ಕನ್ನಡಪ್ರಭ ವಾರ್ತೆ ಬೆಂಗಳೂರು
ಐದು ಪಾಲಿಕೆಗಳಲ್ಲಿ ಇರುವ 369 ವಾರ್ಡ್‌ಗಳ ಪೈಕಿ ನಿಯಮಾನುಸಾರ ಮಹಿಳೆಯರಿಗೆ 185 ಸೀಟುಗಳನ್ನು ಮೀಸಲಿಡಬೇಕಿತ್ತು. ಆದರೆ, 176 ವಾರ್ಡ್‌ಗಳನ್ನು ಮಾತ್ರ ಮಹಿಳೆಯರಿಗೆ ನೀಡಲಾಗಿದೆ. 9 ಸೀಟ್‌ಗಳು ಕೊರತೆಯಾಗಿವೆ. ಮಹಿಳಾ ಮೀಸಲಾತಿ ಪಾಲನೆಯಾಗದಿರುವುದರಿಂದ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.
ಜನವರಿ ಎರಡನೇ ವಾರದಲ್ಲಿ ಮೀಸಲಾತಿ ಕರಡು ಪಟ್ಟಿಗೆ ರಾಜಕೀಯ ವಲಯದಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿಲ್ಲ ಎಂದು ಅನೇಕರು ಆಕ್ಷೇಪಣೆ ಸಲ್ಲಿಸಿದ್ದರು. ಆದರೂ, ಶೇ.50ರಷ್ಟು ಮೀಸಲಾತಿ ಪಾಲನೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.ಮೀಸಲಾತಿ ವಿವರಗಳು: 2011ರ ಜನಗಣತಿ ಅನುಸಾರ ವಾರ್ಡ್‌ಗಳ ಮರು ವಿಂಗಡಣೆ ಮಾಡಲಾಗಿದ್ದು, 369 ವಾರ್ಡ್‌ಗಳಲ್ಲಿ ಅನುಸೂಚಿತ ಜಾತಿಗೆ 43 ಸೀಟು, ಅನುಸೂಚಿತ ಪಂಗಡಕ್ಕೆ 9, ಹಿಂದುಳಿದ ‘ಅ’ ವರ್ಗಕ್ಕೆ 97, ಹಿಂದುಳಿದ ‘ಬ’ ವರ್ಗ 24 ಹಾಗೂ ಸಾಮಾನ್ಯ ವರ್ಗಕ್ಕೆ 198 ಸೀಟುಗಳು ಇವೆ.
ಪೂರ್ವ ನಗರ ಪಾಲಿಕೆ: ವ್ಯಾಪ್ತಿಯಲ್ಲಿ 50 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 7 ವಾರ್ಡ್, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಅ’ ವರ್ಗ 14 , ಹಿಂದುಳಿದ ‘ಬ’ ವರ್ಗಕ್ಕೆ 3 ಮತ್ತು ಸಾಮಾನ್ಯ ವರ್ಗಕ್ಕೆ 25 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸೀಟ್ 23.
ಪಶ್ಚಿಮ ನಗರ ಪಾಲಿಕೆ: ವ್ಯಾಪ್ತಿಯಲ್ಲಿ 112 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 9 ವಾರ್ಡ್, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಅ’ ವರ್ಗ 30, ಹಿಂದುಳಿದ ‘ಬ’ ವರ್ಗ 7 ಮತ್ತು ಸಾಮಾನ್ಯ ವರ್ಗಕ್ಕೆ 64 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸ್ಥಾನ 55.ಉತ್ತರ ನಗರ ಪಾಲಿಕೆ: ವ್ಯಾಪ್ತಿಯಲ್ಲಿ 72 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 9 ವಾರ್ಡ್, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಅ’ ವರ್ಗ 19, ಹಿಂದುಳಿದ ‘ಬ’ ವರ್ಗ 5 ಮತ್ತು ಸಾಮಾನ್ಯ ವರ್ಗಕ್ಕೆ 37 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸ್ಥಾನ 34.
ದಕ್ಷಿಣ ನಗರ ಪಾಲಿಕೆ: ವ್ಯಾಪ್ತಿಯಲ್ಲಿ 72 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 7 ವಾರ್ಡ್, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಅ’ ವರ್ಗ 19, ಹಿಂದುಳಿದ ‘ಬ’ ವರ್ಗ 5 ಮತ್ತು ಸಾಮಾನ್ಯ ವರ್ಗಕ್ಕೆ 40 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸ್ಥಾನ 34.