ಕನ್ನಡಪ್ರಭ ವಾರ್ತೆ ಉಡುಪಿ
ಈ ಹಿನ್ನಲೆ ಉಪಲೋಕಾಯುಕ್ತರು ಉಡುಪಿ ನೋಂದಣಿ ಕಚೇರಿಯ ತನಿಖೆಗೆ ಸರ್ಚ್ ವಾರೆಂಟ್ ಅನ್ನು ಹೊರಡಿಸಿ ತನಿಖೆಗೆ ಮಂಗಳೂರು ವಿಭಾಗ ಲೋಕಾಯುಕ್ತ ಎಸ್.ಪಿ ಗೆ ಆದೇಶಿಸಿದ್ದರು.
ಅದರಂತೆ ಬುಧವಾರ ಮಂಗಳೂರಿನ ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಉಡುಪಿ ನೋಂದಣಿ ಕಚೇರಿಗೆ ಭೇಟಿ ನೀಡಿ ತನಿಖೆ ಕೈಗೊಂಡು ಪರಿಶೀಲಿಸಿದರು. ಆದರೇ ಈ ಸಂದರ್ಭದಲ್ಲಿ ಯಾವುದೇ ಅವ್ಯವಹಾರಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.ಮದುವೆ ಹಾಲ್‌ನಲ್ಲಿ ಕಳವು: ಸಿಸಿ ಟಿವಿಯಲ್ಲಿ ಸೆರೆಕನ್ನಡಪ್ರಭ ವಾರ್ತೆ ಬ್ರಹ್ಮಾವರಇಲ್ಲಿನ ಮದುವೆ ಹಾನ್ ನಲ್ಲಿ ನಡೆದ ಕಳ್ಳತನದ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಶ್ಯಾಮಿಲಿ ಸಭಾಭವನದಲ್ಲಿ ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳ ಮದುವೆಯ ಆರತಕ್ಷತೆ ನಡೆಯುತ್ತಿತ್ತು. ಈ ಸಂದರ್ಭ ಬಾಲಕನೊಬ್ಬ ಬ್ಯಾಗನ್ನು ಕಳವು ಮಾಡಿದ್ದಾನೆ. ಜಯಶ್ರೀ ಅವರು ತಮ್ಮ ಬ್ಯಾಗನ್ನು ಕುರ್ಚಿ ಮೇಲಿಟ್ಟು ವೇದಿಕೆಯಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಬ್ಯಾಗಿನಲ್ಲಿ ಸುಮಾರು 2.40 ಲಕ್ಷ ರು. ಮೌಲ್ಯದ ನಗದು ಹಾಗೂ ಆಭರಣಗಳಿದ್ದವು. ಬಾಲಕನು ಯಾರಿಗೂ ಸಂಶಯ ಬಾರದಂತೆ ನೇರವಾಗಿ ವೇದಿಕೆಗೆ ಹೋಗಿ ಕುರ್ಚಿಯಲ್ಲಿದ್ದ ಬ್ಯಾಗನ್ನು ಎತ್ತಿಕೊಂಡು ಹೊರಗೆ ಹೋಗಿದ್ದಾನೆ. ನಂತರ ಬ್ಯಾಗ್ ಕಾಣದಿದ್ದಾಗ ಜಯಶ್ರೀ ಅವರು ಪೊಲೀಸ್ ದೂರು ನೀಡಿದ್ದಾರೆ.ಪೊಲೀಸರು ಬಂದು ಸಿಸಿ ಕ್ಯಾಮರಗಳನ್ನು ಪರಿಶೀಲಿಸಿದಾಗ ಕಳ್ಳತನದ ಈ ದೃಶ್ಯ ಪತ್ತೆಯಾಗಿದೆ. ಬಾಲಕನೊಂದಿಗೆ ಯುವಕನೂ ಇದ್ದು, ಇಬ್ಬರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.