- ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಾಗಾರ
ಸಹಕಾರಿ ರಂಗದಲ್ಲಿ ಜಾತಿ, ಧರ್ಮ ಹಾಗೂ ರಾಜಕಾರಣಕ್ಕೆ ಅವಕಾಶ ಇರಬಾರದು. ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಸೇವೆಯೇ ಮೂಲಮಂತ್ರ ವಾಗಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಯೂನಿಯನ್‌ನ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಸಹಕಾರಿ ರಂಗ ಬಹಳಷ್ಟು ಬದಲಾವಣೆ ಕಂಡಿದೆ. ಸಹಕಾರಿ ಕ್ಷೇತ್ರ ಪಕ್ಷ, ಧರ್ಮಕ್ಕೆ ಸೀಮಿತಗೊಳ್ಳುವುದು ಸರಿ ಯಲ್ಲ. ಸಹಕಾರಿ ಕ್ಷೇತ್ರ ಪ್ರಾರಂಭದ ಕಾಲದಲ್ಲಿ ಗುಂಪುಗಾರಿಕೆ, ಜಾತಿ, ಪಕ್ಷಬೇಧದಿಂದ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ದಿನಮಾನದಲ್ಲಿ ಸೊಸೈಟಿಗಳು ರಾಜಕೀಯವಾಗಿ ಮಾರ್ಪಾಡುತ್ತಿದೆ ಎಂದರು.ಇಂದಿನ ದಿನಗಳಲ್ಲಿ ಸಹಕಾರಿ ರಂಗದಲ್ಲಿ ಸಾಕಷ್ಟು ಸವಲತ್ತಿನ ಅನುಕೂಲವಿದ್ದರೂ ಬೆಳವಣಿಗೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಕಾರಣ ಪಕ್ಷರಾಜಕೀಯ, ಗುಂಪುಗಾರಿಕೆ ಹೆಚ್ಚಾಗುತ್ತಿದ್ದು ಇದರಿಂದ ಜನರಿಗೆ ಸಮರ್ಪಕ ಸೌಲಭ್ಯ ಒದಗಿಸಲು ವಿಫಲ ವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಸಹಕಾರಿ ಪ್ರತಿನಿಧಿಗಳು ಅನುಮಾನ, ಮಾಹಿತಿ ಕೊರತೆ ಅಥವಾ ತಿದ್ದುಪಡಿಗಳಂಥ ಸಂದೇಹಗಳಿದ್ದರೆ ಪರಿಣಿತ ಉಪನ್ಯಾಸಕರಿಂದ ಮಾಹಿತಿ ಪಡೆಯಬೇಕು. ಜನರಿಗೆ ಅನುಕೂಲವಾಗುವ ಮಹತ್ತರ ಜವಾಬ್ದಾರಿ ಸಹಕಾರಿ ಸಿಬ್ಬಂದಿ ಮೇಲಿದ್ದು, ಮನಸ್ಸಿನಲ್ಲಿ ಉದ್ಬವಿಸುವ ಪ್ರಶ್ನೆಗಳಿಗೆ ಮಾ ಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಆರ್.ಗುರುಸ್ವಾಮಿ ಸಹಕಾರ ಕಾಯ್ದೆ ಪ್ರಮುಖ ಅಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳು ಮತ್ತು ಸಹಕಾರ ಸಂಘಗಳಿಗೆ ಅನ್ವಯಿಸುವ ತೆರಿಗೆ ಅಂಶಗಳ ಸಮಗ್ರವಾಗಿ ವಿವರಣೆ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಸೀಗೇಹಡ್ಲು ಹರೀಶ್, ನಿರ್ದೇಶಕ ಪಿ.ಶಶಿಕುಮಾರ್, ಸಮನ್ವಯಾಧಿಕಾರಿ ಎಂ.ಮಲ್ಲರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶಸ್, ವ್ಯವಸ್ಥಾಪಕ ಇಂದ್ರೇಶ್ ಉಪಸ್ಥಿತರಿದ್ದರು.ಫೋಟೋ: