ಕನ್ನಡಪ್ರಭವಾರ್ತೆ ನಾಪೋಕ್ಲು
ಹೊದ್ದೂರು ಗ್ರಾಮ ಪಂಚಾಯಿತಿಯ ಒಳಪಟ್ಟ ಕ್ಯಾಮಾಟ್ ಕುಂಬಳದಾಳು - ಮೂರ್ನಾಡ್ ರಸ್ತೆ ನವೀಕರಣ ಅಂಗವಾಗಿ 1.5 ಕೋಟಿ ರು. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ಶಾಸಕರ ವಿಶೇಷ ಅನುದಾನವಾಗಿ ನೀಡಿದ 50 ಕೋಟಿ ರು.ಗಳಲ್ಲಿ ಈ ಕಾಮಗಾರಿ ನಡೆಯುತ್ತಿದ್ದು ಗುಣಮಟ್ಟ ಸಮರ್ಪಕವಾಗಿದ್ದಲ್ಲಿ ಮಾತ್ರ ಬಿಲ್ ಪಾವತಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಹಂಸ ಮಾತನಾಡಿ ರಸ್ತೆ ಅಭಿವೃದ್ಧಿ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಶಾಸಕರು ವಿಶೇಷ ಕಾಳಜಿ ವಹಿಸಿ ಜನರ ಕೋರಿಕೆಯನ್ನು ಈಡೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಹೊದ್ದೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮದ ಚಿಟ್ಟಿಮಾಡ ಐನ್ ಮನೆ ರಸ್ತೆ ಕಾಮಗಾರಿ (5 ಲಕ್ಷ ರು.) ಮೇಕ್ ಮಣಿಯoಡ ಐನ್ ಮನೆ ರಸ್ತೆ ಕಾಮಗಾರಿ (5 ಲಕ್ಷ ರು.,) ಕುಂಬಲ ದಾಳು ಕರ್ನಯ್ಯನ ಐನ್ ಮನೆ ರಸ್ತೆ ಕಾಮಗಾರಿ (5. ಲಕ್ಷ ರು.) ಕಣ್ವ ಬಲಮುರಿ ಮಾರಿಯಮ್ಮ ದೇವಸ್ಥಾನದ ಸಮೀಪ ನೂತನ ಸಮುದಾಯ ಭವನ ನಿರ್ಮಾಣಕ್ಕೆ (9.5. ಲಕ್ಷ ರು.) ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನುರಾಧ, ಗ್ರಾಮ ಪಂಚಾಯಿತಿ ಸದಸ್ಯರಾದ ಚೌರೀರ ಅನಿತಾ, ಹಮೀದ್, ಮೊನ್ನಪ್ಪ, ಸುಮಾವತಿ, ಲಕ್ಷ್ಮೀ, ಅನುರಾಧ, ಕಡ್ಲೆರ ಟೈನಿ, ಮೊಯ್ದು, ಕೆ..ಆರ್. ಅನಿಲ್, ಚೌರಿರ ನವೀನ್, ಹೊದ್ದೂರು ಗ್ರಾಮ ಪಂಚಾಯಿತಿ ಪಿ.ಡಿ.ಒ ವತ್ಸಲಾ ಕುಮಾರಿ, ಹೊಸ್ಕೇರಿ ಪಿ.ಡಿ.ಒ ಅಬ್ದುಲ್ಲಾ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.