ಕನ್ನಡಪ್ರಭ ವಾರ್ತೆ ಮಂಡ್ಯ
ಸುಭಾಷ್ ನಗರದ ವಿನೋಬಾ ರಸ್ತೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ಪತ್ರಿಕೆಗಳ ವಿತರಕರು ಬೆಳಗಿನ ಜಾವ ಸಂಭ್ರಮದಿಂದ ಒಂದೆಡೇ ಸೇರಿ ಕೇಕ್ ಕತ್ತರಿಸಿ ಸಂಭ್ರಮದಿಂದ ಪತ್ರಿಕಾ ವಿತರಕರ ದಿನವನ್ನು ಆಚರಿಸಿದರು.
ಇದೇ ವೇಳೆ ಸುಮಾರು 30 ರಿಂದ 35 ವರ್ಷಗಳಿಂದಲೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪತ್ರಿಕಾ ವಿತರಣೆ ಕೆಲಸ ಮಾಡುತ್ತಿರುವ ಹಿರಿಯ ಪತ್ರಿಕಾ ವಿತರಕರಾದ ಕೆ.ಕೆಂಪಯ್ಯ, ಕಲೀಮ್ ಹಾಗೂ ನಾಗೇಶ್ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ವೇಳೆ ತಮ್ಮ ಸಂಘದ ಕ್ಷೇಮಾಭಿವೃದ್ಧಿ ವತಿಯಿಂದ ಎಲ್ಲಾ ಪತ್ರಿಕಾ ವಿತರಕರಿಗೆ ಜರ್ಕಿನ್ , ಗೋಡೆ ಗಡಿಯಾರ, ಸಿಹಿ ಬಾಕ್ಸ್ ಗಳನ್ನು ನೀಡಿ ಶುಭ ಕೋರಿದರು.ಇದೇ ವೇಳೆ ಹಿರಿಯ ಪತ್ರಿಕಾ ವಿತರಕರು ಮಾತನಾಡಿ, ಎಲ್ಲಾ ಪತ್ರಿಕಾ ವಿತರಕರು ಸಂಘಟಿತರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಪತ್ರಿಕಾ ವಿತರಕರಾದ ಸುರೇಶ್, ಗಿರೀಶ್, ಲೋಕೇಶ್, ಶ್ರೀಧರ್, ಮಾದೇಶ, ಮಧು, ಆನಂದ, ಶಿವಲಿಂಗ, ಮಹೇಂದ್ರ, ತುಂಗೇಶ್, ಗಣೇಶ, ಗೋವಿಂದಸ್ವಾಮಿ ಸೇರಿದಂತೆ ವಿವಿಧ ಹಲವರು ಭಾಗವಹಿಸಿದ್ದರು.