ಕನ್ನಡಪ್ರಭ ವಾರ್ತೆ ಸಕಲೇಶಪುರ
ಶನಿವಾರ ಪಟ್ಟಣದ ಎಪಿಎಂಸಿ ಅವರಣದಲ್ಲಿ ತಾಲೂಕು ಒಕ್ಕಲಿಗ ಸಮಾಜ ಹಾಗೂ ಆದಿಚುಂಚುನಗಿರಿ ಮಠ ಜಂಟಿಯಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ, ದೇಶದಲ್ಲಿ ಶೇ. ೬೫ರಷ್ಟು ಜನರು ಕೃಷಿಕರಾಗಿದ್ದು ಹಿಂದೆ ಕೃಷಿವಲಯದಿಂದ ಶೇ. ೫೦ರಷ್ಟು ಆದಾಯ ಬರುತ್ತಿದ್ದರೆ, ಇದರ ಪ್ರಮಾಣ ಈಗ ಶೇ. ೧೮ಕ್ಕೆ ಕುಸಿದಿದೆ. ಕೃಷಿ, ಉತ್ಪಾದನೆ ಹಾಗೂ ಸೇವಾ ಕ್ಷೇತ್ರದಿಂದ ದೇಶಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಸೇವಾ ಕ್ಷೇತ್ರದಿಂದ ಬರುತ್ತಿರುವ ಆದಾಯ ಶೇ. ೫೫ರಷ್ಟಿದೆ. ದೇಶದ ವಿದ್ಯಾವಂತ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ಪಾದನೆ ಕ್ಷೇತ್ರ ಬೃಹತ್ ಪ್ರಮಾಣದಲ್ಲಿ ಬೆಳೆಯುವ ಅಗತ್ಯವಿದೆ.
ಬೇರೆ ಬೇರೆ ಕ್ಷೇತ್ರದಲ್ಲಿರುವಂತೆ ವ್ಯವಸಾಯ ಕ್ಷೇತ್ರದಲ್ಲೂ ಹೆಚ್ಚಿನ ಅವಿಷ್ಕಾರಗಳಾಗಬೇಕಿದೆ. ಆಧುನಿಕ ಯಂತ್ರಗಳ ಬಳಕೆಯಿಂದ ರೈತರ ಶ್ರಮ ಕಡಿಮೆಯಾಗಲಿದೆ. ಕೃಷಿ ಸಮ್ಮೇಳನಗಳ ಅಗತ್ಯ ರೈತರಿಗೆ ತಂತ್ರಜ್ಞಾನದ ಪರಿಚಯ ಮಾಡುವುದಾಗಿದೆ. ರೈತರೆಂದರೆ ಹರಕು ಬಟ್ಟೆಯಲ್ಲಿರಬೇಕು ಎಂಬ ಕಲ್ಪನೆ ಇಂದು ಇಲ್ಲ. ಇಂದು ಹೆಚ್ಚಿನ ಜನಸಂಖ್ಯೆಯಿಂದ ಭೂಮಿ ಒಡೆತನ ಸಹ ಕಡಿಮೆಯಾಗಿದೆ. ಇರುವ ಭೂಮಿಯಲ್ಲೇ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರೈತರು ಚಿಂತನೆ ನಡೆಸಬೇಕಿದೆ ಎಂದರು. ಕೋಟ್ಯಂತರ ರು. ಖರ್ಚು ಮಾಡಿ ಸಂಶೋಧನೆಗಳ ಮೂಲಕ ಆಧುನಿಕ ಅವಿಷ್ಕಾರಗಳನ್ನು ನಡೆಸಲಾಗಿದೆ. ರೈತರು ಈ ಆಧುನಿಕ ಆವಿಷ್ಕಾರಗಳ ಸದ್ಬಳಕೆ ಮಾಡಿಕೊಳ್ಳದೆ ಹೋದರೆ ಸರ್ಕಾರದ ಅಷ್ಟು ಹಣ ವ್ಯರ್ಥವಾಗಲಿದೆ ಎಂದರು.