ಇತಿಹಾಸ ಮರೆತ ಯಾವುದೇ ದೇಶಕ್ಕೆ ಉಳಿಗಾಲವಿಲ್ಲ: ನ್ಯಾ. ಸಂಜೀವಕುಮಾರ ಹಂಚಾಟೆ

KannadaprabhaNewsNetwork |  
Published : Mar 23, 2025, 01:37 AM IST
22ಡಿಡಬ್ಲೂಡಿ22ಕಾರ್ಯಕ್ರಮದಲ್ಲಿ ಕೆ.ಬಿ.ನಾವಲಗಿಮಠ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಎಲ್. ಪಾಟೀಲ ಮತ್ತು ಸಿಎಸ್‌ಐ ಕರ್ನಾಟಕ ಉತ್ತರ ಧರ್ಮಪ್ರಾಂತ್ಯದ ಬಿಷಪ್ ರೈ.ರೆ., ಡಾ.ಮಾರ್ಟಿನ್ ಬೋರ್ಗಾಯಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಭಾರತೀಯರಿಗೆ ರಾಮರಾಜ್ಯದ ಕಲ್ಪನೆಯೇ ಆದರ್ಶ. ಯಾವ ದೇಶದ ಸಂಸ್ಕೃತಿ ಬಲಿಷ್ಠವೋ, ಆ ಆದೇಶ ಸೌರ್ವಭಾಮತ್ವ, ಅಖಂಡವಾಗಿ ಇರುವುದಾಗಿ ಹೈಕೋರ್ಟ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಹೇಳಿದರು.

ಧಾರವಾಡ: ಭಾರತೀಯರಿಗೆ ರಾಮರಾಜ್ಯದ ಕಲ್ಪನೆಯೇ ಆದರ್ಶ. ಯಾವ ದೇಶದ ಸಂಸ್ಕೃತಿ ಬಲಿಷ್ಠವೋ, ಆ ಆದೇಶಛ ಸೌರ್ವಭಾಮತ್ವ, ಅಖಂಡವಾಗಿ ಇರುವುದಾಗಿ ಹೈಕೋರ್ಟ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಹೇಳಿದರು.

ನಗರದ ಡಾ.ಜಿ.ಎಂ. ಪಾಟೀಲ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಡಾ. ಜಿ.ಎಂ. ಪಾಟೀಲ ಜನ್ಮಶತಮಾನೋತ್ಸವ ಹಾಗೂ ಡಾ. ಜಿ.ಎಂ. ಪಾಟೀಲ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ದೇಶ ಕಟ್ಟುವುದು ಸಾಮಾನ್ಯ ಕೆಲಸ ಅಲ್ಲವೇ ಅಲ್ಲ. ಸಾವಿರಾರು ವರ್ಷಗಳ ಹಿಂದೆ ನಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆದರೂ, ನಮ್ಮ ಹಿರಿಯರು ದೇಶದ ಅಖಂಡತೆ ಉಳಿಸಿ, ಬೆಳೆಸಿ, ಭವಿಷ್ಯದ ಪೀಳಿಗೆಗೆ ನೀಡಿದ್ದು ಸ್ಮರಣೀಯ ಎಂದರು.

ನಮ್ಮ ಸಂಸ್ಕೃತಿ ಮೇಲೆ ದಾಳಿ ಮಾಡಿ, ನಮ್ಮ ಸಂಸ್ಕೃತಿಯ ಜೊತೆಗೆ ನಮ್ಮ ದೇವಾಲಯಗಳು ನಾಶಪಡಿಸುವ ಕೆಲಸ ನಡೆದಿದೆ. ಇದರಿಂದ ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳು ಭಾರತದಿಂದ ಕೈತಪ್ಪಿವೆ ಎಂದು ವಿಷಾದಿಸಿದರು.

