-ಪ್ರತಿವರ್ಷ ₹8-10 ಲಕ್ಷ ವರೆಗೆ ವಹಿವಾಟು । ಈ ಸಲ 15% ನಷ್ಟ । ಆನ್ ಲೈನ್‌ನಲ್ಲಿ ಪಟಾಕಿ ಖರೀದಿಯಿಂದ ವ್ಯಾಪಾರಕ್ಕೆ ಹೊಡೆತ
ಗ್ರಾಹಕರು ಆನ್ ಲೈನ್‌ನಲ್ಲಿ ಪಟಾಕಿ ಖರೀದಿಸುತ್ತಿರುವುದರಿಂದ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಈ ಬಾರಿ ಶೇ.10-15ರಷ್ಟು ನಷ್ಟ ಉಂಟಾಗಿದೆ. ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಟದ ಮೈದಾನಗಳಲ್ಲಿ ಅಧಿಕೃತವಾಗಿ ಮಳಿಗೆ ತೆರೆದು ಮಾರಾಟ ಮಾಡುತ್ತಿರುವ ನಗರದ ಸುಮಾರು 380 ರಿಂದ 423 ವ್ಯಾಪಾರಿಗಳು ಪ್ರತಿವರ್ಷ 8 ರಿಂದ 10 ಲಕ್ಷ ರು.ವರೆಗೆ ವಹಿವಾಟು ನಡೆಸುತ್ತಾರೆ. ಆದರೆ, ಈ ಬಾರಿ ಆನ್ ಲೈನ್‌ನಲ್ಲಿ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಖರೀದಿಸುತ್ತಿರುವುದರಿಂದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಎಂದು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೇಶವ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ 2018ರಲ್ಲಿಯೇ ಪಟಾಕಿಯನ್ನು ಆನ್ ಲೈನ್‌ನಲ್ಲಿ ಖರೀದಿಸಬಾರದು ಎಂದು ನಿಷೇಧ ಹೇರಿದೆ. ಆದರೂ ಕೆಲ ಕಂಪನಿಗಳು ಅಧಿಕೃತವಾಗಿಯೇ ಪಟಾಕಿ ಮಾರಾಟ ಮಾಡುತ್ತಿವೆ. ಜನರೂ ಕೂಡ ಸುಲಭವಾಗಿ ತಮಗೆ ಇಷ್ಟ ಬಂದ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ನಮಗೆ ಶೇ.10-15ರಷ್ಟು ಪ್ರಮಾಣದ ವ್ಯಾಪಾರ ನಷ್ಟವಾಗಿದೆ ಎಂದರು. ಮುಂದಿನ ವರ್ಷದಿಂದ ಇಂತಹ ಆನ್‌ಲೈನ್ ವ್ಯಾಪಾರಕ್ಕೆ ಕಡಿವಾಣ ಹಾಕುತ್ತೇವೆ. ಇದಕ್ಕೆ ಸಂಘಟನೆಯಿಂದ ಹೋರಾಟ ನಡೆಸಲಾಗುವುದು. ನಗರದಲ್ಲಿರುವ ಪಾಲಿಕೆಗೆ ಸೇರಿದ ಎಲ್ಲ ಆಟದ ಮೈದಾನಗಳಲ್ಲಿ ನಮ್ಮ ಸದಸ್ಯರ 380 ರಿಂದ 423 ಮಳಿಗೆಗಳಲ್ಲಿ ವ್ಯಾಪಾರ ನಡೆದಿದೆ. ವ್ಯಾಪಾರ ಯಾವುದೇ ತೊಂದರೆ ಇಲ್ಲದೆ ಸಾಗಿದೆ ಎಂದರು.ಮಳೆಯಿಂದ ತೊಂದರೆ ಇಲ್ಲ