ಪಂಚಮಸಾಲಿ ಮಠದಲ್ಲಿ ಸಭೆಗೆ ಅವಕಾಶ ಬೇಡ

KannadaprabhaNewsNetwork |  
Published : Apr 23, 2026, 02:00 AM IST
ಪಂಚಮಸಾಲಿ ಪೀಠ22 HRR. 004 | Kannada Prabha

ಸಾರಾಂಶ

ಹರಿಹರ ಪಂಚಸಮಸಾಲಿ ಪೀಠದಲ್ಲಿ ಪೀಠದಲ್ಲಿ ಏ.24ರ ಮಧ್ಯಾಹ್ನ 3ಕ್ಕೆ ಬಸವೋತ್ಸವವನ್ನು ಆಚರಿಸಿದರೆ ಪೀಠದ ಆಸ್ತಿಗಳಿಗೆ ಧಕ್ಕೆಯಾಗಿ, ಸಮಾಜದವರು ಪರ-ವಿರೋಧ ಗುಂಪಾಗಿ, ಗಲಾಟೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಕಾರ್ಯದರ್ಶಿ, ಟ್ರಸ್ಟಿ ಜ್ಯೋತಿಪ್ರಕಾಶ ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಲಿಖಿತ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ಪಂಚಸಮಸಾಲಿ ಪೀಠದಲ್ಲಿ ಪೀಠದಲ್ಲಿ ಏ.24ರ ಮಧ್ಯಾಹ್ನ 3ಕ್ಕೆ ಬಸವೋತ್ಸವವನ್ನು ಆಚರಿಸಿದರೆ ಪೀಠದ ಆಸ್ತಿಗಳಿಗೆ ಧಕ್ಕೆಯಾಗಿ, ಸಮಾಜದವರು ಪರ-ವಿರೋಧ ಗುಂಪಾಗಿ, ಗಲಾಟೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಕಾರ್ಯದರ್ಶಿ, ಟ್ರಸ್ಟಿ ಜ್ಯೋತಿಪ್ರಕಾಶ ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಲಿಖಿತ ಮನವಿ ಸಲ್ಲಿಸಿದರು.

ಈಗಾಗಲೇ ಟ್ರಸ್ಟ್‌ನಿಂದಲೇ ಮುಂದಿನ ದಿನಗಳಲ್ಲಿ ಬಸವ ಜಯಂತಿ ಆಚರಿಸಲು ದಿನಾಂಕ ನಿಗದಿಪಡಿಸಿದ್ದು, ಶ್ರೀಪೀಠದ ಟ್ರಸ್ಟಿಗಳು ಹಾಗೂ ಸಮಾಜ ಬಾಂಧವರು ತೀರ್ಮಾನಿಸಿದ್ದು, ಹಾಗಾಗಿ ಏ.24ರಂದು ಶ್ರೀಪೀಠದಲ್ಲಿ ಯಾವುದೇ ಸಭೆ ನಡೆಸಲು ಅವಕಾಶ ಮಾಡಿಕೊಡಬಾರದು ಎಂದು ಇಲಾಖೆಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಶ್ರೀಪೀಠದಲ್ಲಿ ಏ.24ರ ಮಧ್ಯಾಹ್ನ 3ರಿಂದ ಬಸವೋತ್ಸವ ಶ್ರೀಪೀಠದ ನಿಷ್ಟಾವಂತ ಭಕ್ತರ ಹಾಗೂ ಸಮಾಜ ಬಾಂಧವರ ಬೃಹತ್ ರಾಜ್ಯ ಸಮಾವೇಶ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿರುವುದನ್ನು, ಶ್ರೀ ಪೀಠದ ಉಚ್ಛಾಟಿತ ಶ್ರೀ ವಚನಾನಂದ ಸ್ವಾಮೀಜಿ ಭಾವಚಿತ್ರವನ್ನೂ ಹಾಕಿಕೊಂಡಿದ್ದಾರೆ. ಪ್ರಕಟಣೆಯನ್ನು ಹೊರಡಿಸಿರುವವರು ಆಡಳಿತಾಧಿಕಾರಿಗಳು ಡಾ.ರಾಜಕುಮಾರ ಮತ್ತು ಪರಮೇಶ್ವರ ಗೌಡ್ರು, ಅಧ್ಯಕ್ಷರು, ಲೆಕ್ಕ ಕೊಡು ಚಳವಳಿ ಹೋರಾಟ ಸಮಿತಿಯೆಂಬುದಾಗಿ ನಮೂದಿಸಿದ್ದಾರೆ ಎಂದು ವಿವರಿಸಿದ್ದಾರೆ.

