ಹೊ.ನ.ಪುರದ ಸರ್ಕಾರಿ ಪಿಯು ಕಾಲೇಜಿಗೆ ಶೇ.90.20 ಅಂಕ

KannadaprabhaNewsNetwork | Published : Apr 11, 2024 12:46 AM

ಸಾರಾಂಶ

ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಹೊಳೆನರಸೀಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಕೀರ್ತನ 580, ರಕ್ಷಿತಾ ಎಚ್.ವೈ., ವಾಣಿಜ್ಯ ವಿಭಾಗದಲ್ಲಿ 579 ಹಾಗೂ ದ್ರಾಕ್ಷಾಯಿಣಿ ಕಲಾ ವಿಭಾಗದಲ್ಲಿ 549 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ದ್ವಿತೀಯ ಪಿಯು ಫಲಿತಾಂಶ । ಸರ್ಕಾರಿ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಕರ್ನಾಟಕ ರಾ್ಯದ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಕೀರ್ತನ 580, ರಕ್ಷಿತಾ ಎಚ್.ವೈ., ವಾಣಿಜ್ಯ ವಿಭಾಗದಲ್ಲಿ 579 ಹಾಗೂ ದ್ರಾಕ್ಷಾಯಿಣಿ ಕಲಾ ವಿಭಾಗದಲ್ಲಿ 549 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪಟ್ಟಣದ ಟಾರ್ಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ಬಸವರಾಜು ಕೆ.ವಿ. ವಿಜ್ಞಾನ ವಿಭಾಗದಲ್ಲಿ 579 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪಲಿತಾಂಶದಲ್ಲಿ ಕಾಲೇಜಿಗೆ ಶೇ. 90.20 ರಷ್ಟು ಫಲಿತಾಂಶ ಲಭಿಸಿದೆ. 247 ವಿದ್ಯಾರ್ಥಿನಿಯರಲ್ಲಿ 223 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. 58 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ದೇವರಾಜ್ ತಿಳಿಸಿದರು.

ಟಾರ್ಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಹೇಮಾ ಎಚ್.ಜೆ. ವಿಜ್ಞಾನ ವಿಭಾಗದಲ್ಲಿ 574 ಅಂಕಗಳಿಸಿ ದ್ವಿತೀಯ ಸ್ಥಾನ ಮತ್ತು ಪವಿತ್ರ ವಿ.ಬಿ. 572 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಭೂಮಿಕಾ ಎಂ.ವೈ. 577 ಅಂಕ ಗಳಿಸಿ ಪ್ರಥಮ, ಮೇಘನಾ ಬಿ.ಎಂ. 576 ಅಂಕ ಗಳಿಸಿ ದ್ವಿತೀಯ ಮತ್ತು ಆಕಾಶ್‌ಗೌಡ ಬಿ.ಎಸ್. 571 ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. 162 ವಿದ್ಯಾರ್ಥಿಗಳಲ್ಲಿ 161 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 74 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕೆ.ಎನ್ ತಿಳಿಸಿದ್ದಾರೆ.

ಉತ್ತಮ ಪಲಿತಾಂಶ ಲಭಿಸುವಲ್ಲಿ ಉತ್ತಮ ಬೋಧನೆ ಜತೆಗೆ ಕರ್ತವ್ಯನಿಷ್ಠೆ ತೋರಿದ ಉಪನ್ಯಾಸಕರು ಹಾಗೂ ಏಕಾಗ್ರತೆಯಿಂದ ಕಲಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಹೊಳೆನರಸೀಪುರದ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತನ.

ಹೊಳೆನರಸೀಪುರದ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಿತಾ ಎಚ್.ವೈ.

ಪಟ್ಟಣದ ಟಾರ್ಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ಬಸವರಾಜು ಕೆ.ವಿ.

ಹೊಳೆನರಸೀಪುರದ ವಿದ್ಯಾರ್ಥಿನಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ದ್ರಾಕ್ಷಾಯಿಣಿ.

Share this article