31ರಿಂದ ಜ.3ರ ವರೆಗೆ ಆಳ್ವಾಸ್‌ನಲ್ಲಿ ನೀನಾಸಂ ನಾಟಕೋತ್ಸವ

KannadaprabhaNewsNetwork |  
Published : Dec 21, 2024, 01:15 AM IST
11 | Kannada Prabha

ಸಾರಾಂಶ

ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ಪ್ರತಿದಿನ ನಾಟಕವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಡಿಸೆಂಬರ್ 31ರಿಂದ ಜನವರಿ 3ರ ವರೆಗೆ ಪ್ರತಿದಿನ ಸಂಜೆ 6.45ಕ್ಕೆ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನೀನಾಸಂ ತಿರುಗಾಟ ತಂಡದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.

ಡಿ.31 ಮತ್ತು ಜ.1ರಂದು ಮೂಲ ಭವಭೂತಿಯ, ಅಕ್ಷರ ಕೆ.ವಿ.ಇವರು ನಿರ್ದೇಶಿಸಿದ ಮಾಲತಿ ಮಾಧವ ಹಾಗೂ ಜ.2 ಮತ್ತು 3ರಂದು ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ, ಮೂಲ ಅಭಿರಾಮ್ ಭಡ್ಕಮ್ಕರ್ ರಚಿಸಿದ, ವಿದ್ಯಾನಿಧಿ ವನಾರಸ್ ನಿರ್ದೇಶಿಸಿದ ಅಂಕದ ಪರದೆ ನಾಟಕಗಳ ಪ್ರದರ್ಶನ ನಡೆಯಲಿದೆ.

ಈ ವರ್ಷದ ಅತ್ಯುತ್ತಮ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೀನಾಸಂ ತಿರುಗಾಟದ ನಾಟಕಗಳ್ನು ಹೆಚ್ಚು ಜನರು ನೋಡಬೇಕೆಂಬ ಕಾರಣಕ್ಕೆ ಎರಡೆರಡು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ಪ್ರತಿದಿನ ನಾಟಕವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನಂದಪುರ : ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು
ಅಪಘಾತದಿಂದ ಕೆಲ್ಸ ಕಳ್ಕೊಂಡ ಮಹಿಳೆ ನೆರವಿಗೆ ಕೋರ್ಟ್‌