ನಗರದಲ್ಲಿ ನಿಗಿ ನಿಗಿ ಕೆಂಡದಂತ ಬಿಸಿಲಿನ ತಾಪ ಹೆಚ್ಚಿರುವ ಸಿಗ್ನಲ್ ಅಥವಾ ಪ್ರದೇಶಗಳಲ್ಲಿ ಮಿಸ್ಟ್ ಸ್ಪ್ರೇ (ತಣ್ಣೀರ ಹನಿಗಳ ಸಿಂಚನ) ಮಾಡಲು ಪಾಲಿಕೆ ಚಿಂತನೆ ನಡೆಸಿತ್ತು. ಇದರಿಂದ ನಗರದ ಜನರೂ ಪುಳಕಿತರಾಗಿದ್ದರು. ಬಿಸಿಲ ಬೇಗೆಗೆ ಪಾಲಿಕೆ ಹೊಸ ವಿಧಾನ ತರುತ್ತದೆ ಎಂಬ ಆಸೆಯಲ್ಲಿದ್ದರು. ಆದರೆ, ಈ ಹೊಸ ವಿಧಾನ ಸದ್ಯಕ್ಕೆ ಜಾರಿಗೆ ಬರುವುದಿಲ್ಲ. ಈ ಯೋಜನೆ ಜಾರಿಗೆ ತರಲು ಐದು ಪಾಲಿಕೆಗಳಲ್ಲಿ ಹಣ, ಸಮಯ,ನೀರಿನ ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವುದರಿಂದ ತಮ್ಮ ವ್ಯಾಪ್ತಿಗಳಲ್ಲಿ ಅಳವಡಿಕೆ ಸಾಧ್ಯವಿಲ್ಲ ಎಂದು ಮೌಖಿಕವಾಗಿ ತಿಳಿಸಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ನಿಗಿ ನಿಗಿ ಕೆಂಡದಂತ ಬಿಸಿಲಿನ ತಾಪ ಹೆಚ್ಚಿರುವ ಸಿಗ್ನಲ್ ಅಥವಾ ಪ್ರದೇಶಗಳಲ್ಲಿ ಮಿಸ್ಟ್ ಸ್ಪ್ರೇ (ತಣ್ಣೀರ ಹನಿಗಳ ಸಿಂಚನ) ಮಾಡಲು ಪಾಲಿಕೆ ಚಿಂತನೆ ನಡೆಸಿತ್ತು. ಇದರಿಂದ ನಗರದ ಜನರೂ ಪುಳಕಿತರಾಗಿದ್ದರು. ಬಿಸಿಲ ಬೇಗೆಗೆ ಪಾಲಿಕೆ ಹೊಸ ವಿಧಾನ ತರುತ್ತದೆ ಎಂಬ ಆಸೆಯಲ್ಲಿದ್ದರು. ಆದರೆ, ಈ ಹೊಸ ವಿಧಾನ ಸದ್ಯಕ್ಕೆ ಜಾರಿಗೆ ಬರುವುದಿಲ್ಲ. ಈ ಯೋಜನೆ ಜಾರಿಗೆ ತರಲು ಐದು ಪಾಲಿಕೆಗಳಲ್ಲಿ ಹಣ, ಸಮಯ,ನೀರಿನ ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವುದರಿಂದ ತಮ್ಮ ವ್ಯಾಪ್ತಿಗಳಲ್ಲಿ ಅಳವಡಿಕೆ ಸಾಧ್ಯವಿಲ್ಲ ಎಂದು ಮೌಖಿಕವಾಗಿ ತಿಳಿಸಿವೆ.
