ನವಜಾತ ಶಿಶು ನಾಪತ್ತೆ: ದೂರು

KannadaprabhaNewsNetwork |  
Published : Oct 23, 2024, 12:51 AM IST
22-ಎನ್ಪಿ ಕೆ-2.ನಾಪೊಕ್ಲು ಪೊಲೀಸ್ ಠಾಣೆ. | Kannada Prabha

ಸಾರಾಂಶ

ಚೆರಿಯಪರಂಬುವಿನ ಅಪ್ರಾಪ್ತ ಬಾಲಕಿಗೆ ನವಜಾತ ಶಿಶು ಜನಿಸಿದ್ದು, ಶಿಶು ಕಾಣೆಯಾಗಿದೆ ಎಂದು ನಾಪೋಕ್ಲು ಠಾಣೆಯಲ್ಲಿ ಸೋಮವಾರ ಸಂಜೆ ಪ್ರಕರಣ ದಾಖಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆರಿಯಪರಂಬುವಿನ ಬಾಲಕಿ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಗ್ರಾಮದ ಆರೋಪಿ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣವೂ ದಾಖಲಾಗಿತ್ತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಚೆರಿಯಪರಂಬುವಿನ ಅಪ್ರಾಪ್ತ ಬಾಲಕಿಗೆ ನವಜಾತ ಶಿಶು ಜನಿಸಿದ್ದು, ಶಿಶು ಕಾಣೆಯಾಗಿದೆ ಎಂದು ನಾಪೋಕ್ಲು ಠಾಣೆಯಲ್ಲಿ ಸೋಮವಾರ ಸಂಜೆ ಪ್ರಕರಣ ದಾಖಲಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆರಿಯಪರಂಬುವಿನ ಬಾಲಕಿ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಗ್ರಾಮದ ಆರೋಪಿ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣವೂ ದಾಖಲಾಗಿತ್ತು.

ಬಳಿಕ ಬಾಲಕ ಜಾಮೀನು ಮೇಲೆ ಬಿಡುಗಡೆ ಹೊಂದಿದ್ದ. ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿ, ಅಲ್ಲಿ ನ್ಯಾಯಾಧೀಶರ ಆದೇಶದಂತೆ ವೈದ್ಯಾಧಿಕಾರಿಗಳಿಂದ ಪರೀಕ್ಷೆ ನಡೆಸಿ ಬಾಲಕಿ ಗರ್ಭಿಣಿ ಎಂದು ದೃಢಪಟ್ಟಿತ್ತು.

ಕಳೆದ ಅ.17ರಂದು ಬಾಲಕಿ ಶಿಶುವಿಗೆ ಜನ್ಮ ನೀಡಿದ್ದು ಶಿಶು ನಾಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅಸ್ವಸ್ಥಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವಜಾತ ಶಿಶು ಕಾಣೆಯಾದ ಬಗ್ಗೆ ಸೋಮವಾರ ಸಂಜೆ ಆರೋಗ್ಯ ಕಾರ್ಯಕರ್ತ ಉಮಾಮಹೇಶ್ವರ ಸ್ಥಳೀಯ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಪೊಲೀಸರು ತನಿಖೆ ನಡಸಿದ್ದಾರೆ.

ಕಂದಾಯ ಇಲಾಖೆ ಸಮಸ್ಯೆ ಬಗೆಹರಿಸಲು ಮನವಿ:

ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರನ್ನು ಭೇಟಿ ಮಾಡಿ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಸಲ್ಲಿಸಲಾಯಿತು.ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ರನ್ನು ಭೇಟಿ ಮಾಡಿದ ನಿಯೋಗ, ಕಳೆದ ಹಲವಾರು ತಿಂಗಳುಗಳಿಂದ ತಾಲೂಕು ಕಚೇರಿಗೆ ನೀಡುತ್ತಾ ಬಂದಿರುವ ಮನವಿಗಳ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಸಿ ಮತ್ತು ಡಿ ಜಾಗ ಸಮಸ್ಯೆ, ಕಂದಾಯ ಭೂಮಿಗೆ ದಾಖಲೆ ನೀಡದೇ ಎದುರಾಗಿರುವ ಸಮಸ್ಯೆಗಳು, ಬಗರ್‌ಹುಕುಂ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ, ಪೋಡಿ, ದುರಸ್ತಿ ಸೇರಿದಂತೆ ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಂದಾಯ ಇಲಾಖೆಯಿಂದ ಯಾವುದೇ ಸ್ಪಂದನೆ ಲಭಿಸುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಗಮನ ಸೆಳೆದರು.

ಶಾಂತಳ್ಳಿ ಹೋಬಳಿ ನಾಡಕಚೇರಿ ಸೇರಿದಂತೆ ಕಂದಾಯ ಇಲಾಖೆಯ ಹಲವಷ್ಟು ಕಚೇರಿಗಳಲ್ಲಿ ಸಿಬ್ಬಂದಿ ಇರುವುದಿಲ್ಲ. ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ. ತಾಲೂಕು ಕಚೇರಿಯನ್ನೂ ಒಳಗೊಂಡಂತೆ ಕಂದಾಯ ಇಲಾಖೆಯ ಇತರ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂಬ ನಿಯಮವನ್ನು ಸರ್ಕಾರ ಅಳವಡಿಸಿದ್ದರೂ ಹಲವಷ್ಟು ಅಧಿಕಾರಿಗಳು ಸೋಮವಾರಪೇಟೆಯಲ್ಲಿ ನೆಲೆಸಿಲ್ಲ. ಇದರೊಂದಿಗೆ ಕಂದಾಯ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ತಕ್ಷಣ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಅವರು, ತಾಲೂಕು ಕಚೇರಿಯಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗುವುದು. ಅರ್ಜಿಗಳನ್ನು ತನ್ನ ಹಂತದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಹೂವಯ್ಯ, ಮಂಜೂರು ತಮ್ಮಣ್ಣಿ, ಸುಲೈಮಾನ್, ನ.ಲ. ವಿಜಯ, ತ್ರಿಶೂಲ್, ಅನಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