ಕನ್ನಡಪ್ರಭ ವಾರ್ತೆ ಆಲೂರು
ಅವರು ಆಲೂರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳ ಪಾಲನೆ ಮಾಡದಿದ್ದರೆ ದಿನಾಚರಣೆಗಳಿಗೆ ಅರ್ಥವಿರುವುದಿಲ್ಲ ಎಂಬ ಕಟುಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ತ್ಯಾಗಮಯಿ ಶಿಕ್ಷಕರುಗಳಿಂದಾಗಿ ಇಂದಿಗೂ ಶಿಕ್ಷಣ ವೃತ್ತಿಯ ಗೌರವ ಉಳಿದಿದೆ. ಅಕ್ಷರ ಜ್ಞಾನ ನೀಡಿ ಬದುಕು ರೂಪಿಸುವ ಸಂಸ್ಕಾರವನ್ನೂ ನೀಡುವ ಶಿಕ್ಷಕರ ಕಾಯಕ ಅನನ್ಯವಾದದು ಅವರಿಂದಲೇ ಗ್ರಾಮಗಳು ಅಭಿವೃದ್ಧಿ ಹೊಂದಿ ದೇಶ ಉನ್ನತಿಯತ್ತ ಸಾಗಲು ಸಾಧ್ಯ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಸಕಲೇಶಪುರ ಮತ್ತು ಆಲೂರು ತಾಲೂಕುಗಳು ಉತ್ತಮ ಸಾಧನೆ ಮಾಡಿವೆ, ಇದಕ್ಕೆ ಕಾರಣ ಶಿಕ್ಷಕರು ಆದ್ದರಿಂದ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಮುಂದಿನ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಯೂ ಹೆಚ್ಚು ಫಲಿತಾಂಶ ಬರುವಂತೆ ನೋಡಿಕೊಳ್ಳುವುದು ನಿಮ್ಮೆಲ್ಲರ ಕರ್ತವ್ಯ ನಾನು ನಿಮ್ಮೊಟ್ಟಿದ್ದು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಹಾಗೂ ಅವರ ಕುಟುಂಬಕ್ಕೆ ದೇವರು ಅರೋಗ್ಯ ಆಯಸ್ಸು ನೀಡಲಿ ಎಂದು ದೇವರಲ್ಲಿ ಬೇಡುತ್ತೇನೆ ಎಂದರು.ಮಾಜಿ ಸಚಿವ ಎಚ್. ಕೆ. ಕುಮಾರಸ್ವಾಮಿ ಮಾತನಾಡಿ ನಾಡಿನಲ್ಲಿ ದೇವರಿಗಿಂತಲೂ ಗುರುವಿಗೆ ಉನ್ನತ ಸ್ಥಾನವಿದೆ ಓರ್ವ ಶಿಕ್ಷಕರು ದೇಶದ ಅತ್ಯನ್ನತ ಸ್ಥಾನಕ್ಕೇರಿರುವುದಕ್ಕೆ ಡಾ.ರಾಧಾಕೃಷ್ಣನ್ ಉದಾಹರಣೆಯಾಗಿದ್ದಾರೆ. ಆದ್ದರಿಂದ ಸಮಾಜದ ಒಳತಿಗಾಗಿ ಶಿಕ್ಷಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಕ್ಕಳಲ್ಲಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸದಾ ಪರಿಶ್ರಮಿಸಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕು ಗುರು ಆದವರು ನಡೆ ನುಡಿಯಲ್ಲಿ, ವೃತ್ತಿಯಲ್ಲಿ,ವ್ಯಕ್ತಿತ್ವದಲ್ಲಿ ಆದರ್ಶಗಳನ್ನು ತುಂಬಿಕೊಂಡವನಾಗಿರಬೇಕು ಒಳ್ಳೆಯ ಶಿಕ್ಷಕ ವಿದ್ಯಾರ್ಥಿಗಳನ್ನು ಉತ್ತಮವಾಗಿ ಬೆಳೆಸಬಲ್ಲ ಇಂದಿನ ಶಿಕ್ಷಕರು ವಿದ್ಯಾರ್ಥಿಗಳ ಬೆಳವಣಿಗೆಯನ್ನು ನಿರೀಕ್ಷಿಸಬೇಕಾದ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್. ಎಂ ವಿಶ್ವನಾಥ್,ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ತಾಲೂಕು ಪಂಚಾಯಿತಿ ಕಾರ್ಯಾ ನಿವಾಹಣಾಧಿಕಾರಿ ಸುಬ್ರಮಣ್ಯ ಶರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಪ್ರಭಾರಿ ಕ್ಷೇತ್ರ ಸಮನ್ವಯ ಅಧಿಕಾರಿ ವಿಜಯಕುಮಾರ್, ಮುಖ್ಯ ಭಾಷಣಕಾರ ರೋಹಿತ್, ಪ್ರಭಾರ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಕರಿಬಸವರಾಜು,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದೇಶ್ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವರದರಾಜು, ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶಿವಮೂರ್ತಿ, ತಾಲೂಕು ವೀರಶೈವ ಸಂಘದ ಮುಖಂಡ ರೇಣುಕಾ ಪ್ರಸಾದ್ ಇತರರು ಉಪಸ್ಥಿತರಿದ್ದರು.