ಕಗ್ಗತ್ತಲಲ್ಲಿ ಗುಂಡ್ಲುಪೇಟೆ ಜೋಡಿ ರಸ್ತೆ, ಅರಸು ಕ್ರೀಡಾಂಗಣ, ನೆಹರು ಪಾರ್ಕ್‌ !

KannadaprabhaNewsNetwork | Updated : Jun 01 2025, 11:49 PM IST
ಪುರಸಭೆ ವ್ಯಾಪ್ತಿಯ ಡಿ.ದೇವರಾಜ ಅರಸು ಕ್ರೀಡಾಂಗಣ, ನೆಹರು ಪಾರ್ಕ್‌ಗಳ ಹೈಮಾಸ್ಕ್‌ ಲೈಟ್‌ಗಳು ಕೆಟ್ಟಿವೆ. ಈ ಎರಡು ಹೈಮಾಸ್ಕ್‌ ಲೈಟ್‌ ಪುರಸಭೆ ಆಡಳಿತ ವರ್ಗಕ್ಕೆ ಕಂಡು ಬಂದಿಲ್ಲ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದೊಳಗಿನ ಜೋಡಿ ರಸ್ತೆಗಳಲ್ಲಿ ಬಹುತೇಕ ಸ್ಟ್ರೀಟ್‌ ಲೈಟ್‌ ಕೆಟ್ಟಿವೆ. ಇದನ್ನು ದುರಸ್ತಿಪಡಿಸಬೇಕಾದವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂದು ಪುರಸಭೆ ಕೈ ಕಟ್ಟಿ ಕುಳಿತ ಕಾರಣ ಪಟ್ಟಣದ ಜೋಡಿ ರಸ್ತೆಗಳು ಕಗ್ಗಳಲ್ಲಿ ಮುಳುಗಿವೆ.

ಇನ್ನೂ ಪುರಸಭೆ ವ್ಯಾಪ್ತಿಯ ಡಿ.ದೇವರಾಜ ಅರಸು ಕ್ರೀಡಾಂಗಣ, ನೆಹರು ಪಾರ್ಕ್‌ಗಳ ಹೈಮಾಸ್ಕ್‌ ಲೈಟ್‌ಗಳು ಕೆಟ್ಟಿವೆ. ಈ ಎರಡು ಹೈಮಾಸ್ಕ್‌ ಲೈಟ್‌ ಪುರಸಭೆ ಆಡಳಿತ ವರ್ಗಕ್ಕೆ ಕಂಡು ಬಂದಿಲ್ಲ.ಗುಂಡ್ಲುಪೇಟೆ ಪಟ್ಟಣ ತಮಿಳುನಾಡು ಹಾಗೂ ಕೇರಳಕ್ಕೆ ಹೊಂದಿಕೊಂಡಿದೆ. ಗುಂಡ್ಲುಪೇಟೆ ಮೂಲಕವೇ ಪ್ರತಿ ನಿತ್ಯ ಸಹಸ್ರಾರು ಪ್ರವಾಸಿಗರು ಬಂದು ಹೋಗುವ ಪಟ್ಟಣದ ಜೋಡಿ ರಸ್ತೆಯ ಲೈಟ್‌ಗಳು ಕೆಟ್ಟಿರುವ ಕಾರಣ ಜೋಡಿ ರಸ್ತೆ ಕಗ್ಗತ್ತಲಲ್ಲಿ ಮುಳುಗಿದೆ.

