ನ್ಯಾಯಕ್ಕಾಗಿ ಹೋರಾಡುವ ವಕೀಲರಿಗಿಲ್ಲ ರಕ್ಷಣೆ: ಭಾಷಾ ಪಟೇಲ

KannadaprabhaNewsNetwork |  
Published : Nov 06, 2026, 01:30 AM IST
ಜೇವರ್ಗಿ : ರಾಜ್ಯ ನ್ಯಾಯವಾದಿಗಳ ಸಂಘ ಕರೆ ನೀಡಿದ ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ಭಾಷಾಪಟೇಲ್ ಯಾಳವಾರ, ಕಾರ್ಯದರ್ಶಿ ರಾಜಶೇಖರ ಶಿಲ್ಪಿ, ವೈ.ಜಿ. ಪಾಟೀಲ, ಸಿದ್ದು ಯಂಕಂಚಿ, ಬಸವರಾಜ ಕೊಂಬಿನ ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಇತ್ತಿಚೆಗೆ ನ್ಯಾಯವಾದಿಗಳಿಗೆ ಭದ್ರತೆ ಇಲ್ಲದಂತ್ತಾಗಿದ್ದು, ಹಲ್ಲೆ ಕೂಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯವಾದಿಗಳು ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ತಮ್ಮ ಕುಟುಂಬದ ಹಂಗು ತೊರೆದು ಶ್ರಮ ವಹಿಸುತ್ತಾರೆ. ನ್ಯಾಯವಾದಿಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ನ್ಯಾಯವಾದಿಗಳ ಸಂಘದ ತಾಲೂಕು ಘಟಕದ ಉಪಾದ್ಯಕ್ಷ ಭಾಷಾಪಟೇಲ ಮಾಲಿಪಾಟೀಲ ಯಾಳವಾರ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಇತ್ತಿಚೆಗೆ ನ್ಯಾಯವಾದಿಗಳಿಗೆ ಭದ್ರತೆ ಇಲ್ಲದಂತ್ತಾಗಿದ್ದು, ಹಲ್ಲೆ ಕೂಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯವಾದಿಗಳು ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ತಮ್ಮ ಕುಟುಂಬದ ಹಂಗು ತೊರೆದು ಶ್ರಮ ವಹಿಸುತ್ತಾರೆ. ನ್ಯಾಯವಾದಿಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ನ್ಯಾಯವಾದಿಗಳ ಸಂಘದ ತಾಲೂಕು ಘಟಕದ ಉಪಾದ್ಯಕ್ಷ ಭಾಷಾಪಟೇಲ ಮಾಲಿಪಾಟೀಲ ಯಾಳವಾರ ಒತ್ತಾಯಿಸಿದರು.

ರಾಜ್ಯ ನ್ಯಾಯವಾದಿಗಳ ಸಂಘ ಮಂಗಳವಾರ ಕರೆ ನೀಡಿದ ಪ್ರತಿಭಟನೆಯಲ್ಲಿ ಮಾತನಾಡಿ, ಕಕ್ಷಿದಾರರ ನ್ಯಾಯಪರ ಹೊರಾಟಕ್ಕಾಗಿ ಅದೇಷ್ಟೂ ಸಮಸ್ಯೆಗಳನ್ನು ಎದುರಿಸಿ ನ್ಯಾಯ ಒದಗಿಸುತ್ತೇವೆ. ಆದರೆ ನ್ಯಾಯ ಒದಗಿಸುವ ನ್ಯಾಯವಾದಿಗಳಿಗೆ ನ್ಯಾಯ ಸಿಗುತ್ತಿಲ್ಲ. ಈಗಾಗಲೇ ನ್ಯಾಯವಾದಿಗಳಿಗೆ ರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದು, ಅದನ್ನು ಕಟ್ಟುನಿಟ್ಟಾಗಿ ಸರ್ಕಾರ ಕಾರ್ಯರೂಪಕ್ಕೆ ತರಬೇಕೆಂದು ಅವರು ಒತ್ತಾಯಿಸಿದರು. ಪ್ರತಿಭಟನೆಯ ನಂತರ ತಹಸೀಲ್ದಾರ ಮುಖಾಂತರ ಮುಖ್ಯ ಮಂತ್ರಿಗಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ತಾಲುಕು ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ಭಾಷಾ ಪಟೇಲ್ ಮಾಲಿಪಾಟೀಲ ಯಾಳವಾರ, ಕಾರ್ಯದರ್ಶಿ ರಾಜಶೇಖರ ಶಿಲ್ಪಿ, ವೈ.ಜಿ.ಪಾಟೀಲ, ಸಿದ್ದು ಯಂಕಂಚಿ, ಬಸವರಾಜ ಕೊಂಬಿನ, ಖಜಾಂಚಿ ಅಶೋಕ ಜೀರ, ಸಂತೋಷ ಆಲೂರ, ಮಲ್ಲಣ್ಣಗೌಡ ಪಾಟೀಲ ಮಾವನೂರ, ಪಿ.ಎಸ.ಪಾಟೀಲ, ಪರುಶುರಾಮ ಮುದಬಾಳ, ತುಳಜಾರಾಮ ರಾಠೋಡ, ಬಿ.ಎಫ. ಕಂಡಗೂಳಿ, ಬಸವರಾಜ ಹೋತಿನಮಡು, ಎಂ.ಎಸ್ .ಬಿರಾದಾರ, ಸಾಯಬಣ್ಣ , ರಾಜಶೇಖರ, ಬಿ.ಎಸ.ಕೇರೂರ, ಎಂ.ಸಿ.ಸೊನ್ನದ, ಕೆ.ಇ.ಬಿರಾದಾರ, ಶಿವರಾಜ ಕೊಡಚಿ, ಆರ್.ಬಿ.ಹಂಗರಗಿ, ಗುರು ಬಳಬಟ್ಟಿ, ಎಸ.ಎಮ್. ಮಾಲಗತ್ತಿ, ಕೆ.ಎಸ.ಮನಿಯಾರ. ಬಸಲಿಂಗಪ್ಪ ಪಾಲಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳಸಿದ ಕಪ್‌ನಲ್ಲೇ ಪೆಪ್ಸಿ ಸರ್ವ್‌ ಮಾಡಿದ ಪಿವಿಆರ್ ತಿನಿಸು ಮಳಿಗೆ
ಬಿಎಂಟಿಸಿ ಬಸ್‌ ಪಾಸ್‌ ದರ ಹೆಚ್ಚಳ!