ಎನ್‌ಐಟಿಕೆ ಬೋಲ್ಡ್ ಅಂಡ್ ಬ್ಯಾಲೆನ್ಸ್ಡ್ ಪಠ್ಯಕ್ರಮ 2026 ಬ್ಯಾಚ್‌ಗೆ ಜಾರಿಗೆ

KannadaprabhaNewsNetwork |  
Published : Sep 10, 2026, 02:45 AM IST
ಬಿಟೆಕ್‌ ವಿದ್ಯಾರ್ಥಿಗಳ ಲೈಫ್‌ ಸ್ಕಿಲ್ಸ್‌ ಚಟುವಟಿಕೆಯ ನೋಟ  | Kannada Prabha

ಸಾರಾಂಶ

ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ತನ್ನ 2026ನೇ ಬ್ಯಾಚ್ ಬಿ.ಟೆಕ್ ವಿದ್ಯಾರ್ಥಿಗಳಿಗಾಗಿ ಹೊಸ ಬೋಲ್ಡ್ ಅಂಡ್ ಬ್ಯಾಲೆನ್ಸ್ಡ್ಇಂಜಿನಿಯರಿಂಗ್ ಪಠ್ಯಕ್ರಮವನ್ನು ಜಾರಿಗೆ ತಂದಿದೆ. ಒಟ್ಟು ಕ್ರೆಡಿಟ್‌ಗಳನ್ನು ಕಡಿಮೆ ಮಾಡಲಾಗಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ ತಮ್ಮ ಮುಖ್ಯ ವಿಭಾಗದಲ್ಲಿ ಗೌರವ ಪದವಿ ಅಥವಾ ಬೇರೆ ವಿಭಾಗ/ಅಂತರ ವಿಭಾಗೀಯ ಕ್ಷೇತ್ರದಲ್ಲಿ ಉಪ ಪದವಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ತನ್ನ 2026ನೇ ಬ್ಯಾಚ್ ಬಿ.ಟೆಕ್ ವಿದ್ಯಾರ್ಥಿಗಳಿಗಾಗಿ ಹೊಸ ಬೋಲ್ಡ್ ಅಂಡ್ ಬ್ಯಾಲೆನ್ಸ್ಡ್ಇಂಜಿನಿಯರಿಂಗ್ ಪಠ್ಯಕ್ರಮವನ್ನು ಜಾರಿಗೆ ತಂದಿದೆ. ಒಟ್ಟು ಕ್ರೆಡಿಟ್‌ಗಳನ್ನು ಕಡಿಮೆ ಮಾಡಲಾಗಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ ತಮ್ಮ ಮುಖ್ಯ ವಿಭಾಗದಲ್ಲಿ ಗೌರವ ಪದವಿ ಅಥವಾ ಬೇರೆ ವಿಭಾಗ/ಅಂತರ ವಿಭಾಗೀಯ ಕ್ಷೇತ್ರದಲ್ಲಿ ಉಪ ಪದವಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ತಮ್ಮ ಸಮಯದ 2/3 ಭಾಗವನ್ನು ತರಗತಿಯ ಹೊರಗಿನ ಚಟುವಟಿಕೆಗಳಲ್ಲಿ ಕಳೆಯಲಿದ್ದಾರೆ. ಇದರಲ್ಲಿ ಲ್ಯಾಬ್ ಕೆಲಸ, ಲೈಫ್-ಸ್ಕಿಲ್ಸ್ ಚಟುವಟಿಕೆಗಳು, ಉದ್ಯಮ ಇಂಟರ್ನ್‌ಶಿಪ್, ಸಂಶೋಧನಾ ಯೋಜನೆ ಮತ್ತು ಉದ್ಯಮ ಆರಂಭ ಯೋಜನೆಗಳು ಸೇರಿವೆ.

ಪ್ರೊ. ಅನ್ನಪ್ಪ, ಡೀನ್ (ಅಕಾಡೆಮಿಕ್ ಪ್ರೋಗ್ರಾಮ್ಸ್) ಮಾತನಾಡಿ, ಹೊಸ ಪಠ್ಯಕ್ರಮವನ್ನು ಕಳೆದ ಮೂರು ವರ್ಷಗಳಲ್ಲಿ ಉದ್ಯಮ ಮತ್ತು ಹಳೆಯ ವಿದ್ಯಾರ್ಥಿಗಳೊಂದಿಗೆ ನಡೆದ ಅನೇಕ ಸಭೆಗಳ ಮೂಲಕ ರೂಪಿಸಲಾಗಿದೆ ಎಂದರು.

ಪ್ರೊ. ಗೋವಿಂದ ರಾಜ ಮಂಡೇಲ, ಡೀನ್ (ಸ್ಟೂಡೆಂಟ್ ವೆಲ್ಫೇರ್) ಮಾತನಾಡಿ, ಲೈಫ್-ಸ್ಕಿಲ್ಸ್ ಚಟುವಟಿಕೆಗಳು ಹೊಸ ಪಠ್ಯಕ್ರಮದ ಪ್ರಮುಖ ಭಾಗವಾಗಿವೆ. ಇವು ನಾಲ್ಕು ವಿಭಾಗಗಳಲ್ಲಿ ಹಂಚಲ್ಪಟ್ಟಿವೆ ಎಂದರು.

ಡಾ. ನಾಗೇಂದ್ರಪ್ಪ ಎಚ್., ಅಸೋಸಿಯೇಟ್ ಡೀನ್ (ಕ್ರೀಡೆ) ಮಾತನಾಡಿ, 1,100+ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ವಿವಿಧ ಲೈಫ್-ಸ್ಕಿಲ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಕಷ್ಟು ಯೋಜನೆ ಮಾಡಲಾಗಿದೆ ಎಂದರು.

ಡಾ. ಗೀತಾ ವಿ., ಅಸೋಸಿಯೇಟ್ ಡೀನ್ (ಲೈಫ್-ಸ್ಕಿಲ್ಸ್) ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುತ್ತಾ ನಗುಮುಖದಿಂದ ಸಂತೋಷ ಪಟ್ಟರು. ಅವರು ತಮ್ಮೊಂದಿಗೆ ಸ್ನೇಹ ಬೆಳೆಸುತ್ತಿರುವಂತೆ ನನಗೆ ಅನಿಸಿತು ಎಂದರು. ಈ ಪಠ್ಯಕ್ರಮ ಸಮಗ್ರ ವ್ಯಕ್ತಿತ್ವ ಹೊಂದಿದ ವೃತ್ತಿಪರರನ್ನು ರೂಪಿಸುವಲ್ಲಿ ಸಹಾಯಕವಾಗಲಿದೆ. 2047ರೊಳಗೆ ‘ವಿಕಸಿತ್‌ ಭಾರತ್’ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡುವಂತೆ ನಾವು ನಿರೀಕ್ಷಿಸುತ್ತೇವೆ.

-ಪ್ರೊ.ಬಿ.ರವಿ, ನಿರ್ದೇಶಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಕ್ರೀಡಾಪಟುಗಳಲ್ಲಿ ಅಪ್ರತಿಮ ಪ್ರತಿಭೆ
ಸಮಾಜದಲ್ಲಿ ಅಸಮಾನತೆ, ಅಂಧಕಾರ ದೂರವಾಗಲಿ