- ಕುಂದೂರಲ್ಲಿ ದಾವಿವಿ ಗೌರವ ಡಾಕ್ಟರೇಟ್ ಪುರಸ್ಕೃತ ಪ್ರೊ.ಮುರಿಗೇಂದ್ರಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹುಟ್ಟಿನಿಂದ ಯಾರು ಕೂಡ ಬುದ್ಧಿವಂತ ಅಥವಾ ದಡ್ಡರಾಗಿ ಇರುವುದಿಲ್ಲ. ಬೆಳೆಯುತ್ತ ತನ್ನ ಸುತ್ತಮುತ್ತಲಿನ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದರೆ ಜೀವನದಲ್ಲಿ ಆ ವ್ಯಕ್ತಿ ಏನನ್ನಾದರೂ ವಿಶೇಷವಾಗಿ ಸಾಧಿಸಬಹುದು ಎಂದು ಶಿಕ್ಷಣಪ್ರೇಮಿ, ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ ಹೇಳಿದರು.ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ದಾವಣಗೆರೆ ವಿವಿ ಗೌರವ ಡಾಕ್ಟೇರೆಟ್ ಪದವಿಗೆ ಭಾಜನರಾದ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಸಿ.ಎಚ್. ಮುರಿಗೇಂದ್ರಪ್ಪ ಅವರಿಗೆ ಹುಟ್ಟೂರಾದ ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮುಖಂಡ ಹಾಲೇಶಪ್ಪ ಮೂಡಾಳ್ ಮಾತನಾಡಿ, ಸಿ.ಎಚ್. ಮುರಿಗೇಂದ್ರಪ್ಪ ಅವರು ರಾಷ್ಟ್ರ ಮತ್ತು ರಾಜ್ಯಮಟ್ಟದ ಶಿಕ್ಷಕರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕುವೆಂಪು ವಿ.ವಿ. ಮತ್ತು ದಾವಣಗೆರೆ ವಿ.ವಿ.ಗಳ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ವಿಶ್ವವಿದ್ಯಾನಿಯಲಗಳ ಅಭಿವೃದ್ಧಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
- - -
ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಸಿ.ಎಚ್. ಮುರಿಗೇಂದ್ರಪ್ಪ ಅವರಿಗೆ ದಾವಣಗೆರೆ ವಿ.ವಿ. ಗೌರವ ಡಾಕ್ಟೇರೇಟ್ ಲಭಿಸಿದ ಹಿನ್ನೆಲೆ ಹುಟ್ಟೂರು ಕುಂದೂರು ಗ್ರಾಪಂ ವತಿಯಿಂದ ಅವರನ್ನು ಗೌರವಿಸಲಾಯಿತು.