ಅನುದಾನ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ: ಎನ್.ಚಲುವರಾಯಸ್ವಾಮಿ

KannadaprabhaNewsNetwork |  
Published : Mar 15, 2026, 01:45 AM IST
14ಕೆಎಂಎನ್ ಡಿ18 | Kannada Prabha

ಸಾರಾಂಶ

ಕೆಎಸ್‌ನ ಎಂದರೆ ಬಲು ಪ್ರೀತಿ ಇದೆ. ಕೆಎಸ್‌ನ ಟ್ರಸ್ಟ್‌ ಆಶಯದಂತೆ ಇಲ್ಲಿನ ಕೆರೆಗೆ ಕೆಎಸ್‌ನ ಸರೋವರ, ವಾಕಿಂಗ್, ಜಾಗಿಂಗ್ ಪಾಥ್, ಸ್ಮಾರಕ, ಸ್ವಾಗತ ಕಮಾನು ನಿರ್ಮಾಣ, ಕೃಷಿ ಇಲಾಖೆ ಕಟ್ಟಡ, ಕೆಇಬಿ ಎಕ್ಸಿಕ್ಯೂಟೀವ್‌ ಎಂಜಿನಿಯರ್‌ ಕಚೇರಿ, ನಾಲೆಗಳ ಆಧುನೀಕರಣಕ್ಕೆ ಆದ್ಯತೆ ಮೇರೆಗೆ ಮಾಡಿಕೊಡಲಾಗುವುದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ನೀಡಿರುವ ಅನುದಾನದಂತೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ ನೀಡಲಾಗಿದೆ. ಅನುದಾನ ನೀಡಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಿಕ್ಕೇರಮ್ಮಗ್ರಾಮಾಂತರ ಕ್ರೀಡಾ ಸಂಘದ ಜಯಲಕ್ಷ್ಮೀ ಹಾಗೂ ದಿ.ಶ್ರೀ ಫೈಲ್ವಾನ್‌ ಚನ್ನೇಗೌಡ ಒಳಾಂಗಣ ಶಟಲ್ ಬ್ಯಾಡಿಂಟನ್‌ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿ, ಅನುದಾನ ವಿಚಾರದಲ್ಲಿ ಜನರಲ್ಲಿ ದ್ವಂದ್ವ ಭಾವನೆ, ಟೀಕೆ ಬೇಡ ಎಂದರು.

ಮಂಡ್ಯ ಎಂದರೆ ರೈತ, ಕೃಷಿಕ ಎಂಬ ಹೆಸರಿದೆ. ಮೈಸೂರು ಮಹಾರಾಜರು ಮಂಡ್ಯದಲ್ಲಿ ವಿ.ಸಿ.ಫಾರ್ಮ್ ಸ್ಥಾಪಿಸಿದರು. ನಮ್ಮ ಸರ್ಕಾರ ಕೃಷಿ ವಿವಿ ನೀಡಿದೆ. ಸರ್ಕಾರಿ ಸ್ವಾಮ್ಯದ ಮೈಷುಗರ್‌ ಕಾರ್ಖಾನೆ ಉಳಿವಿಗಾಗಿ ಬಹುಕೋಟಿ ನೀಡಿ ಕಾರ್ಖಾನೆ ಶಾಶ್ವತ ನೆಲೆಗೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಆರು ತಿಂಗಳ ಹಿಂದೆ ನನಗೆ ತಿಳಿಸಿದ್ದರೆ ಕಿಕ್ಕೇರಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಅನುಕೂಲವಾಗುತ್ತಿತ್ತು. ಮುಂದಿನ ದಿನದಲ್ಲಿ ಪಟ್ಟಣ ಪಂಚಾಯ್ತಿ ಆದ್ಯತೆ ನೀಡಲಾಗುವುದು ಎಂದರು.

ಹೋಬಳಿ ಕೇಂದ್ರ ಕಿಕ್ಕೇರಿಯಲ್ಲಿ ಕೆಪಿಸಿಸಿ ಸದಸ್ಯ ಸುರೇಶ್‌ ಜಿಲ್ಲಾ ಮಟ್ಟದ ಕ್ರೀಡಾಂಗಣದಂತೆ ನಿರ್ಮಿಸಿದ್ದಾರೆ. ಇವರ ಕ್ರೀಡಾಸಕ್ತಿ ಮಾದರಿಯಾಗಿದೆ. ಹಣೆಬರಹ ಗಟ್ಟಿಯಾಗಿದ್ದರೆ ಸುರೇಶ್‌ಗೆ ಮುಂದೆ ರಾಜಕೀಯ ಭವಿಷ್ಯವಿದೆ. ಉತ್ತಮ ಸ್ಥಾನಮಾನ ಸಿಗಲಿದೆ ಎಂದರು.