ಇತಿಹಾಸ ಮರೆತ ಯಾವುದೇ ದೇಶಕ್ಕೆ ಉಳಿಗಾಲವಿಲ್ಲ. ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಅದರಲ್ಲಿ ದೇಶದ ಸಾಂಸ್ಕೃತಿಕ ಸೇರ್ಪಡೆಯೂ ಮಾಡಲಾಯಿತು. ಇದೇ ಕಾರಣಕ್ಕೆ ಭಾರತೀಯ ಸಂಸ್ಕೃತಿ ಉಳಿದು ಬಂದಿದೆ ಎಂದರು.

ಸಂವಿಧಾನ ಪೀಠಿಕೆಯಲ್ಲಿ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಜನತಂತ್ರವಿದ್ದು, ಇದರಲ್ಲಿ ಸಾಂಸ್ಕೃತಿಕತೆ ಸೇರ್ಪಡೆ ಮಾಡಲು ಸಂವಿಧಾನದ ಪೀಠಿಕೆಗೆ ತಿದ್ದುಪಡಿ ತಂದು, ದೇಶದ ಅಖಂಡತೆಯು ಕಾಯ್ದುಕೊಂಡಿದ್ದಾಗಿ ಹೇಳಿದರು.

ವಿಶ್ರಾಂತ ಮುಖ್ಯನ್ಯಾಯಮೂರ್ತಿ ಕೆ.ಶ್ರೀಧರ ರಾವ್, ಡಾ. ಜಿ.ಎಂ. ಪಾಟೀಲ ಅವರಲ್ಲಿ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆ ಹೆಚ್ಚಾಗಿತ್ತು. ಸಾರ್ವಜನಿಕರ ಹಣ ಬೆಂಕಿಯಂತೆ ಕಾಣುತ್ತಿದ್ದರು. ಎಂದಿಗೂ ಪೋಲು ಮಾಡುತ್ತಿರಲಿಲ್ಲ ಎಂದರು.

ಬಡ-ಮಧ್ಯಮ ವರ್ಗದ ಮಕ್ಕಳಿಗಾಗಿ ಕಾನೂನು ಕಾಲೇಜು ಪ್ರಾರಂಭಿಸುವ ಮೂಲಕ ಅನುಕೂಲ ಕಲ್ಪಿಸಿದರು. ಉಪಕಾರ ಮಾಡಿದವರನ್ನು ಎಂದಿಗೂ ಮರೆಯಲ್ಲ. ೧೯೭೪ರಲ್ಲಿ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವುದನ್ನು ಸ್ಮರಿಸಿದರು.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಇಂದಿನ ಕಲುಷಿತ ಬದುಕಿನಲ್ಲಿ ಡಾ. ಜಿ.ಎಂ. ಪಾಟೀಲ ಗುರುಗಳ ಅಗತ್ಯವಿದೆ. ರಾಜಕೀಯ, ನ್ಯಾಯಾಂಗ ಸೇರಿ ಪ್ರತಿ ರಂಗದ ಕುರಿತು ಎಲ್ಲೋ ಒಂದೆಡೆ ಬೇಸರ ಮೂಡಿದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಬಿ.ಆರ್. ಯಾವಗಲ್, ಅಶೋಕ ಹಾರನಹಳ್ಳಿ, ಯು.ಬಿ. ವೆಂಕಟೇಶ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಶಾಸಕ ಎನ್.ಎಚ್. ಕೋನರಡ್ಡಿ ಅನೇಕರು ಇದ್ದರು.

ಗಣ್ಯರಿಗೆ ಸನ್ಮಾನ

ಕೆಪಿಇ ಸಂಸ್ಥೆಯಲ್ಲಿ ನಿರಂತರ ೫೦ ವರ್ಷಗಳು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಬಿ. ನಾವಲಗಿಮಠ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಎಲ್. ಪಾಟೀಲ ಮತ್ತು ಸಿಎಸ್‌ಐ ಕರ್ನಾಟಕ ಉತ್ತರ ಧರ್ಮಪ್ರಾಂತ್ಯದ ಬಿಷಪ್ ರೈ.ರೆ., ಡಾ.ಮಾರ್ಟಿನ್ ಬೋರ್ಗಾಯಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