- ಪತ್ರಕರ್ತರಿಗೆ ಮಹಾತ್ಮ ಗಾಂಧಿ ಸೇವಾ ಮಾಧ್ಯಮ ಪ್ರಶಸ್ತಿ- ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಕುಮಾರ ಕಣಸೋಗಿ ಸಲಹೆ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕರುಣಾ ಜೀವ ಕಲ್ಯಾಣ ಟ್ರಸ್ಟ್, ಪತ್ರಿಕೋದ್ಯಮ ವಿಭಾಗದಿಂದ ಪತ್ರಕರ್ತರಿಗೆ ಮಹಾತ್ಮ ಗಾಂಧಿ ಸೇವಾ ಮಾಧ್ಯಮ ಪ್ರಶಸ್ತಿ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಧ್ಯಮ ಕ್ಷೇತ್ರ ಬೆಳೆದಂತೆಲ್ಲಾ ಅದರ ಆಳ, ಅಗಲವೂ ವಿಸ್ತಾರವಾಗುತ್ತದೆ. ಅವಕಾಶ ಸದ್ಬಳಕೆ ಮಾಡಿಕೊಳ್ಳುವ ಕೆಲಸ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಆಗಬೇಕು ಎಂದರು.
ಬರವಣಿಗೆಯೇ ಪತ್ರಕರ್ತರಿಗೆ ಧೈರ್ಯ ತಂದು ಕೊಡುತ್ತದೆ. ಎದುರಿಗೆ ಯಾವುದೇ ವ್ಯಕ್ತಿ, ಸ್ಥಾನಮಾನದವರಿದ್ದರೂ ಧೈರ್ಯವಾಗಿ ಪ್ರಶ್ನೆ ಕೇಳುವ ಗಟ್ಟಿತನ ಪತ್ರಕರ್ತರದಾಗಿದೆ. ಯಾವುದೇ ಪರಿಸ್ಥಿತಿ, ಸನ್ನಿವೇಶ, ಸಂದರ್ಭಗಳಿದ್ದರೂ ಧೈರ್ಯವಾಗಿ ಮುನ್ನುಗ್ಗುವುದನ್ನು ಪತ್ರಿಕೋದ್ಯಮ ಕಲಿಸುತ್ತದೆ. ಹಲವಾರು ಪತ್ರಕರ್ತರು ತಮ್ಮದೇ ಅಸ್ತಿತ್ವ ರೂಪಿಸಿಕೊಂಡಿದ್ದಾರೆ. ಸಮಾಜದಲ್ಲಿ ಉನ್ನತ ಗೌರವ ತಂದುಕೊಡುವ ಶಕ್ತಿಯೂ ಮಾಧ್ಯಮಕ್ಕೆ ಇದೆ ಎಂದು ಅವರು ಹೇಳಿದರು.ಮಾಧ್ಯಮ ಕ್ಷೇತ್ರವು 80ರ ದಶಕದ ನಂತರ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಸುದ್ದಿ ಬರೆಯುವುದಷ್ಟೇ ಅಲ್ಲ, ಉತ್ತಮ ಜೀವನ ರೂಪಿಸುವ ಸಾಮರ್ಥ್ಯವನ್ನೂ ನೀಡುತ್ತದೆ. ದೃಶ್ಯ ಮಾಧ್ಯಮ ಬಂದ ನಂತರ ಬದಲಾವಣೆಯಾಯಿತು. ಈಗಂತೂ ಡಿಜಿಟಲ್ ರೂಪ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಆಯಾಮವನ್ನೇ ತಂದುಕೊಟ್ಟಿದೆ. ಅಂತರ್ಜಾಲವು ಇಡೀ ಜಗತ್ತನ್ನೇ ಒಂದುಗೂಡಿಸುವ ಮಟ್ಟಕ್ಕೆ ಬೆಳೆದಿದೆ. ಡಿಜಿಟಲ್ ಮಾಧ್ಯಮದಿಂದ ಪತ್ರಕರ್ತರಿಗೆ ಹೊಸ ಹುದ್ದೆಗಳೂ ಸೃಷ್ಟಿಯಾಗುತ್ತಿವೆ ಎಂದು ವಿವರಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಪರಿಸರ ಕಾಳಜಿ, ಆರೋಗ್ಯ ಶಿಬಿರ, ಸಮಾಜಮುಖಿ ಸೇವೆ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿದೆ. ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಸೇರಿದಂತೆ ಹಲವಾರು ಹಿರಿಯರು ಸೇರಿಕೊಂಡು, ಸಮಾಜಕ್ಕೆ ಉತ್ತಮ ಸೇವೆ, ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತರಾದ ಬಕ್ಕೇಶ ನಾಗನೂರು, ಎಂ.ಶಶಿಕುಮಾರ, ಎನ್.ಆರ್.ನಟರಾಜ, ಎಸ್.ಎ.ಗಂಗರಾಜು, ಐ.ಗುರುಶಾಂತಪ್ಪ, ಗಣೇಶ ಕಮಲಾಪುರ, ದೇವಿಕಾ ಸುನೀಲ್, ಎ.ಬಿ.ರುದ್ರಮ್ಮ, ಎಚ್.ನಿಂಗರಾಜ, ವಿನಾಯಕ ನಾಯ್ಕ ಪೂಜಾರಿ, ಚನ್ನಬಸವ ಶೀಲವಂತರಿಗೆ ಮಹಾತ್ಮ ಗಾಂಧಿ ಸೇವಾ ಮಾಧ್ಯಮ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಕಾಲೇಜಿನ ಪ್ರೊ. ಲೋಲಾಕ್ಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಡಾ. ಆರ್.ಲಕ್ಷ್ಮೀ, ಬೋಧಕ-ಬೋಧಕೇತರ ಸಿಬ್ಬಂದಿ, ಪತ್ರಿಕೋದ್ಯಮ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.- - -
21ನೇ ಶತಮಾನವೆಂದರೆ ಡಿಜಿಟಲ್ ಯುಗವೆಂದೇ ಕರೆಯಲ್ಪಡುತ್ತಿದೆ. ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ ತನ್ನ ಓದಿನ ಬಳಿಕ ಟಿವಿ, ಸಿನಿಮಾ, ಪತ್ರಿಕೆ, ರೇಡಿಯೋ ಹೊರತಾಗಿ ಟಿವಿ ಧಾರಾವಾಹಿಗಳಿಗೆ ಕಂಟೆಂಟ್ ಸಹ ಬರೆಯಬಹುದು. ಕಾರ್ಪೊರೇಟ್ ಕಮ್ಯುನಿಕೇಷನ್, ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್, ಇವೆಂಟ್ ಮ್ಯಾನೇಜ್‌ಮೆಂಟ್ ಹೀಗೆ ನಾನಾ ಅವಕಾಶಗಳು ಇವೆ. ಸ್ಪಷ್ಟವಾಗಿ ಓದಲು, ಬರೆಯಲು, ಮಾತನಾಡಲು ಬಂದರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಸಾಧ್ಯ ಎಂದು ತಿಳಿಸಿದರು.
- - - -(ಫೋಟೋ ಇದೆ)