ಪಟ್ಟಣದ ಮೂಲಕವೇ ತಮಿಳುನಾಡು ಹಾಗೂ ಕೇರಳಕ್ಕೆ ತೆರಳುವ ವಿಐಪಿಗಳು ಹಾಗೂ ಪ್ರವಾಸಿಗರು ತೆರಳುವ ರಸ್ತೆಯಲ್ಲಿ ಸ್ಟ್ರೀ ಟ್‌ ಲೈಟ್‌ ಇಲ್ಲ ಎಂದರೆ ಮಾನ ಹೋಗೋದು ಆಡಳಿತಕ್ಕೆ ತಾನೇ ಎಂದು ಪಟ್ಟಣದ ಹಿರಿಯ ನಾಗರೀಕರೊಬ್ಬರು ಕನ್ನಡಪ್ರಭದೊಂದಿಗೆ ಹೇಳಿಕೊಂಡರು.

ಇನ್ನೂ ಪಟ್ಟಣದ ಜೋಡಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಕ್ರೀಡಾಂಗಣ ಹಾಗೂ ಪಟ್ಟಣದ ಹೃದಯ ಭಾಗವಾದ ನೆಹರು ಪಾರ್ಕ್‌ನ ಹೈಮಾಸ್ಕ್‌ ಲೈಟ್‌ ಕೆಟ್ಟು ಹಲವು ತಿಂಗಳುಗಳೇ ಉರುತ್ತಿವೆ. ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಸಂಜೆ ಬಳಿಕ ಮಹಿಳೆಯರು ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ವಾಯು ವಿಹಾರಕ್ಕೆ ಬರುತ್ತಾರೆ. ಆದರೆ ಕ್ರೀಡಾಂಗಣ ಹೈಮಾಸ್ಟ್‌ ಲೈಟ್‌ ಕೆಟ್ಟು ಕಗ್ಗತ್ತಲ್ಲಿ ಮುಳುಗಿದೆ. ಇದು ಪುರಸಭೆಯ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಗೃಹಿಣಿಯೊಬ್ಬರು ಹೇಳಿದರು.

ಪಟ್ಟಣದಲ್ಲಿ ವ್ಯಾಪಾರಸ್ಥರು ರಾತ್ರಿ ಅಂಗಡಿ, ಮುಂಗಟ್ಟು ಮುಚ್ಚಿದ ಬಳಿಕ ನೆಹರು ಪಾರ್ಕ್‌ ಮೂಲಕ ತೆರಳುವ ಜನರು ಭಯದಲ್ಲಿ ತೆರಳುತ್ತಿದ್ದಾರೆ. ವಿದ್ಯುತ್‌ ಹೋದರೆಂತೂ ಸಂಪೂರ್ಣ ಕಗ್ಗತ್ತಲ್ಲಿ ಮುಳುಗುತ್ತದೆ. ಪಟ್ಟಣದ ನಾಗರಿಕರಿಂದ ತೆರಿಗೆ ಕಟ್ಟಿಸಿಕೊಳ್ಳುವ ಪುರಸಭೆ ಪಟ್ಟಣದ ಕನಿಷ್ಟ ಮೂಲಭೂತ ಸೌಲಭ್ಯಗಳಲ್ಲೊಂದಾದ ಬೀದಿದೀಪ ಹಾಗೂ ಡಿ.ದೇವರಾಜ ಅರಸು ಕ್ರೀಡಾಂಗಣ, ನೆಹರು ಪಾರ್ಕ್‌ ನ ಹೈಮಾಸ್ಕ್‌ ಲೈಟ್‌ ದುರಸ್ತಿಪಡಿಸಲು ಮುಂದಾಗುತ್ತಿಲ್ಲ ಎಂದ ಮೇಲೆ ನಾಗರಿಕರು ತೆರಿಗೆ ಕೇಳಲು ಯಾವ ನೈತಿಕತೆ ಇದೆ ಎಂದು ಯುವಕ ವೆಂಕಟೇಶ್‌ ಪ್ರಶ್ನಿಸಿದ್ದಾರೆ.

