ಶಿ ವಿಜಯ್‌ಕುಮಾರ್, ನಮ್ಮ ಅವಧಿಯಲ್ಲಿ ದೇವಸ್ಥಾನದಲ್ಲಿ ಕಲ್ಲಿನ ಮೆಟ್ಟಿಲು ಸೇರಿ ದಂತೆ ಹಲವಾರು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ. ವಿಶೇಷ ದಿನಗಳಲ್ಲಿ ಎಲ್ಲ ರೀತಿಯ ಪೂಜೆ ನೆರವೇರಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ದೇವಲಾಯಕ್ಕೆ ದಾನಿಗಳು ಹೊಸ ಥೇರು ನೀಡಿರುವುದು ದೇವಾಲಯದ ಶಕ್ತಿ ತುಂಬುವ ಕೆಲಸ ಹೆಚ್ಚಾ ದಂತಾಗಿದೆ. ಇಂದು ಪಂಗುನಿ ಉತ್ತಿರೆ ಜಾತ್ರೆ ಅಂಗವಾಗಿ ಸುತ್ತಮುತ್ತಲ ಗ್ರಾಮಗಳಾದ ಹೊಸಪೇಟೆ, ಮಲ್ಲೇನಹಳ್ಳಿ, ಭಕ್ತರ ಹಳ್ಳಿ, ಸುಬ್ರಹ್ಮಣ್ಯ ಮತ್ತು ವಳ್ಳಿ, ದೈವಾನೆ ದೇವರ ಮೆರವಣಿಗೆ ನಡೆಸಲಾಯಿತು. ಅಲ್ಲದೇ ಕಾವಡಿ ಸಮರ್ಪಣೆ ಮತ್ತು ಕಲ್ಯಾಣೋತ್ಸವ ಕಾರ್ಯಕ್ರಮ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ನಡೆಯಿತು ಎಂದರು.ವಿಪ ಉಪಸಭಾಪತಿ ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ತಮ್ಮಯ್ಯ, ಸಿ.ಟಿ.ರವಿ, ಭೋಜೇಗೌಡ, ಮಾಜಿ ಎಂಎಲ್‌ಸಿ ಗಾಯತ್ರಿಶಾಂತೇಗೌಡ, ಸಿಪಿಐ ಪಕ್ಷದ ಮುಖಂಡ ರೇಣುಕಾರಾಧ್ಯ, ಸಂಘದ ಗೌರವಾಧ್ಯಕ್ಷ ಶಂಕರ್, ಉಪಾಧ್ಯಕ್ಷರಾದ ಮಹಾಲಿಂಗ, ರಮೇಶ್, ರಘು, ಗೋಪಾಲ್,ಪುವೆಂದಿರನ್, ಅಧ್ಯಕ್ಷ ಗುಣಶೇಖರ್, ಸಹಕಾರ್ಯ ದರ್ಶಿ ಅರಿವಳಗನ್, ನಿರ್ದೇಶಕರಾದ ಜಿ.ಶಂಕರ್, ವೆಂಕಟೇಶ್, ಶಶಿಧರ್, ಚಿನ್ನಪ್ಪ, ಅರ್ಚಕ ಕಂದಸ್ವಾಮಿ ಮತ್ತಿತರರಿದ್ದರು.

ಫೋಟೋ

ಕುಮಾರಗಿರಿ ದೇವಾಲಯಕ್ಕೆ ನೂತನ ಮರದ ರಥ ಹಸ್ತಾಂತರ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