)
ಗಣೇಶ್ ತಮ್ಮಡಿಹಳ್ಳಿ
ಶಿಕ್ಷಕರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಶಿಕ್ಷಕರಿಗೆ ಕರ್ತವ್ಯ ಆ್ಯಪ್ ಮಾದರಿಯಲ್ಲೇ ಮಕ್ಕಳ ಹಾಜರಾತಿ ಬಗ್ಗೆ ನಿಖರವಾದ ಮಾಹಿತಿ ಪಡೆಯುವ ಸಲುವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮುಖಚರ್ಯೆ ಆಧಾರಿತ ಹಾಜರಾತಿಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿನೂತನವಾಗಿ `ನಿರಂತರ'''''''' ಆ್ಯಪ್ ಜಾರಿಗೆ ತಂದಿದ್ದು, ಮಕ್ಕಳ ಹಾಜರಾತಿಗೆ ವಿಶೇಷ ಒತ್ತು ನೀಡಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ.96ರಷ್ಟು ನೋಂದಣಿ ಪೂರ್ಣಗೊಂಡಿದೆ. ಪ್ರಸಕ್ತ ಸಾಲಿನಿಂದಲೇ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ `ನಿರಂತರ'''''''' ಆ್ಯಪ್ ಮೂಲಕ ಹಾಜರಾತಿ ಪಡೆಯಬೇಕು ಎಂದು ಇಲಾಖೆ ಸೂಚಿಸಿದೆ. ಇಲಾಖೆಯು ಇದೇ ವರ್ಷ ಶಿಕ್ಷಕರಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳ ಹಾಜರಾತಿಗೂ ನೂತನ ತಂತ್ರಜ್ಞಾನ ಆಧರಿತ ಹಾಜರಾತಿಯ ಮೊರೆ ಹೋಗಿದೆ.ಏನಿದು ನಿರಂತರ ಆ್ಯಪ್?:
ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ `ನಿರಂತರ ಆ್ಯಪ್'''''''' ಅನ್ನು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಒದಗಿಸಲಾಗಿದೆ. ಆಯಾ ತರಗತಿಯ ಶಿಕ್ಷಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊದಲು ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಆಯಾ ತರಗತಿಯ ಪ್ರತಿಯೊಂದು ವಿದ್ಯಾರ್ಥಿಗಳ ಮುಖವನ್ನು ಎಡ, ಬಲ ಮತ್ತು ಎದುರಿನಿಂದ ಮೂರು ವಿಧವಾಗಿ ಆ್ಯಪ್‌ನಲ್ಲಿ ಸೆರೆಹಿಡಿದು ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ, ನಿತ್ಯ ಹಾಜರಾತಿಗಾಗಿ ಶಿಕ್ಷಕರು ತರಗತಿ ಕೊಠಡಿಯಲ್ಲಿ ಕುಳಿತುಕೊಳ್ಳುವ ಎಲ್ಲ ಮಕ್ಕಳನ್ನು ಒಂದೇ ಬಾರಿ ಆ್ಯಪ್‌ನಲ್ಲಿ ಸೆರೆ ಹಿಡಿದರೆ, ಎಐ ತಂತ್ರಜ್ಞಾನವು ಆಯಾ ಮಕ್ಕಳ ಮುಖ ಗುರುತಿಸಿ, ಹಾಜರಾತಿ ಹಾಕುತ್ತದೆ. ಈ ಹಾಜರಾತಿಯು ಇಲಾಖೆಯ ತಂತ್ರಾಂಶಕ್ಕೂ ಹೋಗುತ್ತದೆ.ನಿರಂತರ ಆ್ಯಪ್ ಮೂಲಕ ವಿದ್ಯಾರ್ಥಿಗಳ ಹಾಜರಾತಿ ಹಾಕುವ ಕುರಿತಂತೆ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಸಿಆರ್‌ಪಿಗಳಿಗೆ, ಸಿಆರ್‌ಪಿಗಳ ಮೂಲಕ ಶಾಲಾ ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಶಾಲಾ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತಿದೆ. `ನಿರಂತರ'''''''''''''''' ಆ್ಯಪ್ ಆಧಾರಿತ ಹಾಜರಾತಿ ಶುರುವಾದ ಬಳಿಕ ಹಳೆಯ ಕಾಲದ ಪುಸ್ತಕ ಹಾಜರಾತಿ ಇತಿಶ್ರೀ ಬಿದ್ದಿದೆ.
