ಪುಣ್ಯದ ಬದುಕಿಗೆ ದುಶ್ಚಟದ ದುಗುಡ ಬೇಡ

KannadaprabhaNewsNetwork |  
Published : Nov 20, 2025, 01:15 AM IST
19ಕೆಕೆಆರ್4: ಕುಕನೂರು ಪಟ್ಟಣದ ಅನ್ನದಾನೇಶ್ವರಮಠದಲ್ಲಿ ಬುಧವಾರ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ವತಿಯಿಂದ ೨೦೦೯ನೇ ಮದ್ಯವರ್ಜನ ಶಿಬಿರ ಉದ್ದೇಶಿಸಿ ಜನಜಾಗೃತಿ ಯೋಜನಾಧಿಕಾರಿ ಕೊಪ್ಪಳ ಪ್ರಾದೇಶಿಕ ವಿಭಾಗದ ನಾಗೇಶ ಮಾತನಾಡಿದರು.  | Kannada Prabha

ಸಾರಾಂಶ

ಕುಡಿತದ ಚಟದಿಂದ ಮನ,ಮನೆ,ಕುಟುಂಬ,ಮಕ್ಕಳು, ಪತ್ನಿ,ತಂದೆ, ತಾಯಿ ಸೇರಿದಂತೆ ಅನೇಕರು ನೋವು ಪಡಬೇಕಾಗುತ್ತದೆ

ಕುಕನೂರು: ದೇವರು ನೀಡಿರುವ ಈ ಪುಣ್ಯದ ಬದುಕಿಗೆ ಹಾಳು ಮಾಡುವ ದುಶ್ಚಟ ಬೇಡ ಎಂದು ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ವಿಭಾಗದ ಅಧಿಕಾರಿ ನಾಗೇಶ ವೈ.ಎ ಹೇಳಿದರು.

ಪಟ್ಟಣದ ಅನ್ನದಾನೇಶ್ವರಮಠದಲ್ಲಿ ಬುಧವಾರ ಜರುಗಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ ವತಿಯಿಂದ ೨೦೦೯ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮದ್ಯವರ್ಜನ ಶಿಬಿರದಲ್ಲಿ ೬೦ ಹೆಚ್ಚು ಜನರು ಭಾಗವಹಿಸಿದ್ದಾರೆ. ಕುಡಿತದ ಚಟದಿಂದ ಮನ,ಮನೆ,ಕುಟುಂಬ,ಮಕ್ಕಳು, ಪತ್ನಿ,ತಂದೆ, ತಾಯಿ ಸೇರಿದಂತೆ ಅನೇಕರು ನೋವು ಪಡಬೇಕಾಗುತ್ತದೆ. ಕುಡಿತದ ಚಟ ಅಂಟಿಸಿಕೊಂಡಿರುವರು ಒಮ್ಮೆ ತಿಳಿದು ಬದುಕಬೇಕು. ಇದರಿಂದ ಜೀವನಮಟ್ಟ ಸುಧಾರಿಸುತ್ತದೆ ಎಂದು ಹೇಳಿದರು.

ಶ್ರೀಮಠದ ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಪ್ರಕಾಶರಾವ್, ಜಿಲ್ಲಾ ಸಮಿತಿಯ ಕರಬಸಯ್ಯ ಬಿನ್ನಾಳ,ನೀಲಕಂಠಪ್ಪ ನಾಗಶೆಟ್ಟಿ, ಕ್ಷೇತ್ರ ಯೋಜನಾಧಿಕಾರಿ ಗಣೇಶ ನಾಯಕ, ಜನಜಾಗೃತಿಯ ಮೇಲ್ವಚಾರಕ ಸಚಿನ್, ಮೇಲ್ವಚಾರಕ ಶ್ರೀಶೈಲ್, ಗೀತಾ ನಂದಿಹಳ್ಳಿ, ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜನ್, ದಿವಾಕರ್, ನಿವೃತ್ತ ಉಪನ್ಯಾಸಕ ಆರ್.ಪಿ. ರಾಜೂರು, ವೈದ್ಯ ಜಂಬಣ್ಣ ಅಂಗಡಿ, ಮುಖಂಡ ಕರಬಸಪ್ಪ ಬಗನಾಳ, ದೇವೆಂದ್ರಪ್ಪ ಬಡಿಗೇರ್, ವಿನಾಯಕ ಯಾಳಗಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗಾಯತರು ಭೇದ ಭಾವ ಮರೆತು ಒಗ್ಗಟ್ಟಾಗಬೇಕಿದೆ
ತಂತ್ರಜ್ಞಾನ ಸಹಾಯದಿಂದ ದೇಶದ ಅಭಿವೃದ್ಧಿಗೆ ಶ್ರಮಿಸಿ