ಏನೇ ಕುತಂತ್ರ ರಾಜಕಾರಣ ಮಾಡಿದರೂ ಜನ ನನ್ನ ಕೈಬಿಡಲ್ಲ

KannadaprabhaNewsNetwork |  
Published : Nov 05, 2024, 01:41 AM IST
4ಕೆಆರ್ ಎಂಎನ್ 2.ಜೆಪಿಜಿಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದ ಎ.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಎ.ಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ಮಂಕುಂದ, ಹುಲುವಾಡಿ, ಆಣಿಗೆರೆ ಹೆಚ್.ಬ್ಯಾಡರಹಳ್ಳಿ, ತೌಟನಹಳ್ಳಿ, ತೆಂಕನಹಳ್ಳಿ, ಗುಡ್ಡೆಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.

ರಾಮನಗರ: ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಎ.ಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ಮಂಕುಂದ, ಹುಲುವಾಡಿ, ಆಣಿಗೆರೆ ಹೆಚ್.ಬ್ಯಾಡರಹಳ್ಳಿ, ತೌಟನಹಳ್ಳಿ, ತೆಂಕನಹಳ್ಳಿ, ಗುಡ್ಡೆಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.

ಅಣಿಗೆರೆ ಗ್ರಾಮದಲ್ಲಿ ಪ್ರಚಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಸೋಲಿಸಲು ಇಡೀ ಸರ್ಕಾರವೇ ಕ್ಷೇತ್ರಕ್ಕೆ ಬರುತ್ತಿದೆ. ಇದು ಅವರ ಪಕ್ಷದ ಚುನಾವಣೆ ತಂತ್ರ ಅದು. ಅವರ ಕೆಲಸ ಅವರು ಮಾಡಿಕೊಳ್ಳಲಿ, ನಮ್ಮ ಕೆಲಸ ನಾವು‌ ಮಾಡೋಣ. ನನ್ನ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿ ಚುನಾವಣೆ ಮಾಡುತ್ತಿದ್ದಾರೆ ಮಾಡಲಿ. ಅವರು ಏನೇ ಕುತಂತ್ರ ರಾಜಕಾರಣ ಮಾಡಿದರೂ ಚನ್ನಪಟ್ಟಣ ಜನತೆ ನನ್ನ ಕೈ ಬಿಡುವುದಿಲ್ಲ. ಕ್ಷೇತ್ರದ ಜನ ಕೈ ಹಿಡಿಯುವ ವಿಶ್ವಾಸವಿದೆ ಎಂದರು.

ನ.13ಕ್ಕೆ ಮತದಾರರೇ ಉತ್ತರ ಕೊಡ್ತಾರೆ :

ಕುಮಾರಸ್ವಾಮಿ ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ಮಾತುಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ನ.13ಕ್ಕೆ ಎಲ್ಲದಕ್ಕೂ ಉತ್ತರವನ್ನ ಅವರೇ ಕೊಡ್ತಾರೆ. ತೀರ್ಪು, ತೀರ್ಮಾನ ಕೊಡೋದು ಕ್ಷೇತ್ರದ ಮತದಾರರು. ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ. ಮತದಾರರ ಆಶೀರ್ವಾದ ನನ್ನ ಮೇಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಬೇವೂರು ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ಮಾಡ್ತಿದ್ದೇನೆ. ಇನ್ನೂ ಪ್ರಚಾರಕ್ಕೆ ಒಂದು ವಾರ ಮಾತ್ರ ಬಾಕಿ ಇದೆ. ಜನರ ಉತ್ಸಾಹ ನೋಡಿದ್ರೆ ಅಧಿಕ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ಜನ ಕುಮಾರಸ್ವಾಮಿ ಹಾಗೂ ದೇವೇಗೌಡರ ಕೆಲಸಗಳ ಬಗ್ಗೆ ಮಾತನಾಡ್ತಿದ್ದಾರೆ ಎಂದರು.