ರಾಜ್ಯ ಹೆದ್ದಾರಿ ಶ್ರೀರಂಗಪಟ್ಣಣದಿಂದ ಚನ್ನರಾಯಪಟ್ಟಣ ಮಾರ್ಗದವರೆಗೆ ರಸ್ತೆ ಆಧುನೀಕರಣಗೊಳಿಸಲಾಗುವುದು. ತನ್ನ ವೃತ್ತಿ ಬದುಕಿನ ಪ್ರಥಮ ಹೆಜ್ಜೆ ಕಿಕ್ಕೇರಿ. ಕೆಎಸ್‌ನ ಎಂದರೆ ಬಲು ಪ್ರೀತಿ ಇದೆ. ಕೆಎಸ್‌ನ ಟ್ರಸ್ಟ್‌ ಆಶಯದಂತೆ ಇಲ್ಲಿನ ಕೆರೆಗೆ ಕೆಎಸ್‌ನ ಸರೋವರ, ವಾಕಿಂಗ್, ಜಾಗಿಂಗ್ ಪಾಥ್, ಸ್ಮಾರಕ, ಸ್ವಾಗತ ಕಮಾನು ನಿರ್ಮಾಣ, ಕೃಷಿ ಇಲಾಖೆ ಕಟ್ಟಡ, ಕೆಇಬಿ ಎಕ್ಸಿಕ್ಯೂಟೀವ್‌ ಎಂಜಿನಿಯರ್‌ ಕಚೇರಿ, ನಾಲೆಗಳ ಆಧುನೀಕರಣಕ್ಕೆ ಆದ್ಯತೆ ಮೇರೆಗೆ ಮಾಡಿಕೊಡಲಾಗುವುದು ಎಂದರು.

ಹೇಮಾವತಿ ನಾಲಾ ನಂ.47 ರಿಂದ 54 ರವರೆಗೆ ನಾಲೆ ಆಧುನೀಕರಣ ಮಾಡಬೇಕು. ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದೇನೆ. ಮನೆ ದುಡ್ಡು ಹಾಕಿ ಕೆಲಸ ಮಾಡುತ್ತಿದ್ದೇನೆ. ಗ್ರಾಮವನ್ನು ರೆವಿನ್ಯೂ ಗ್ರಾಮವಾಗಿಸಿ, ತಾಲೂಕಿನಲ್ಲಿ ಅತೀ ಹೆಚ್ಚು ರೈತರು ಇದ್ದಾರೆ. ಸೆಸ್ಕಾಂನ ಸಬ್‌ಡಿವಿಷನ್ ಮಾಡಬೇಕು. ಪ್ರೇಮಕವಿ ಕೆಎಸ್‌ನಟ್ರಸ್ಟ್‌ನ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸುವಂತೆ ಇದೇ ವೇಳೆ ಸುರೇಶ್ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರಾದ ಆರ್‌ಟಿಒ ಮಲ್ಲಿಕಾರ್ಜುನ, ಅಂತಾರಾಷ್ಟ್ರೀಯ ಗಾಯಕ ಕಿಕ್ಕೇರಿಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ, ಪತ್ರಕರ್ತ ಬಳ್ಳೇಕೆರೆ ಮಂಜುನಾಥ್, ಹರಿಚರಣತಿಲಕ್, ಕೆ.ಆರ್. ನೀಲಕಂಠ, ಡಿವೈಎಸ್‌ಪಿ ಬಿ.ಬಿ. ಲಕ್ಷ್ಮೇಗೌಡ, ಪ್ರಸನ್ನ ದೇವನೂರು, ಧರ್ಮೇಂದ್ರಕುಮಾರ್, ರಂಗಸ್ವಾಮಿ, ಎಲ್.ಎಸ್. ಕಿಕ್ಕೇರಿಗೌಡ, ರಾಜಶೇಖರ್, ಹನುಮಂತಶೆಟ್ಟಿ, ಚಂದ್ರಮೋಹನ್, ಜಾನೇಗೌಡ ಮತ್ತಿತರರನ್ನು ಗೌರವಿಸಲಾಯಿತು.

ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಚಿನ್‌ ಚಲುವರಾಯಸ್ವಾಮಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಅಶೋಕ್, ಕೆಪಿಸಿಸಿ ಸದಸ್ಯ ಸುರೇಶ್, ರಾಜ್ಯ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆಂಪರಾಜು, ಮುಖಂಡರಾದ ಬಿ.ಎಲ್.ದೇವರಾಜು, ಪ್ರಕಾಶ್, ಬಿ. ನಾಗೇಂದ್ರಕುಮಾರ್, ಎಂ.ಡಿ.ಕೃಷ್ಣಮೂರ್ತಿ, ಎಲ್. ದೇವರಾಜು, ವಿಜಯರಾಮೇಗೌಡ, ಎಂ.ಬಿ. ಹರೀಶ್, ಡಿ. ಪ್ರೇಮಕುಮಾರ್, ಚಂದ್ರೇಗೌಡ, ಈರಪ್ಪ, ಶಿವಣ್ಣ. ಎಲ್.ಪಿ. ನಂಜಪ್ಪ, ಕೆ.ವಿ. ಅರುಣಕುಮಾರ್, ಪುರುಷೋತ್ತಮ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾವುದೇ ಕನ್ನಡ ಶಾಲೆ ಮುಚ್ಚುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ ಭರವಸೆ
ಯುವಕರಿಗೆ ಉದ್ಯೋಗ ಕೊಡಿಸುವ ಗುರಿ ಹೊಂದಲಾಗಿದೆ