ಹಿಂದೂಗಳು ಒಗ್ಗಟ್ಟಾಗಿರದಿದ್ದರೆ ಭವಿಷ್ಯವಿಲ್ಲ: ನೀರಜ ದೋನೆರಿಯಾ

KannadaprabhaNewsNetwork |  
Published : Sep 29, 2024, 01:40 AM IST
ಚಿತ್ರದುರ್ಗಮೂರನೇ ಪುಟಕ್ಕೆ (ಶೋಭಾಯಾತ್ರೆ ಪೂರಕ) | Kannada Prabha

ಸಾರಾಂಶ

ಇತ್ತೀಚಿನ ದಿನಮಾನದಲ್ಲಿ ಹಿಂದೂ ಸಮಾಜವನ್ನು ವಿಘಟಿಸುವ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ತಕ್ಕ ಉತ್ತರವನ್ನು ನಾವುಗಳು ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಿಂದೂಗಳು ಒಗ್ಗಟ್ಟಾಗದೆ ಬಿಡಿ ಬಿಡಿಯಾಗಿದ್ದರೆ ಭವಿಷ್ಯವಿಲ್ಲ. ಗಣೇಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾವೆಲ್ಲಾ ಸಂಘಟನೆಯಾಗಬೇಕಿದೆ ಎಂದು ಭಜರಂಗ ದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯಾ ಹೇಳಿದರು.

ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್‍ ವತಿಯಿಂದ ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಮುನ್ನಾ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಹಿಂದೂ ಸಮಾಜವನ್ನು ವಿಘಟಿಸುವ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ತಕ್ಕ ಉತ್ತರವನ್ನು ನಾವುಗಳು ನೀಡಬೇಕಿದೆ. ಹಿಂದೂ ಸಾಮ್ರಾಜ್ಯಕ್ಕೆ ತನ್ನದೆ ಆದ ಇತಿಹಾಸವಿದೆ ಎಂಬುದ ಯಾರೂ ಮರೆಯಬಾರದೆಂದರು.

ನಮ್ಮನ್ನಾಳಿದ ಶ್ರೀರಾಮನ ದೇವಾಲಯವನ್ನು ಆಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಹಿಂದೂಗಳ ಹೆಮ್ಮೆಯ ಸಂಕೇತ. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಈ ಶೋಭಾಯಾತ್ರೆ ಅತಿ ದೊಡ್ಡದಾದ ಶೋಭಾಯಾತ್ರೆಯಾಗಿದೆ ದೇಶದಲ್ಲಿಯೇ ಹೆಸರುವಾಸಿಯಾಗಿದೆ. ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳ ಲಕ್ಷಾಂತರ ಜನರ ಸೇರಿಸುವುದರ ಮೂಲಕ ಅತಿ ದೊಡ್ಡದಾದ ಕಾರ್ಯವನ್ನು ಮಾಡಿದೆ. ಇದು ಇದೇ ರೀತಿ ಮುಂದುವರೆಯಬೇಕಿದೆ. ಇಲ್ಲಿ ಮಠಗಳ ಸಂಖ್ಯೆ ಹೆಚ್ಚಾಗಿದ್ದು ಸನಾತನ ಧರ್ಮ ಗಟ್ಟಿಯಾಗಿ ನಿಂತಿದೆ ಎಂದರು.

ಮಾದಾರಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಶ್ರೀಗಳು, ಶಿವಲಿಂಗಾನಂದ ಶ್ರೀಗಳು, ಪುರುಷೋತ್ತಮಾನಂದ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಮಡಿವಾಳ ಮಾಚಿದೇವ ಶ್ರೀಗಳು, ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಸಿ.ವಿರೇಂದ್ರ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷೆ ಸುಮಿತ ರಾಘವೇಂದ್ರ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಆಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಕಾರ್ತಿಕ್, 2024ರ ಹಿಂದೂ ಮಹಾ ಗಣಪತಿ ಸಮಿತಿಯ ಅಧ್ಯಕ್ಷ ನಯನ, ಮಾರ್ಗದರ್ಶಕರಾದ ಬದರಿನಾಥ್, ಕೇಶವ್, ಪ್ರಭಂಜನ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!