ಇಂದು ನನ್ನ ಶ್ರೀಮತಿ ಕೂಡ ನನ್ನ ಪರ ಪ್ರಚಾರ ಮಾಡಿದ್ದಾರೆ. ಮಹಿಳಾ ಕಾರ್ಯಕರ್ತರು ಒತ್ತಾಯ ಮಾಡಿ ಪ್ರಚಾರಕ್ಕೆ ಕರೆತಂದಿದ್ದಾರೆ. ರೇವತಿ ಅವರ ತಾಯಿ ಕೂಡಾ ಸಾವಂದಿಪುರ ಗ್ರಾಮದವರು. ಹಾಗಾಗಿ ಅಲ್ಲಿಗೆ ಹೋಗಿದ್ದಾಗ ಅದರ ಬಗ್ಗೆ ಮಾತನಾಡಿದೆ ಅಷ್ಟೇ. ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಬಾಕ್ಸ್‌.................

ಎದುರಾಳಿಗಳ ಲೆಕ್ಕಾಚಾರ ಉಲ್ಟಾ ಮಾಡುವ ಶಕ್ತಿ ಚನ್ನಪಟ್ಟಣ ಜನತೆಗಿದೆ

ಚನ್ನಪಟ್ಟಣ :

ಹೋದಲ್ಲೆಲ್ಲಾ ಜನರ ಅಪಾರ ಪ್ರೀತಿ ಸಿಗುತ್ತಿದೆ. ಚನ್ನಪಟ್ಟಣ ಮತದಾರರಿಗೆ ಎದುರಾಳಿಗಳ ಲೆಕ್ಕಾಚಾರ ಉಲ್ಟಾ ಮಾಡುವ ಶಕ್ತಿ ಇದೆ. ಕಾಂಗ್ರೆಸ್ ಏನೇ ಷಡ್ಯಂತ್ರ ಮಾಡಿದರು ನಮ್ಮ ಜನತೆ ಮಾರು ಹೋಗುವುದಿಲ್ಲ ಎಂದು ನಿಖಿಲ್ ಪ್ರತಿಕ್ರಿಯಿಸಿದರು.

ನಿಖಿಲ್ ಸ್ಥಳೀಯರಲ್ಲ ಎಂಬ ಡಿಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ಥಳೀಯರು, ಹೊರಗಿನವರು ಎಂಬ ಚರ್ಚೆ ಅನಾವಶ್ಯಕ. ನಾವು ಹಾಸನ ಜಿಲ್ಲೆಯವರಾದರು ನಾವು ಕನ್ನಡಿಗರೆ. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ರಾಮನಗರದ ಜೊತೆ ನಮ್ಮ ಕುಟುಂಬಕ್ಕೆ 40 ವರ್ಷಗಳ ಅವಿನಾಭಾವ ಸಂಬಂಧ ಇದೆ. ನನ್ನ ಪತ್ನಿ ರೇವತಿ ಚನ್ನಪಟ್ಟಣದ ಮಳವಳ್ಳಿ ಗಡಿಭಾಗದ ಸಾವಂದಿಪುರ ಗ್ರಾಮದವರು. ಹಾಗಿದ್ದ ಮೇಲೆ ನಾನು ಮಂಡ್ಯ ಹಾಗೂ ಚನ್ನಪಟ್ಟಣದ ಮಗ ಆಗಲಿಲ್ವ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಸರ್ಕಾರದ ವಿರುದ್ಧ ನಿಖಿಲ್ ಸಮರ್ಥ ಅಭ್ಯರ್ಥಿ ಎಂದು ನನ್ನನ್ನು ಆಯ್ಕೆ ಮಾಡಿದರು. ಬಿಜೆಪಿ ಜೆಡಿಎಸ್ ಕಾರ್ಯಕರ್ತರು, ನಾಯಕರ ಸೂಚನೆಯಂತೆ ಅಭ್ಯರ್ಥಿ ಆಗಿದ್ದೇನೆ. ಚನ್ನಪಟ್ಟಣ ಜನರು ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

4ಕೆಆರ್ ಎಂಎನ್ 2.ಜೆಪಿಜಿ

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್‌ಡಿ ಎ ಅಭ್ಯರ್ಥಿ ನಿಖಿಲ್ ಎ.ಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