ತಾಲೂಕಿನ ರಾಘವಪುರ ಗ್ರಾಮದ 2ನೇ ಬ್ಲಾಕ್‌ನಲ್ಲಿರುವ ಕಣಿಯರ ಬೀದಿಯಲ್ಲಿ ಚರಂಡಿ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಗ್ರಾಪಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ರಾಘವಪುರ ಗ್ರಾಮದ 2ನೇ ಬ್ಲಾಕ್‌ನಲ್ಲಿರುವ ಕಣಿಯರ ಬೀದಿಯಲ್ಲಿ ಚರಂಡಿ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಗ್ರಾಪಂ ಆಡಳಿತಾಧಿಕಾರಿ ಹಾಗೂ ಪಿಡಿಒ ಏನು ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ಬಂದು ದೇಶಕ್ಕೆ 7 ದಶಕಗಳು ಮುಗಿವ ಹಂತದಲ್ಲಿದ್ದರೂ ಇನ್ನೂ ಗ್ರಾಮದ ಕಣಿಯರ ಬೀದಿಯಲ್ಲಿ ಇನ್ನೂ ಕೊಳಚೆ ನೀರು ತುಳಿದುಕೊಂಡು ಓಡಾಡುವ ಸ್ಥಿತಿಯಲ್ಲಿದ್ದೇವೆ ಎಂದು ಗ್ರಾಮದಲ್ಲಿ ಆಯ್ಕೆಯಾದ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯವೇ ಕಾರಣವಾಗಿದೆ.
ಈ ಬೀದಿಯಲ್ಲಿ ಸಣ್ಣ ಪುಟ್ಟ ಮಕ್ಕಳು, ವಯೋ ವೃದ್ಧರು, ರೋಗಿಗಳು ತಿರುಗಾಡಲು ಆಗುತ್ತಿಲ್ಲ. ಮಳೆ ಬಂದರೆಂತೂ ರಸ್ತೆಯಲ್ಲಿ ಬಚ್ಚಲು ನೀರು ತುಳಿದೇ ಮನೆಗೆ ತೆರಳುವ ಸ್ಥಿತಿ ಬಂದೊದಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ಕೂಡಲೇ ಗ್ರಾಮದ ಕಣಿಯರ ಬೀದಿಯಲ್ಲಿ ಹರಿಯುವ ಬಚ್ಚಲು ನೀರು ನಿಲ್ಲಿಸುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಸಮಯದಲ್ಲಾದರೂ ಆಗಲಿ ಎಂದು ರೈತಸಂಘದ ಮುಖಂಡರು ಹೇಳಿದ್ದಾರೆ.
---
೨೨ಜಿಪಟಿ೧ರಸ್ತೆ ಮೇಲೆ ಕೊಳಚೆ ನೀರು
ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಕಣಿಯರ ಬೀದಿಯಲ್ಲಿ ಬಚ್ಚಲು ನೀರು ರಸ್ತೆಯಲ್ಲಿ ಹರಿಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.