ಕನ್ನಡಪ್ರಭ ವಾರ್ತೆ ಮಂಡ್ಯ
ಮುರುಗೇಶ್ ನಿರಾಣಿಯವರು ದಶಕಗಳಿಂದಲೂ ಮೈಷುಗರ್‌ನ್ನು ತಮ್ಮ ವಶಕ್ಕೆ ಪಡೆಯಲು ನಾನಾ ರೀತಿಯ ಹುನ್ನಾರ ನಡೆಸುತ್ತಿದ್ದಾರೆ. ಸರ್ಕಾರಿ ಸಾಮ್ಯದ ಕಾರ್ಖಾನೆ ಖಾಸಗಿ ವಲಯಕ್ಕೆ ಸೇರಲು ಮಂಡ್ಯ ರೈತರು ಎಂದಿಗೂ ಅವಕಾಶ ನೀಡುವುದಿಲ್ಲವೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಕಾರ್ಖಾನೆ ಕಬ್ಬು ನುರಿಸುತ್ತಿದೆ. ಬಾಯ್ಲಿಂಗ್ ಹೌಸ್ ರೆಡಿಯಾಗುತ್ತಿದೆ. ಕಾರ್ಖಾನೆ ಎಲ್ಲಾ ಹಂತದಲ್ಲೂ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ. ಸರ್ಕಾರ ಕೂಡ ಕಾರ್ಖಾನೆಯನ್ನು ನಡೆಸಲು ಬದ್ಧವಾಗಿದೆ. ಹೋರಾಟದ ಮೂಲಕ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿರುವ ಕಾರ್ಖಾನೆಯನ್ನು ಖಾಸಗಿ ವಲಯಕ್ಕೆ ಸೇರಿಸುವ ಬಗ್ಗೆ ಮಾತನಾಡುವವರು ಯಾರೇ ಆಗಿರಲಿ ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.ನಿರಾಣಿಯವರು ಕೈಗಾರಿಕೆ ಖಾತೆಯ ಮಾಜಿ ಸಚಿವರಾಗಿ ಮೈಷುಗರ್ ಕಾರ್ಖಾನೆಯನ್ನು ಖಾಸಗಿ ವಲಯಕ್ಕೆ ನೀಡುವ ತಮ್ಮ ಧೋರಣೆಯನ್ನು ಮರೆತುಬಿಡಬೇಕು. ಅಂತಹ ಆಲೋಚನೆ, ಹೇಳಿಕೆಗಳು ಮರುಕಳಿಸಿದರೆ ನಿರಾಣಿಯರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚಿಕೆ ನೀಡಿದರು.
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣಪ್ರತಿ ಟನ್ ಕಬ್ಬಿಗೆ ಕನಿಷ್ಠ 4500 ರು. ನಿಗಧಿ ಮಾಡಿ ಕಬ್ಬು ಬೆಳೆಗಾರರಾದ ರೈತರ ನೆರವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧಾವಿಸುಂತೆ ಆಗ್ರಹಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯ ಕರ್ತರು ಪ್ರಧಾನಿಗಳಿಗೆ ಕಬ್ಬಿನ ತುಂಡುಗಳ ಜೊತೆಗೆ ಪತ್ರ ರವಾನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ದೊಡ್ಡ ದೊಡ್ಡ ಉದ್ದಿಮೆಯವರ ಪರ ನಿಂತು ಅವರನ್ನು ಬೆಳೆಸುತ್ತಿರುವ ರೀತಿ ರೈತರನ್ನು ಸಹ ಬೆಳೆಸಬೇಕು. ತಕ್ಷಣ ಕನಿಷ್ಠ ಟನ್ ಕಬ್ಬಿನ ಬೆಲೆ 4500 ರುಗಳಿಗೆ ನಿಗಧಿ ಮಾಡಿ ರೈತರ ಬೇಡಿಕೆಗಳಿಗೆ ಸ್ಪಂಧಿಸಬೇಕು ಎಂದು ಆಗ್ರಹಿಸಿ ಕಬ್ಬಿನ ಜೊಲ್ಲೆ ತುಂಡುಗಳು ಜೊತೆಗೆ ಪತ್ರ ಬರೆದು ಅಂಚೆ ಮೂಲಕ ರವಾನೆ ಮಾಡಿದರು.ಈ ವೇಳೆ ವೇದಿಕೆ ಪದಾದಿಕಾರಿಗಳಾದ ದರಸಗುಪ್ಪೆ ಪ್ರಭಾಕರ್, ಕೂಡಲಕುಪ್ಪೆ ಮಹೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಹಿರಿಯ ಪದಾದಿಕಾರಿ ಅಂಕಶೆಟ್ಟಿ, ಮಹಿಳಾ ಕಾರ್ಯದರ್ಶಿ ಛಾಯಾದೇವಿ, ಪುಟ್ಟಮ್ಮ, ನಾಗೇಂದ್ರ, ಸಣ್ಣಮ್ಮ, ಮನೋಜ್ ಸೇರಿದಂತೆ ಇತರರು ಹಾಜರಿದ್ದರು.