ಇದು ಕೇವಲ ಪ್ರಸ್ತಾವನೆ, ನಗರದಲ್ಲಿ ಬಿಸಿಲ ತಾಪ ಏರಿಕೆ ಸಮಸ್ಯೆಗೆ ಹಲವು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಲವಾರು ಸಲಹೆ ನೀಡಿದ್ದರು. ಅವುಗಳನ್ನು ಐದೂ ಪಾಲಿಕೆಗಳಿಗೆ ಅಳವಡಿಸಿಕೊಳ್ಳಲು ಯೋಚನೆ ಇತ್ತು. ಆದ್ದರಿಂದ ಈ ಪ್ರಸ್ತಾವನೆಯನ್ನು ಎಲ್ಲ ಐದು ಪಾಲಿಕೆಗಳಿಗೂ ಕಳುಹಿಸಿ ಈ ಯೋಜನೆಯ ಕಾರ್ಯಸಾಧ್ಯತೆ ತಿಳಿಸಿ ಎಂದು ಕೇಳಲಾಗಿತ್ತು. ಆದರೆ, ಇದು ಸದ್ಯಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಐದೂ ಪಾಲಿಕೆಗಳ ವ್ಯಕ್ತಪಡಿಸಿರುವುದಾಗಿ ಜಿಬಿಎ ವಿಶೇಷ ಆಯುಕ್ತರಾದ ಸುಷ್ಮಾ ಗೋಡ್ ಬೋಲೆ ಕನ್ನಡಪ್ರಭಕ್ಕೆ ತಿಳಿಸಿದರು.
ಈ ಯೋಜನೆ ಜಾರಿಗೆ ತರಲು ಎಲ್ಲಾ ಸಿಗ್ನಲ್‌ಗಳಲ್ಲಿ ನೀರಿನ ಸಂಪರ್ಕ ಅವಶ್ಯಕತೆ ಇದೆ. ನೀರನ್ನು ಸ್ಪ್ರೇ ಮಾಡುವ ಯಂತ್ರೋಪಕರಣಗಳು ಬೇಕು. ಯಾವ ಪ್ರಮಾಣದಲ್ಲಿ ಹೇಗೆ ಸಿಂಚನ ಮಾಡಬೇಕು ಎಂಬುದರ ಬಗ್ಗೆ ತಿಳಿದಿರಬೇಕು. ಇವೆಲ್ಲಾ ಅಗತ್ಯತೆಗಳನ್ನು ಒಂದೇ ತಿಂಗಳಲ್ಲಿ ಒದಗಿಸಲು ಸಾಧ್ಯವಿಲ್ಲ. ಇವುಗಳನ್ನು ಮುಂಬರುವ ಸಭೆಗಳಲ್ಲಿ ಕೂಲಂಕಶವಾಗಿ ಚರ್ಚಿಸಿ ಮುಂದಿನ ವರ್ಷ ಜಾರಿಗೆ ತರಲಾಗುವುದು ಎಂದರು.
ಈಗಾಗಲೇ ಒಂದು ಅಧ್ಯಯನ ವರದಿ ಇದೆ. ಈ ವರದಿಯನ್ವಯ 5 ಪಾಲಿಕೆಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಮಳೆ ಬೀಳುತ್ತಿದ್ದಂತೆ ಇವುಗಳ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಈಗ ಮಿಸ್ಟ್ ಸ್ಪ್ರೇ ಜಾರಿ ಈ ವರ್ಷ ಸಾಧ್ಯವಿಲ್ಲ.
ಬಿಸಿಲು ಹೆಚ್ಚಿರುವ ಕಾರಣ ಕಬ್ಬನ್ ಪಾರ್ಕ್‌ನ ರಸ್ತೆಯಲ್ಲಿ ಹವಾನಿಯಂತ್ರಿತ ಬಸ್ ನಿಲ್ದಾಣ ಸ್ಥಾಪಿಸಲಾಗಿತ್ತು. ಇಲ್ಲಿ, ಮಹಿಳೆಯರು ಮಕ್ಕಳು, ವಯಸ್ಸಾದವರು ಬಸ್ಸಿಗಾಗಿ ಕಾಯುವ ಸಮಯದಲ್ಲಿ ಇಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. ಆದರೆ, ಇದರ ನಿರ್ವಹಣೆ ವೆಚ್ಚ ಹೆಚ್ಚಿದ್ದರಿಂದ ಕಷ್ಟವಾಗುತ್ತಿತ್ತು. ಆದ್ದರಿಂದ ಅದನ್ನು ತೆರವುಗೊಳಿಸಿ ಮಾಮೂಲಿ ನಿಲ್ದಾಣ ಸ್ಥಾಪಿಸಲಾಗಿದೆ. ಹವಾನಿಯಂತ್ರಿತ ಬಸ್ ಶೆಲ್ಟರ್ ಇದ್ದರೂ ಅದು ಕೇವಲ ಬೇಸಿಗೆಯ ಎರಡು ತಿಂಗಳು ಮಾತ್ರ ಇರುತ್ತದೆ. ಉಳಿದ ತಿಂಗಳಲ್ಲಿ ನಗರದಲ್ಲಿ ಮಳೆ ಅಥವಾ ಚಳಿ ಹೆಚ್ಚಿರುತ್ತದೆ. ಆದ್ದರಿಂದ ಇದರ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.
