ಯಾವುದೇ ರಾಜಕೀಯ ಚರ್ಚೆ ಆಗಿಲ್ಲ: ಸಿಪಿವೈ

KannadaprabhaNewsNetwork |  
Published : Feb 28, 2026, 01:45 AM IST
ಪೊಟೋ೨೭ಸಿಪಿಟಿ೨: ನಗರದ ೭ನೇ ಅಡ್ಡರಸ್ತೆಯಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಶಾಸಕ ಬಾಲಕೃಷ್ಣ ಜನ್ಮದಿನದ ಪ್ರಯುಕ್ತ ಊಟಕ್ಕೆ ಕರೆದಿದ್ದರು, ನಾನು ತಡವಾಗಿ ಅಲ್ಲಿಗೆ ಹೋಗಿ ಊಟ ಮಾಡ್ಕೊಂಡು ಬಂದೆ. ನಾನಿದ್ದಾಗ ಯಾವುದೇ ರಾಜಕೀಯ ಚರ್ಚೆ ಆಗಲಿಲ್ಲ ಎಂದು ಶಾಸಕ ಯೋಗೇಶ್ವರ್ ತಿಳಿಸಿದರು

ಚನ್ನಪಟ್ಟಣ: ಶಾಸಕ ಬಾಲಕೃಷ್ಣ ಜನ್ಮದಿನದ ಪ್ರಯುಕ್ತ ಊಟಕ್ಕೆ ಕರೆದಿದ್ದರು, ನಾನು ತಡವಾಗಿ ಅಲ್ಲಿಗೆ ಹೋಗಿ ಊಟ ಮಾಡ್ಕೊಂಡು ಬಂದೆ. ನಾನಿದ್ದಾಗ ಯಾವುದೇ ರಾಜಕೀಯ ಚರ್ಚೆ ಆಗಲಿಲ್ಲ ಎಂದು ಶಾಸಕ ಯೋಗೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಶಾಸಕರ ಡಿನ್ನರ್ ಪಾರ್ಟಿ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಒಂದಷ್ಟು ಜನ ಪೋಟೊ ತೆಗೆಸಿಕೊಳ್ಳೋಣ ಅಂದರು. ಹಾಗಾಗಿ ಜೊತೆಯಲ್ಲಿ ನಿಂತು ಪೋಟೊ ತೆಗೆಸಿಕೊಂಡೆವು. ಬಾಲಕೃಷ್ಣ ಆಹ್ವಾನ ನೀಡಿದ್ದರು. ಅದಕ್ಕಾಗಿ ಹೋಗಿದ್ದೆ. ಇನ್ನೂ ಕಾಲಾವಕಾಶ ಇದೆ ನೋಡೋಣ. ಸದ್ಯ ನಾನು ರಾಜಕೀಯವಾಗಿ ಓಡಾಡೋದು ಕಡಿಮೆ. ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಈ ಗೊಂದಲ ಮುಂದುವರಿದರೆ ಅಭಿವೃದ್ಧಿ ಕುಂಠಿತ ಆಗುತ್ತೆ. ರಾಜ್ಯದಲ್ಲಿ ಪೂರಕ ವಾತಾವರಣ ಇರೋದಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ನಿಷ್ಕ್ರಿಯರಾಗ್ತಾರೆ. ಶೀಘ್ರದಲ್ಲೇ ಗೊಂದಲ ಬಗೆಹರಿಯಬೇಕು. ಸದ್ಯ ನನಗಿರೋ ಮಾಹಿತಿ ಪ್ರಕಾರ ಹೈಕಮಾಂಡ್ ಲೆವೆಲ್‌ನಲ್ಲಿ ಮಾತುಕತೆ ಆಗಿದೆ. ಅದಕ್ಕೆ ಸಿಎಂ, ಡಿಸಿಎಂ ಕ್ಲಾರಿಫಿಕೇಷನ್ ಕೊಡಬೇಕು. ಬಜೆಟ್ ಆಗಲಿ ಏನಾಗುತ್ತೋ ನೋಡೋಣ. ೧೪೦ ಶಾಸಕರು ಇರೋ ಬಲಿಷ್ಠ ಸರ್ಕಾರ ಇದೆ. ಎಲ್ಲಾ ಗೊಂದಲ ನಿವಾರಣೆ ಆಗುತ್ತೆ ಎಂದರು.

ಪೊಟೋ೨೭ಸಿಪಿಟಿ೨:

ಚನ್ನಪಟ್ಟಣದ ೭ನೇ ಅಡ್ಡರಸ್ತೆಯಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಯೋಗೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ್ಯವಿವಾಹ ತಡೆಗೆ ಇಲಾಖೆಗಳ ಮಧ್ಯೆ ಸಮನ್ವಯ ಅಗತ್ಯ
ನೌಕರಿ ಮೇಳ: 1290ರಲ್ಲಿ 190 ಮಂದಿಗೆ ಉದ್ಯೋಗ