ಬೆಂಗಳೂರಿನದ್ದು ಹೆಚ್ಚು ತೀವ್ರತೆ ಹೊಂದಿದ್ದ ಸಣ್ಣ ಸ್ಫೋಟ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Mar 02, 2024, 01:54 AM ISTUpdated : Mar 02, 2024, 09:36 AM IST
Siddaramaiah

ಸಾರಾಂಶ

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಲಾಗಿದೆ. ಇದು ಸಣ್ಣ ಪ್ರಮಾಣದ ಸ್ಫೋಟವಾದರೂ ತೀವ್ರತೆ ಪರಿಣಾಮಕಾರಿಯಾಗಿತ್ತು. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಲಾಗಿದೆ. ಇದು ಸಣ್ಣ ಪ್ರಮಾಣದ ಸ್ಫೋಟವಾದರೂ ತೀವ್ರತೆ ಪರಿಣಾಮಕಾರಿಯಾಗಿತ್ತು. 

ಈ ಸ್ಫೋಟ ಪ್ರಕರಣದಲ್ಲಿ ಯಾರೂ ರಾಜಕಾರಣ ಮಾಡಬಾರದು. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಹೋಟೆಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವರಿಗೆ ಗಾಯಗಳಾಗಿವೆ. ಸದ್ಯ ಸಿಸಿಟಿವಿ ಪರಿಶೀಲನೆ‌ ನಡೆಯುತ್ತಿದೆ.

ಅಪರಿಚಿತ ವ್ಯಕ್ತಿಯೊಬ್ಬರು ಕ್ಯಾಶಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿರುವುದು, ಈ ವೇಳೆ ಅಲ್ಲೇ ಬ್ಯಾಗ್ ಇರಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ ಎಂದರು.

ಇದು ಉಗ್ರ ಕೃತ್ಯವೇ ಎಂಬ ಕುರಿತು ಖಚಿತವಾಗಿಲ್ಲ. ಎಲ್ಲರ ಕಾಲದಲ್ಲೂ ಇಂಥ ಘಟನೆಗಳು ನಡೆದಿವೆ. ಆದರೆ, ಇಂತಹ ಘಟನೆ ನಡೆಯಬಾರದು ಎಂದು ಹೇಳಿದರು.ಇತ್ತೀಚೆಗೆ ಇಂಥ ಘಟನೆ ನಡೆದಿರಲಿಲ್ಲ. 

ಮಂಗಳೂರಿನಲ್ಲಿ ಈ ಹಿಂದೆ ಈ ರೀತಿಯ ಘಟನೆ ನಡೆದಿತ್ತು. ಬಿಜೆಪಿ ಸರ್ಕಾರದಲ್ಲೂ ಹಲವು ಸ್ಫೋಟಗಳು ಆಗಿತ್ತು. ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