ಬಾಕ್ಸ್...
ಜಿಲ್ಲೆಯಲ್ಲಿ ಈವರೆಗೆ ಸರ್ಕಾರಿ ಶಾಲೆಗಳಿಗೆ ಮಾತ್ರ ನಿರಂತರ ಆ್ಯಪ್ ಕಡ್ಡಾಯಗೊಳಿಸಲಾಗಿತ್ತು. ಈಗ ಮುಂದುವರಿದ ಭಾಗವಾಗಿ ಅನುದಾನಿತ ಶಾಲೆಗಳಿಗೂ ನಿರಂತರ ಆ್ಯಪ್ ನೋಂದಣಿ ಕಡ್ಡಾಯಗೊಳಿಸಲಾಗಿದ್ದು, ಕಳೆದ ಎರಡು ದಿನದಿಂದ ಅನುದಾನಿತ ಶಾಲೆಗಳಲ್ಲೂ ನಿರಂತರ ಆ್ಯಪ್ ನೋಂದಣಿ ಮಾಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಾಕ್ಸ್...
ಜಿಲ್ಲೆಯಲ್ಲಿ `ನಿರಂತರ'''''''' ಆ್ಯಪ್‌ಗೆ ಮಕ್ಕಳ ನೋಂದಣಿ ಶೇ. 96 ರಷ್ಟಾಗಿದೆ. ಪ್ರಸಕ್ತ ಸಾಲಿನ ಮಕ್ಕಳ ಪ್ರವೇಶಾತಿ ಪ್ರಕ್ರಿಯೆ ನಡುವೆಯೂ ಆ್ಯಪ್ ಆಧಾರಿತ ಮುಖಚರ್ಯೆದ ಹಾಜರಾತಿ ಪಡೆಯಲು ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಈಗಾಗಲೇ ಶೇ.96ರಷ್ಟು ನೋಂದಣಿ ಪೂರ್ಣಗೊಂಡಿದೆ.
ಶಿವಮೊಗ್ಗ ತಾಲೂಕಿನಲ್ಲಿ 18778 ವಿದ್ಯಾರ್ಥಿಗಳ ಪೈಕಿ 17999, ತೀರ್ಥಹಳ್ಳಿಯಲ್ಲಿ 7617 ಮಕ್ಕಳ ಪೈಕಿ 7385, ಹೊಸನಗರಲ್ಲಿ 8121 ಮಕ್ಕಳ ಪೈಕಿ 7830, ಸಾಗರದಲ್ಲಿ 11895 ಮಕ್ಕಳ ಪೈಕಿ 11357, ಸೊರಬದಲ್ಲಿ 15941 ಮಕ್ಕಳ ಪೈಕಿ, ಭದ್ರಾವತಿಯಲ್ಲಿ 13870 ಮಕ್ಕಳ ಪೈಕಿ 12975, ಶಿಕಾರಿಪುರದಲ್ಲಿ 17382 ಮಕ್ಕಳ ಪೈಕಿ 16834 ಮಕ್ಕಳ ನೋಂದಣಿ ಪೂರ್ಣಗೊಂಡಿದೆ.
ಕೋಟ್...
ಸರ್ಕಾರ `ನಿರಂತರ'''''''' ಆ್ಯಪ್ ಮೂಲಕ ಮಕ್ಕಳ ಹಾಜರಾತಿ ಕಡ್ಡಾಯ ಮಾಡಿ ಆದೇಶಿಸಿದೆ. ಇದರಂತೆ ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಯಶಸ್ವಿಯಾಗಿ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ, ಸರ್ವರ್ ನಿಧಾನಗತಿ ಹಾಗೂ ಮುಖ ಗುರುತಿಸುವಿಕೆಯಲ್ಲಿ ಕೆಲವೊಮ್ಮೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದರೂ, ಅವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ.-ಮಂಜುನಾಥ್, ಡಿಡಿಪಿಐ, ಶಿವಮೊಗ್ಗ.
-------------------