- ದೇವಿ ಆಭರಣ ಕದ್ದವನ ವಿರುದ್ಧ ದೂರು ದಾಖಲಾಗಿದೆ । ದಸರಾ ಸಭೆಯಲ್ಲೇ ಯಶವಂತ ರಾವ್ ಸೇರಿ ಎಲ್ಲರಿಗೂ ಲೆಕ್ಕ ಕೊಡ್ತೀವಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ 6 ಚಿನ್ನಾಭರಣ ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಲೆಕ್ಕಪತ್ರದ ಬಗ್ಗೆ ದಸರಾ ಸಭೆಯಲ್ಲೇ ಪರಿಶೀಲಿಸಬಹುದಾಗಿದ್ದು, ದೇವಸ್ಥಾನದ ಬಗ್ಗೆ ಅಪಪ್ರಚಾರ, ಸುಳ್ಳು ವದಂತಿ ಹರಡಬೇಡಿ ಎಂದು ದೇವಸ್ಥಾನ ಟ್ರಸ್ಟ್‌ನ ಪ್ರಭಾರ ಕಾರ್ಯದರ್ಶಿ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್‌ಗೆ ತಾಕೀತು ಮಾಡಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಗ್ಗಮ್ಮ ಗುಡಿಯ ಆಭರಣಗಳನ್ನು ದೇವಸ್ಥಾನದ ಪೂಜಾರಿ ಕುಟುಂಬದ ಆಕಾಶ ಎಂಬಾತ ಕಳವು ಮಾಡಿದ್ದು, 6 ತಿಂಗಳಿಗೊಮ್ಮೆ ಪೂಜೆ ಮತ್ತೊಂದು ಪೂಜಾರರ ಕುಟುಂಬಕ್ಕೆ ಹಸ್ತಾಂತರವಾಗುವ ವೇಳೆ ದೇವಿಗೆ ಸೇರಿದ 6 ಚಿನ್ನಾಭರಣ ಕಳುವಾದ ವಿಚಾರ ಹೊರಬಂದಿದೆ. ದೇವಿ ಚಿನ್ನಾಭರಣ ಕದ್ದ ಪೂಜಾರಿ ಹಾಗೂ ಅದನ್ನು ಖರೀದಿಸಿದವನನ್ನು ಕರೆಸಿ, ಟ್ರಸ್ಟ್ ಕಾರ್ಯಾಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಟ್ರಸ್ಟಿಗಳು ಬಿಗಿ ಮಾಡಿದ್ದೇವೆ ಎಂದರು.
ಭಕ್ತರು ಹರಕೆ, ಕಾಣಿಕೆ ರೂಪದಲ್ಲಿ ಮೂಗುಬೊಟ್ಟು (ಮೂಗುತಿ), ಕಿವಿಯೋಲೆ, ಸರ ಅಂತೆಲ್ಲಾ ನೀಡುತ್ತಾರೆ. ಹಿಂದಿನಿಂದಲೂ ದೇವಸ್ಥಾನದಲ್ಲಿ ಆಭರಣಗಳ ನೈಜತೆ ಹಾಗೂ ಗುಣಮಟ್ಟ ಪರಿಶೀಲಿಸುವ ವ್ಯವಸ್ಥೆ ಇಲ್ಲ. ಭಕ್ತರು ನೀಡುವ ಆಭರಣ ಅಸಲಿ ಬಂಗಾರ, ಬೆಳ್ಳಿಯೋ ಅಥವಾ ಬಣ್ಣದ ನೀರು ಕುಡಿಸಿದ ಬಂಗಾರ, ಬೆಳ್ಳಿಯೋ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲ. ಇನ್ನು ಅವುಗಳ ನೈಜತೆ ಮತ್ತು ಗುಣಮಟ್ಟ ಪರಿಶೀಲಿಸುವ ಬಗ್ಗೆ ಟ್ರಸ್ಟ್ ಚರ್ಚಿಸಿ, ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನಮಗೆ ಕರೆದರೆ ನಾವೇ ಹೊಂಡದ ಸರ್ಕಲ್‌ಗೆ ಬರುತ್ತೇವೆ. ಯಶವಂತ ರಾವ್ ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಹೊಂಡದ ಸರ್ಕಲ್ ಕುರುಕ್ಷೇತ್ರವಾಗುತ್ತದೆ. ಇದೇ ವ್ಯಕ್ತಿಯ ಕಚೇರಿ ಹಾಗೂ ಮನೆಯ ಮುಂದೆ ನಾವು ಹೋರಾಟ ನಡೆಸಬೇಕಾಗುತ್ತದೆ. ವಿನಾಕಾರಣ ಎಲ್ಲ ವಿಚಾರಕ್ಕೂ ಶಾಮನೂರು ಕುಟುಂಬದ ಬಗ್ಗೆ ಮಾತನಾಡುವ ಯಶವಂತ ರಾವ್ ದುಗ್ಗಮ್ಮನ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
- - -
* ಜಿಎಸ್‌ಟಿ ಬಗ್ಗೆ ಈಗಾಗಲೇ ಸ್ಪಷ್ಟನೆ
(ಬಾಕ್ಸ್-2)
- - -
(ಕೋಟ್) ದಾವಣಗೆರೆ ದುಗ್ಗಮ್ಮ ದೇವಸ್ಥಾನದ ಲೆಕ್ಕಪತ್ರವನ್ನು ದಸರಾ ಸಭೆಯಲ್ಲಿ ಮಂಡಿಸುತ್ತೇವೆ. ಯಶವಂತ ರಾವ್ ಸೇರಿದಂತೆ ಯಾರಾದರೂ ಸಾರ್ವಜನಿಕರು ಬಂದು ಲೆಕ್ಕಪತ್ರ ಪರಿಶೀಲಿಸಲು ಅವಕಾಶವಿದೆ. ಲೆಕ್ಕ ಕೊಡುವುದಕ್ಕೆ ನಾವು ಸದಾ ಸಿದ್ಧರಿದ್ದೇವೆ. ದುಗ್ಗಮ್ಮನ ಗುಡಿ ಆಭರಣಗಳ ಕಳವು ಮಾಡಿದ್ದಕ್ಕೆ ನಮ್ಮ ತೀವ್ರ ವಿರೋಧವಿದೆ. ಟ್ರಸ್ಟ್‌ನಿಂದ ಏನೇ ತಪ್ಪು, ಒಪ್ಪುಗಳಾಗಿದ್ದರೂ ಅದನ್ನು ನಾವು ಸ್ವೀಕರಿಸುತ್ತೇವೆ. ಪೂಜಾರಿಗಳ ಕುಟುಂಬದ ಓರ್ವನ ಕೃತ್ಯಕ್ಕೆ ನಾವು 17 ಜನ ಟ್ರಸ್ಟಿಗಳು ತಲೆ ತಗ್ಗಿಸುವಂತಾಗಿದೆ. ಪೂಜಾರಿ ಕುಟುಂಬದ ಆರೋಪಿ ಆಕಾಶನಿಗೆ ಟ್ರಸ್ಟ್ ಸೂಕ್ತ ಶಿಕ್ಷೆ ನೀಡಲಿದೆ.- ಉಮೇಶ ರಾವ್ ಸಾಳಂಕಿ, ಟ್ರಸ್ಟಿ, ದಾವಣಗೆರೆ ದುಗ್ಗಮ್ಮ ದೇವಸ್ಥಾನ.
- - --30ಕೆಡಿವಿಜಿ1:
ದಾವಣಗೆರೆಯಲ್ಲಿ ಗುರುವಾರ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಪ್ರಭಾರ ಕಾರ್ಯದರ್ಶಿ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.