ಸಮ ಸಮಾಜ ನಿರ್ಮಾಣದ ಕನಸು ನನಸಾಗಲು ಹೋರಾಟ ಅಗತ್ಯ

KannadaprabhaNewsNetwork |  
Published : Sep 29, 2024, 01:40 AM IST
27ಕೆಕೆಡಡಿಯು2. | Kannada Prabha

ಸಾರಾಂಶ

ಕಡೂರು, ಅಂಬೇಡ್ಕರ್ ಪ್ರತಿಪಾದಿಸಿದ ಸಮ ಸಮಾಜ ನಿರ್ಮಾಣದ ಕನಸು ನನಸಾಗಲು ಇನ್ನೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಇರುವುದು ವಿಪರ್ಯಾಸ ಎಂದು ಕರ್ನಾಟಕ ಭೀಮಸೇನೆ ಸಂಘದ ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ ವಿಷಾದಿಸಿದರು.

ರ್ನಾಟಕ ಭೀಮ ಸೇನೆ ತಾಲೂಕು ಘಟಕ ಉದ್ಘಾಟಿಸಿ ಶಂಕರ ರಾಮಲಿಂಗಯ್ಯ

ಕನ್ನಡಪ್ರಭ ವಾರ್ತೆ, ಕಡೂರು

ಅಂಬೇಡ್ಕರ್ ಪ್ರತಿಪಾದಿಸಿದ ಸಮ ಸಮಾಜ ನಿರ್ಮಾಣದ ಕನಸು ನನಸಾಗಲು ಇನ್ನೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಇರುವುದು ವಿಪರ್ಯಾಸ ಎಂದು ಕರ್ನಾಟಕ ಭೀಮಸೇನೆ ಸಂಘದ ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ ವಿಷಾಧಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ಭೀಮ ಸೇನೆ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಸಾಕಾರವಾಗಬೇಕಾಗಿದೆ. ಕೇವಲ ದಲಿತರಷ್ಟೆ ಅಲ್ಲ, ಎಲ್ಲ ವರ್ಗಗಳಲ್ಲೂ ಶೋಷಿತರು,ನೊಂದವರು ಮತ್ತು ದಮನಿತರಿದ್ದಾರೆ. ಅವರಿಗಾದ ಅನ್ಯಾಯ ಸರಿಪಡಿಸಬೇಕಾದರೆ ಸಂಘಟಿತ ಹೋರಾಟ ಬಹುಮುಖ್ಯ. ಸಂಘಟನೆಗಳು ನೊಂದವರ ಪಾಲಿನ ಶಕ್ತಿ ಯಾಗಬೇಕು. ಆ ಕಾರ್ಯವನ್ನು ಭೀಮ್ ಸೇನೆ ಮಾಡುತಲಿದೆ. ಸೇನೆ ತಾಲೂಕು ಘಟಕ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ‌ ನೊಂದವರ ಧ್ವನಿಯಾಗಲಿ ಎಂದರು.

ಸಂಘಟನೆ ರಾಜ್ಯಕಾರ್ಯಾಧ್ಯಕ್ಷ ದೇವಿಕುಮಾರ್ ಮಾತನಾಡಿ, ಭೀಮ್ ಸೇನೆ ಜಿಲ್ಲೆಯಲ್ಲಿ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜ ದಲ್ಲಿ ಎಲ್ಲ ವರ್ಗಗಳಿಗೂ ಸಮಾನತೆ ದೊರೆತು ಸ್ವಾಸ್ಥ್ಯ ಮತ್ತು ಸ್ವಾರ್ಥ ರಹಿತ ಸಮಾಜ ನಿರ್ಮಾಣಕ್ಕೆ ಭೀಮ್ ಸೇನೆ ಸದಸ್ಯರು ಸದಾ ಕ್ರಿಯಾಶೀಲ ವಾಗಿ ಹೋರಾಡಲಿ ಎಂದು ಆಶಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಕುಂಕನಾಡು ಮಂಜುನಾಥ್ ಮಾತನಾಡಿ, ಕರ್ನಾಟಕ ಭೀಮ್ ಸೇನೆ ಒಂದು ವರ್ಗಕ್ಕೆ ಸೀಮಿತವಲ್ಲ. ಬದಲಾಗಿ ಎಲ್ಲ ವರ್ಗದ ಶೋಷಿತರು, ತುಳಿತಕ್ಕೊಳಗಾದವರ, ನೊಂದವರ ಪರವಾಗಿ ಸಮ ಸಮಾಜದ ಕಲ್ಪನೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಜಿಲ್ಲಾಘಟಕ ಈ ನಿಟ್ಟಿನಲ್ಲಿ ರಚನಾತ್ಮಕ ಮತ್ತು ವೈಚಾರಿಕ ಚಿಂತನೆ ನಡೆಸಿ ಸದಾ ಹೋರಾಟದಲ್ಲಿ‌ ಮಂಚೂಣಿಯಲ್ಲಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಭೀಮ್ ಸೇನೆ ಸದಸ್ಯರು ಪಟ್ಟಣದ ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಅಂಬೇಡ್ಕರ್ ಪ್ರತಿಮೆಗಳಿಗೆ ಪುಷ್ಪಹಾರ ಸಮರ್ಪಿಸಿ ನಂತರ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಸಂಘಟನಾ ಕಾರ್ಯದರ್ಶಿ ಮೈಸೂರು ಮಂಜುನಾಥ್, ಹಬೀಬ್ ಖಾನ್, ಸಿದ್ದರಾಮಪ್ಪ, ಅಣ್ಣಪ್ಪ, ಕುಮಾರ್,ತಾಲೂಕು ಅಧ್ಯಕ್ಷ ರಂಗನಾಥ್, ಓಬಳಪ್ಪ, ವಕೀಲ ಶಿವಕುಮಾರ್, ಅನಿಲ್ ಆನಂದ್, ರತ್ನಮ್ಮ, ನರಸಿಂಹ‌ಮೂರ್ತಿ, ಕೃಷ್ಣಕೀರ್ತಿ, ಜಿಲ್ಲಾ ಸಮಿತಿ ಪದಾಧಿಕಾರಿಗಳು ಇದ್ದರು.

27ಕೆಕೆಡಿಯು2.

ಕಡೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಭೀಮ ಸೇನೆಯ ತಾಲೂಕು ಘಟಕ ಉದ್ಘಾಟನೆ ನಡೆಯಿತು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