ಪ್ರಥಮ ಬಾರಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ವರ್ಷದ ಬಳಿಕ ಪಟ್ಟಣದ ಜೋಡಿ ರಸ್ತೆ ಸ್ಟೀಟ್‌ ಲೈಟ್‌ ಹಾಕಿಸಿದ್ದರು. ಈಗ ಎಲ್ಲಾ ಲೈಟ್‌ ಕೆಟ್ಟಿವೆ ಮತ್ತೆ ಶಾಸಕರೇ ಸ್ಟ್ರೀಟ್‌ ಲೈಟ್‌ಗೆ ಮತ್ತೆ ಬೆಳಕು ಕೊಡಲು ಮುಂದಾಗಬೇಕಿದೆ.

------1ಜಿಪಿಟಿ1

ಗುಂಡ್ಲುಪೇಟೆ ಪಟ್ಟಣದ ಜೋಡಿ ರಸ್ತೆ ಸ್ಟ್ರೀಟ್‌ ಲೈಟ್‌ ಕೆಟ್ಟು ಜೋಡಿ ರಸ್ತೆ ಕಗ್ಗತ್ತಲಲ್ಲಿ ಮುಳುಗಿದೆ.

---------1ಜಿಪಿಟಿ2

ಗುಂಡ್ಲುಪೇಟೆ ಪಟ್ಟಣದ ನೆಹರು ಪಾರ್ಕ್‌ ನ ಹೈಮಾಸ್ಕ್‌ ಲೈಟ್‌ ಕೆಟ್ಟು ನಿಂತಿದೆ.

------------ಗುಂಡ್ಲುಪೇಟೆ

ಪಟ್ಟಣದ ಡಿ.ದೇವರಾಜ ಅರಸು ಕೀಡಾಂಗಣ, ನೆಹರು ಪಾರ್ಕ್‌ ಹೈಮಾಸ್ಕ್‌ ಲೈಟ್‌ ಉರಿಯುತ್ತಿಲ್ಲ ಹಾಗು ಜೋಡಿ ರಸ್ತೆಗಳು ಕಗ್ಗತ್ತಲ್ಲಿ ಮುಳುಗಿದೆ ಎಂದು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದರೂ ತಾಲೂಕು ಆಡಳಿತ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ!ಜೊತೆಗೆ ಜೋಡಿ ರಸ್ತೆ ಲೈಟ್‌ ಹಾಗು ಡಿ.ದೇವರಾಜ ಅರಸು ಕ್ರೀಡಾಂಗಣ ಹಾಗು ನೆಹರು ಪಾರ್ಕ್‌ ಬಳಿಯ ಹೈಮಾಸ್ಕ್‌ ಲೈಟ್‌ ಉರಿಯುತ್ತಿಲ್ಲ ಎಂಬ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರೂ ಪುರಸಭೆ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ.------------1ಜಿಪಿಟಿ3ಮೇ 17 ರಂದು ಕನ್ನಡಪ್ರಭದಲ್ಲಿ ಹೈಮಾಸ್ಕ್‌ ದೀಪ ದುರಸ್ಥಿಗೊಳಿಸಿ ಎಂದು ವರದಿ ಪ್ರಕಟಿಸಿತ್ತು.

---------1ಜಿಪಿಟಿ4ಮೇ 18 ರ ಕನ್ನಡಪ್ರಭದಲ್ಲಿ ನೆಹರು ಪಾರ್ಕ್‌ನ ಹೈಮಾಸ್ಕ್‌ ದೀಪ ಬೆಳಗೋದು ಯಾವಾಗ? ಎಂದು ವರದಿ ಪ್ರಕಟಿಸಿತ್ತು.

------------1ಜಿಪಿಟಿ5ಮೇ 25 ರ ಕನ್ನಡಪ್ರಭದಲ್ಲಿ ಮತ್ತೆ ಕಗ್ಗತ್ತಲಲ್ಲಿ ಗುಂಡ್ಲುಪೇಟೆ ಜೋಡಿ ರಸ್ತೆಗಳು ಎಂದು ವರದಿ ಪ್ರಕಟಿಸಿತ್ತು.

-----------------