ಕೊಪ್ಪಳ:
ಹಬ್ಬವನ್ನು ಸಂತೋಷ, ಸಂಭ್ರಮದಿಂದ ಆಚರಿಸಬೇಕು. ಶಾಂತಿ ಕದಡುವ ಕಿಡಿಗೇಡಿ ವಿರುದ್ಧ ಮುಲಾಜಿಲ್ಲದೆ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದ ಅವರು, ಗಣೇಶ ಚತುರ್ಥಿ ಮತ್ತು ಈದ್-ಮೀಲಾದ್ ಒಟ್ಟಿಗೆ ಬಂದಿರುವುದರಿಂದ ಸೌರ್ಹಾದತೆಯಿಂದ ಆಚರಿಸಬೇಕು. ಸಂಘಟಕರು ಈ ದಿಸೆಯಲ್ಲಿ ಕ್ರಮವಹಿಸಬೇಕು. ಅಗತ್ಯ ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು. ನಮಗೂ ಸಹ ಸಹಕಾರ ನೀಡಬೇಕು ಎಂದು ಹೇಳಿದರು.
ಗಣೇಶ ಪ್ರತಿಷ್ಠಾಪನೆಯ 9ನೇ ದಿನವಾದ ಸೆ. 4ರಂದೇ ಈದ್-ಮೀಲಾದ್ ಬಂದಿದೆ. ಹೀಗಾಗಿ, ಅಂದು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಮೆರವಣಿಗೆಗೆ ಅವಕಾಶವಿಲ್ಲ. ಯಾರಿಗೂ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದ ಅವರು, ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯಲ್ಲಿ ಅರ್ಧಕ್ಕೆ ಬಿಟ್ಟು ತೆರಳಿದರೆ ಅದನ್ನು ಯಾರು ವಿಸರ್ಜಿಸಬೇಕು. ಇಂತಹ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸಬೇಕು ಎಂದರು.ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದವರು ಎಚ್ಚರಿಕೆ ವಹಿಸಬೇಕು. ಕಳೆದ ವರ್ಷ ಗಲಾಟೆಗೆ ಕಾರಣವಾದ ಒಂದು ಸಂಘಟನೆಗೆ ಪರವಾನಗಿ ನೀಡದಂತೆ ತಹಸೀಲ್ದಾರ್‌ಗೆ ನಾನೇ ಪತ್ರ ಬರೆದಿದ್ದೇನೆ. ಏಕಗವಾಕ್ಷಿಯಡಿ ಪರವಾನಗಿ ನೀಡಲಾಗುತ್ತಿರುವುದರಿಂದ ಇದು ಆಯೋಜರಿಗೆ ಮತ್ತು ನಮಗೂ ಅನುಕೂಲವಾಗಿದೆ ಎಂದರು.
ಗಣೇಶ ಚತುರ್ಥಿ ಹಾಗೂ ಈದ್-ಮೀಲಾದ್ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ. ಅದರಲ್ಲಿ ಶಾಂತಿ ಕದಡುವ, ಪ್ರಚೋದಿಸುವ ಪೋಸ್ಟ್ ಮಾಡುವುದು, ಲೈಕ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸಲಾಗುವುದು ಎಂದು ಎಸ್ಪಿ ಎಚ್ಚರಿಸಿದ್ದಾರೆ.