ಮಾಗಡಿ: ನಾವು ಹುಟ್ಟುವಾಗ ಯಾವ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ, ಹಾಗಿದ್ದರೆ ನಾವು ಈ ಜಾತಿಯಲ್ಲಿ ಹುಟ್ಟಬೇಕು ಅಂದುಕೊಳ್ಳುತ್ತಿರಲಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಜನಾಂಗದ ಹಣ ದುರ್ಬಳಕೆ ಆದರೆ ಶಿಕ್ಷೆ:
ನಮ್ಮ ಸರ್ಕಾರ ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ನಮ್ಮ ಆಯವ್ಯಯದಲ್ಲಿ ಹಣವನ್ನು ಮೀಸಲಿಟ್ಟಿದ್ದು ಎಸಿಪಿ ಮತ್ತು ಎಸ್ಟಿಪಿ ಅನುದಾನವನ್ನು ನೂರಕ್ಕೆ ನೂರರಷ್ಟು ಬಳಕೆ ಮಾಡಬೇಕು. ಜೊತೆಗೆ ಈ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಮೂಲಕ ನಮ್ಮ ಸರ್ಕಾರ ಎಸ್ಸಿ/ಎಸ್ಟಿ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಲು ಅನೇಕ ಯೋಜನೆಗಳನ್ನು ತರುತ್ತಿದ್ದು ಈ ಮೂಲಕ ನಮ್ಮ ಜನಾಂಗ ಸಮಾಜದಲ್ಲಿ ಮುಂದೆ ಬರಬೇಕು ಎಂದು ತಿಳಿಸಿದರು.ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಬಡವನ ಮಗನು ಕೂಡ ಶಾಸಕರಾಗಬಹುದು ಎಂದು ತೋರಿಸಿಕೊಟ್ಟಿದ್ದೆ ಅಂಬೇಡ್ಕರ್. ಅವರು ಬರೆದ ಸಂವಿಧಾನದ ಮೂಲಕ ನಾನು ಶಾಸಕನಾಗಿ ಆಯ್ಕೆಯಾಗಿ ಅವರ ಋಣ ತೀರಿಸುವ ನಿಟ್ಟಿನಲ್ಲಿ ನನಗೆ ಒಂದು ಸೌಭಾಗ್ಯ ಸಿಕ್ಕಿತು. 75 ವರ್ಷ ಕಳೆದರು ಕೂಡ ಮಾಗಡಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗಿರಲಿಲ್ಲ. ಎಸ್ಸಿ ಎಸ್ಟಿ ಸಭೆಯಲ್ಲಿ ತೀರ್ಮಾನವಾದಂತೆ ನನ್ನ ಸ್ವಂತ ಹಣದಲ್ಲಿ ಪ್ರತಿಮೆ ನಿರ್ಮಾಣ ಮಾಡಿದ್ದು ಪ್ರತಿಮೆ ಕೂರಿಸುವ ಸ್ಥಳದ ಬಗ್ಗೆ ಸಾಕಷ್ಟು ಗೊಂದಲಗಳಾಗಿ ಪೊಲೀಸರ ಸಮ್ಮುಖದಲ್ಲಿ ಪುರಸಭೆ ಮುಂಭಾಗದಲ್ಲಿ ಪ್ರತಿಮೆ ನಿರ್ಮಾಣ ಮಾಡುವ ಪರಿಸ್ಥಿತಿ ಬಂದಿತ್ತು. ಆದರೂ ಕೂಡ ಸಮಾಜದ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಅದ್ಧೂರಿ ಕಾರ್ಯಕ್ರಮ ಮಾಡಿದ್ದು ನಮ್ಮ ತಾಲೂಕಿನವರೇ ಆದ ಗೃಹ ಸಚಿವ ಜಿ.ಪರಮೇಶ್ವರ್ ಅವರ ಕೈಯಲ್ಲಿ ಪ್ರತಿಮೆ ಅನಾವರಣ ಆಗಿರುವುದು ಸಂತೋಷ ತಂದಿದೆ. ಅಧಿಕಾರ ಇದ್ದಾಗ ಏನೋ ಮಾಡಿದ್ದೆವು ಎಂಬುದು ಜನತೆಗೆ ತಿಳಿಯುತ್ತದೆ ಎಂದು ಹೇಳಿದರು.
ಪಟ್ಟಣದಲ್ಲಿ ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ್ ಪ್ರತಿಮೆಯುಳ್ಳ ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳ ಮೂಲಕ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಂದಿದ್ದ ಎಲ್ಲಾ ಗಣ್ಯರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮುಖಂಡರಾದ ಬಿ.ವಿ.ಜಯರಾಂ, ರಂಗಾನಮಯ್ಯ, ಸಿ.ಜಯರಾಂ, ಮಂಜೇಶ್, ನಾಗರಾಜು, ನರಸಿಂಹಮೂರ್ತಿ, ಶಿವಶಂಕರ್, ಚಿಕ್ಕರಾಜು, ಚಿಕ್ಕಣ್ಣ ಸೇರಿದಂತೆ ತಾಲೂಕಿನ ಅನೇಕ ದಲಿತ ಮುಖಂಡರು, ಪುರಸಭಾ ಸದಸ್ಯರು ಭಾಗವಹಿಸಿದ್ದರು.
ಮಾಗಡಿಯ ಪುರಸಭೆ ಮುಂದೆ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಮಾಗಡಿ ಅಂಬೇಡ್ಕರ್ ಹಬ್ಬ ಕಾರ್ಯಕ್ರಮವನ್ನು ಗೃಹ ಸಚಿವ ಜಿ. ಪರಮೇಶ್ವರ್ ಉದ್ಘಾಟಿಸಿದರು. ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಮಾಜಿ ಶಾಸಕ ಎ.ಮಂಜುನಾಥ್ ಹಾಜರಿದ್ದರು.
ಮಾಗಡಿಯ ಪುರಸಭೆ ಮುಂದೆ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಗೃಹಸಚಿವ ಜಿ.ಪರಮೇಶ್ವರ್ ಅನಾವರಣಗೊಳಿಸಿದರು.