ಕೊಪ್ಪಳ: ಕೊಪ್ಪಳ ಬಳಿ ಈಗಾಗಲೇ ಇರುವ ಕಾರ್ಖಾನೆಗಳೇ ಸಾಕು, ಮತ್ತಷ್ಟು ಕಾರ್ಖಾನೆಗಳು ಬೇಡ ಎಂದು ನಿವೃತ್ತ ಶಿಕ್ಷಕ ಎಸ್.ಎಂ. ಕಂಬಾಳಿಮಠ ಹೇಳಿದ್ದಾರೆ.
ಕಾರ್ಖಾನೆ ಸ್ಥಾಪನೆ ಅಥವಾ ವಿಸ್ತರಣೆ ಇಲ್ಲಿನ ಜನ ಜೀವನದ ಮೇಲೆ ದುಷ್ಪರಿಣಾಮ ಬೀರುವಂತಿರಬಾರದು. ಆದರೆ ಇಲ್ಲಿನ ಪರಿಸರದ ಮೇಲೆ ಮಾಲಿನ್ಯ ಮಾಡುತ್ತದೆ ಎಂದಾದರೆ ಯಾವ ಉದ್ದೇಶ ಇಟ್ಟುಕೊಂಡು ಬಲ್ಡೋಟ ವಿಸ್ತರಣೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
೫೪ ಸಾವಿರ ಕೋಟಿ ಹೂಡಿಕೆ ಎಂದರೆ ಸಾಮಾನ್ಯವೇ? ಇದಕ್ಕೆ ಯಾವ ವೈಜ್ಞಾನಿಕ ಮಾನದಂಡವಿದೆ.ಇದರ ಮಾಲಿನ್ಯದ ಲೆಕ್ಕಾಚಾರವಿಲ್ಲದೆ,ಇದರ ತ್ಯಾಜ್ಯ ವಿಸರ್ಜನೆಯ ಅಪಾಯಕಾರಿ ಗೊತ್ತು ಗುರಿಯಿಲ್ಲದೆ ಸ್ಥಾಪನೆ ಮಾಡುತ್ತಿರುವುದು ಸರಿಯಲ್ಲ. ಇಲ್ಲಿನ ಜಿಲ್ಲಾಡಳಿತ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈಗ ವಿಸ್ತರಣೆಗೆ ಮುಂದಾಗಿರುವ ಬಲ್ಡೋಟ ಕಾರ್ಖಾನೆ ಈಗಾಗಲೇ ೨೦೧೧ ರಿಂದಲೇ ನಡೆಸುತ್ತಿರುವ ಒಂದು ಪೆಲ್ಲೆಟ್ ಘಟಕದಿಂದ ಅರ್ಧ ಭಾಗ ಕೊಪ್ಪಳ ಧೂಳುಮಯ ಮಾಡಿದೆ. ಹಾಗೇ ನೋಡಿದರೆ ಕಲ್ಯಾಣನಗರ ಅಗಡಿ ಲೇಔಟ್ ಭಾಗ್ಯನಗರ ಪ್ರದೇಶ ಬಿಟ್ಟಿಲ್ಲ. ಯಾಕೆ ಈ ಸತ್ಯ ಅರ್ಥವಾಗುತ್ತಿಲ್ಲ. ಇದರ ಗಂಭೀರತೆ ಅರಿಯಬೇಕೆಂದರೆ ವಾರ್ಡ್‌ಗಳ ಭೇಟಿ ಮಾಡಿ ಸತ್ಯ ತಿಳಿದುಕೊಳ್ಳಲಿ.ಇಲ್ಲದಿದ್ದರೆ ಜನರು ಸಂಪೂರ್ಣವಾಗಿ ಉಸಿರಾಟದ ತೊಂದರೆಯ ಕಾಯಿಲೆಗೆ ತುತ್ತಾಗುವುದು ಶತಸಿದ್ಧ. ಅನಾರೋಗ್ಯದ ಕಾರಣಕ್ಕೆ ಈಗಾಗಲೇ ಜಾಗೃತ ನೌಕರರ ವರ್ಗ ಇಲ್ಲಿಂದ ವರ್ಗಾವಣೆಗೊಳ್ಳುತ್ತಿದ್ದಾರೆ. ಮತ್ತೆ ಕೊಪ್ಪಳದಲ್ಲಿ ನೆಲೆ ನಿಲ್ಲುವ ಬಯಕೆ ಕೈಬಿಟ್ಟಿದ್ದಿರೆ. ಅಂತವರು ಇಲ್ಲಿ ನಿವೇಶನಗಳನ್ನಾಗಲಿ ಮನೆಗಳನ್ನಾಗಲಿ ಖರೀದಿ ಮಾಡುತ್ತಿಲ್ಲ ಮತ್ತು ಯಾವುದೆ ಮನೆ ಕಟ್ಟುತ್ತಿಲ್ಲ ಅಂದರೆ ಏನು ಅರ್ಥ ಇದನ್ನು ಕೂಡಲೇ ಗಂಭೀರವಾಗಿ ಪರಿಗಣಿಸಿ ಇಲ್ಲಿನ ಬಲ್ಡೋಟ ಒಳಗೊಂಡು ಯಾವುದೇ ಕಾರ್ಖಾನೆಗಳ ವಿಸ್ತರಣೆ ಮಾಡಕೂಡದು. ಹೀಗಿರುವ ಕಾರ್ಖಾನೆಗಳ ಮಾಲಿನ್ಯ ಕಡ್ಡಾಯವಾಗಿ ನಿಯಂತ್ರಣಕ್ಕೆ ತರಬೇಕು ಅಂದಾಗ ಮಾತ್ರ ಇಪ್ಪತ್ತು ಹಳ್ಳಿಗಳ ಜನ ಜೀವನ ಉಳಿಯಲು ಸಾಧ್ಯ.ಕೃಷಿ ಉಳಿಯಲು ಸಾಧ್ಯ ಎಂದರು.ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು,ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಸಂತೋಷ್ ದೇಶಪಾಂಡೆ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಬಿ.ಜಿ.ಕರಿಗಾರ, ಶಂಭುಲಿಂಗಪ್ಪ ಹರಗೇರಿ, ಮಹಾದೇವಪ್ಪ ಮಾವಿನಮಡು, ಗವಿಸಿದ್ದಪ್ಪ ಪೋ.ಪಾಟೀಲ್, ಮೂಕಪ್ಪ ಮೇಸ್ತ್ರಿ, ಬಸಾಪುರ, ವಿಜಯಮಹಾಂತೇಶ ಹಟ್ಟಿ,ರಂಗಕರ್ಮಿ ಶರಣು ಶೆಟ್ಟರ್, ಶರಣು ಪಾಟೀಲ್,ಸುರೇಶ ಎಚ್, ಬಸವರಾಜ ಎಸ್,ಶಿವಪ್ಪ ಜಲ್ಲಿ, ನಾಗರಾಜ್ ಕುಷ್ಟಗಿ, ರಮೇಶ ಮೈನಹಳ್ಳಿ, ಬಸವರಾಜಪ್ಪ ಶೆಟ್ಟರ್, ವಿಶಾಲಾಕ್ಷಿ ಶೆಟ್ಟರ್, ಈರಮ್ಮ ಉಂಡಿ,ಗಂಗಮ್ಮ ಕುರುಗೋಡು, ಬೀಬಿಜಾನ್ ಮುಂತಾದವರು ಪಾಲ್ಗೊಂಡಿದ್ದರು.