ಜಪಾನ್, ಚೀನಾ, ಸೌದಿ ಅರೇಬಿಯಾ, ಸಿಂಗಪೂರ, ಇಟಲಿ ದೇಶಗಳಲ್ಲಿ ಬಿಸಿಲ ತಾಪಮಾನ ಹೆಚ್ಚಾದಾಗ ನಗರದಲ್ಲಿ ನಡೆದಾಡುವ ಹಾಗೂ ವಾಹನ ಸವಾರರನನ್ನು ತಂಪಾಗಿಸಲು ಮಿಸ್ಟ್ ಸ್ಪ್ರೇ ಬಳಸಲಾಗುತ್ತದೆ. ಮಿಸ್ಟ್ ಸ್ಪ್ರೇಯರ್ ಗಳನ್ನು ಉತ್ಪಾದಿಸುವ ಕಾರ್ಖಾನೆಗಳಿವೆ. ಆದರೆ, ವೆಚ್ಚ ಹೆಚ್ಚಿರುತ್ತದೆ.ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ 40ರಿಂದ 45ಗುಂಡಿಗಳನ್ನು ಮುಚ್ಚಲಾಗಿದೆ. ಯಾರು ಯಾವ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿ ಹೇಳಿದರು. ಎಷ್ಟೇ ಜಾಗೃತಿ ಮೂಡಿಸಿದರೂ ನಗರದ ರಸ್ತೆಗಳಲ್ಲಿ ಜನರು ಕಸ ಬಿಸಾಡುವುದು ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಬೆಳಗ್ಗೆಯಿಂದ ಕೆ.ಆರ್.ಮಾರ್ಕೆಟ್, ಚಿಕ್ಕಪೇಟೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿನ ಫ್ಲೈಓವರ್‌ಗಳಲ್ಲಿ ಕಸ, ಗಲೀಜು ಮಾಡಿರುವುದು ಹೆಚ್ಚಾಗಿ ಕಂಡು ಬಂದಿದೆ. ಇಲ್ಲಿ ವಿದ್ಯುತ್ ದೀಪ ಅಳವಡಿಸಿ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರೆ ಕಸ ಹಾಕುವುದು ತಪ್ಪುತ್ತದೆ ಎಂದರು.
-ಬಾಕ್ಸ್)))ಸಸಿಗಳನ್ನು ನೆಡಲು ಕ್ರಮ: ಮಹೇಶ್ವರ್‌ತಾಪಮಾನ ಹೆಚ್ಚಳ ತಡೆಯಲು ಹಸಿರೀಕರಣ ಪ್ರಮುಖ ಪರಿಹಾರ, ಎಲ್ಲೆಡೆ ಪಾರ್ಕ್‌ಗಳು ಒತ್ತುವರಿಯಾಗಿವೆ. ಈ ಒತ್ತುವರಿ ತೆರವುಗೊಳಿಸಿ ಗಿಡ ನೆಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಆಯುಕ್ತ ಮಹೇಶ್ವರ ರಾವ್ ಕನ್ನಡ ಪ್ರಭಕ್ಕೆ ತಿಳಿಸಿದರು. ನಗರದ ರಸ್ತೆಗಳ ಒಂದು ಗುಂಡಿಮುಚ್ಚಲು 1ಲಕ್ಷರೂ ವೆಚ್ಚಮಾಡಲಾಗಿದೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಉತ್ತರ ನೀಡಿರುವುದು ಸರಿಯಾದ ಕ್ರಮವಲ್ಲ. ತಪ್ಪಾಗಿ ವರದಿಯಾಗಿದೆ ಎಂದು ಆಯುಕ್ತರು ತಿಳಿಸಿದರು. ಬುಧವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಆಯುಕ್ತರು, ನಗರದ ಒಂದು ಗುಂಡಿ ಮುಚ್ಚಲು 2000 ರು.ವೆಚ್ಚ ಮಾಡಲಾಗಿದೆ. ಆದರೆ, ಒಂದು ಲಕ್ಷ ಮಾಡಿಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.