ಕಾರಟಗಿ:
ಪಾಕಿಸ್ತಾನ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ನಾಶ ಮಾಡಿರುವ ಭಾರತದ ಸೈನಿಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ಈ ದಾಳಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ಧ ಅವರನ್ನು ಛೂ ಬಿಡುತ್ತಿದ್ದ ಪಾಕಿಸ್ತಾನಕ್ಕೂ ಎಚ್ಚರಿಕೆ ಆಗಿದೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆಯಲ್ಲಿ ಬಂಧನಕ್ಕೆ ಒಳಗಾಗಿರುವ ಶಾಸಕ ಜನಾರ್ದನ ರೆಡ್ಡಿ ಕುರಿತು ಮಾತನಾಡಿದ ಅವರು, ಒಂದು ಕಾಲದಲ್ಲಿ ರಿಪಬ್ಲಿಕ್ ಬಳ್ಳಾರಿ ಎನ್ನುವ ದುರುದ್ದೇಶವಿಟ್ಟುಕೊಂಡು ಪರ್ಯಾಯ ಸರ್ಕಾರವನ್ನೇ ನಡೆಸುವ ಮಟ್ಟಿಗೆ ಸರ್ವಾಧಿಕಾರತನ ಮೆರೆದ ವ್ಯಕ್ತಿಗೆ ಇಂದು ಈ ನೆಲದ ಕಾನೂನು, ಸಂವಿಧಾನ ಎಲ್ಲರಿಗಿಂತಲೂ ಮಿಗಿಲು ಎನ್ನುವುದನ್ನು ಪುನರ್ ಸಾರಿದೆ. ಕಾನೂನಿನ ಮುಂದೆ ಸಾವಿರಾರು ಕೋಟಿ ಹಣವಿದ್ದರೂ ನೆರವಿಗೆ ಬರುವುದಿಲ್ಲ. ಇಂದು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲದಕ್ಕಿಂತಲೂ ಕಾನೂನು, ಸಂವಿಧಾನ ಮುಖ್ಯ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.