ಟ್ರಸ್ಟಿನವರು ಏ.13ರ ಸಭೆಯಲ್ಲಿ ಶ್ರೀ ವಚನಾನಂದ ಸ್ವಾಮೀಜಿಗೆ ಪೀಠದಿಂದ ಉಚ್ಛಾಟನೆ ಮಾಡಿ, ಶ್ರೀಗಳನ್ನು ಗೌರವ ಪೂರ್ವಕವಾಗಿ ಪೀಠದಿಂದ ಹೊರ ಹೋಗಲು ತಿಳಿಸಿದ್ದೇವೆ. ಡಾ.ರಾಜಕುಮಾರರನ್ನು ಏ.17ರಂದು ಟ್ರಸ್ಟ್‌ನ ತುರ್ತು ಸಭೆಯಲ್ಲೂ ಶ್ರೀ ಪೀಠದ ಆಡಳಿತಾಧಿಕಾರಿ ಸ್ಥಾನದಿಂದ ಅಮಾನತುಗೊಳಿಸಿ, ಪತ್ರದ ಮೂಲಕ ಅಮಾನತುಗೊಳಿಸಿದ ವಿಷಯವನ್ನೂ ಡಾ.ರಾಜಕುಮಾರರಿಗೆ ತಿಳಿಸಿದ್ದೇವೆ. ಇನ್ನು ಪರಮೇಶ್ವರಗೌಡ್ರು ಹೊಳೆ ಸಿರಿಗೆರೆಯವರು ನಮ್ಮ ಯಾವುದೇ ಟ್ರಸ್ಟಿನಲ್ಲಾಗಲೀ, ರಾಜ್ಯ ಸಂಘ, ಜಿಲ್ಲಾ ಸಂಘ, ತಾಲೂಕು ಸಂಘದಲ್ಲಾಗಲೀ ಯಾವುದೇ ಪದವಿಯಲ್ಲೂ ಇಲ್ಲ. ತಾವೇ ಬಂದು ಕಾನೂನು ಬಾಹಿರ ಸಂಘವನ್ನು ಸ್ವಯಂ ಘೋಷಿಸಿಕೊಂಡು, ತಾವೇ ಆ ಸಂಘದ ಅಧ್ಯಕ್ಷರೆಂದು ಬರೆದುಕೊಂಡಿದ್ದಾರೆ ಎಂದು ಟ್ರಸ್ಟಿಗಳು ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಉಚ್ಚಾಟಿತ ಶ್ರೀ ವಚನಾನಂದ ಸ್ವಾಮೀಜಿ, ಡಾ.ರಾಜಕುಮಾರ, ಪರಮೇಶ್ವರ ಗೌಡ್ರು ಈ ಮೂವರಿಗೂ ಶ್ರೀ ಪೀಠದ ಆವರಣದಲ್ಲಿ ಯಾವುದೇ ಸಭೆ, ಸಮಾರಂಭ, ಪತ್ರಿಕಾಗೋಷ್ಟಿಯನ್ನು ನಡೆಸುವ ನೈತಿಕ ಹಕ್ಕು ಹಾಗೂ ಅಧಿಕಾರ ಇರುವುದಿಲ್ಲ. ಈ ಮೂವರೂ ಹೊರಡಿಸಿದ ಪ್ರಕಟಣೆಯಲ್ಲಿ ಶ್ರೀಪೀಠದ ನಿಷ್ಠಾವಂತ ಭಕ್ತರು ಬರಬೇಕೆಂದು ನಮೂದಿಸಿ, ಸಮಾಜದಲ್ಲಿ ಗೊಂದಲ ಉಂಟು ಮಾಡಿ, ಪರ-ವಿರುದ್ಧದ ಗುಂಪುಗಳನ್ನಾಗಿಸಿ, ಸಮಾಜ ಒಡೆಯುವ ಹುನ್ನಾರ ಮಾಡಿಕೊಂಡು, ಗಲಾಟೆಗೆ, ಗದ್ದಲಕ್ಕೆ ಎಡೆ ಮಾಡಿಕೊಟ್ಟು, ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿರುವುದು ನಮಗೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಹಿಂದೆಯೇ ಪತ್ರದ ಮುಖಂಡ ಉಚ್ಛಾಟಿತ ಶ್ರೀ ವಚನಾನಂದ ಸ್ವಾಮೀಜಿ, ಅಮಾನತ್ತಿರುವ ಆಡಳಿತಾಧಿಕಾರಿ ಡಾ.ರಾಜಕುಮಾರ, ಸ್ವಯಂ ಘೋಷಿತ ಲೆಕ್ಕ ಕೊಡಿ ಚಳವಳಿ ಹೋರಾಟ ಸಮಿತಿಯ ಅಧ್ಯಕ್ಷ ಪರಮೇಶ್ವರ ಗೌಡ್ರು ಇವರು ಶ್ರೀಪೀಠಕ್ಕೆ, ಸಮಾಜಕ್ಕೆ, ಸಮಾಜ ಬಾಂಧ‍ವರಲ್ಲಿ ಗೊಂದಲ ಉಂಟು ಮಾಡುತ್ತಿರುವುದನ್ನು ಶ್ರೀಪೀಠದ ಆಸ್ತಿಪಾಸ್ತಿಗೆ ಧಕ್ಕೆ ಹಾನಿ, ಮಾಡುತ್ತಾರೆಂಬ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದೇವೆ. ಹಾಗಾಗಿ ಏ.24ರಂದು ಯಾವುದೇ ಸಭೆ, ಕಾರ್ಯಕ್ರಮ ಕ್ಕೆ ಶ್ರೀಪೀಠದಲ್ಲಿ ಅ‍ವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಟ್ರಸ್ಟ್‌ನವರು ಮುಂದೊಂದು ದಿನ ಬಸವ ಜಯಂತಿಯನ್ನು ಆಚರಿಸಲು ದಿನಾಂಕ ನಿಗದಿಪಡಿಸಿದ್ದು, ಶ್ರೀಪೀಠದ ಟ್ರಸ್ಟ್‌ನವರು ಹಾಗೂ ಸಮಾಜ ಬಾಂಧವರು ಸೇರಿ, ನಿಗದಿತ ದಿನದಂದು ಬಸವೇಶ್ವರರ ಜಯಂತಿ ಆಚರಿಸುತ್ತೇವೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ರದ್ದು
ಮಜೇಥಿಯಾ, ಫ್ರೊ.ಅಚ್ಯುತ್‌, ಸಂಗ್ರೇಶಿಗೆ ಕವಿವಿ ಗೌಡಾ