ಕನ್ನಡಪ್ರಭ ವಾರ್ತೆ ವಿಜಯಪುರಭಾರತದ ವಿರುದ್ದ ಪಾಕಿಸ್ತಾನ್ ನಿರಂತರ ಭಯೋತ್ಪಾದನೆ ಮಾಡುತ್ತಿದ್ದು, ಭಯೋತ್ಪಾದನೆ ನಿಲ್ಲಿಸುವವರೆಗೆ ಪಾಕ್ ಆಕ್ರಮಿಕ ಕಾಶ್ಮೀರ ಬಿಟ್ಟು ಕೊಡುವವರೆಗೂ ಭಾರತ ಯಾವುದೇ ಕ್ರೀಡೆಗಳನ್ನು ಆಡಬಾರದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.
ಏಷ್ಯಾ ಕಪ್ ಟಿ-20 ಕ್ರಿಕೆಟ್ ಪಂದ್ಯದ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಬೈನಲ್ಲಿ ಭಾರತ- ಪಾಕಿಸ್ತಾನ ತಂಡಗಳ ಮುಖಾಮುಖಿ ಆಗುವುದಕ್ಕೆ ಅವರು ಕಿಡಿ ಕಾರಿದರು. ಭಾರತ -ಪಾಕ್ ಪಂದ್ಯಕ್ಕೆ ನನ್ನ ವಿರೋಧವಿದೆ. ಗುಂಡಿಗೆ ಗುಂಡು ಕೊಡೋ ಕೆಲಸ ಮಾಡಬೇಕು. ಜಗತ್ತಿನ ಯಾವುದೇ ಒತ್ತಡಕ್ಕೆ ಕ್ರಿಕೆಟ್, ಫುಟ್ ಬಾಲ್ ಆಡಬಾರದು. ಮುಸ್ಲಿಂ ಕನ್ವರ್ಟ್ ಆಗಿದ್ದೇನೆ ಅಂದುಕೊಳ್ಳಿ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಮುಸ್ಲಿಂ ಅಗಲು ಮೊದಲೆ ಹೇಳಿದ್ದೇವೆ. ಅವರು ಆಗಲಿ, ಅವರಿಗೆ ಜನರು ಬುದ್ದಿ ಕಲಿಸ್ತಾರೆ. 2028ಕ್ಕೆ ಜನರು ಬುದ್ದಿ ಕಲಿಸ್ತಾರೆ, ಈಗ ಆಗಿದ್ದೇನೆ ಅಂತಾ ಹೇಳಿದ್ದಾರಲ್ಲ ಒಳ್ಳೆಯದು. ಅವರು ಮುಸ್ಲಿಂರಷ್ಟೆ ಓಟು ತಗೆದುಕೊಳ್ಳಲಿ ಎಂದರು.ನಾನು ಪ್ರಾಣಿಗಳ ಜೊತೆನೆ ಮಾತನಾಡುವುದು ಎಂಬ ಪ್ರದೀಪ ಈಶ್ವರ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಾಣಿ ಹಾಗೆ ಇರುತ್ತವೆ, ಮಂಗ್ಯಾನ ಮುಂದೆ ಎದುರಿಗೆ ಮಂಗ್ಯಾನೆ ಕಾಣಿಸುತ್ತೆ. ಮಂಗ್ಯಾಗೆ ಬೇರೆ ಏನಾದ್ರೂ ಕಾಣಿಸುತ್ತಾ. ಅದಕ್ಕೆ ಮನುಷ್ಯರು ಮಂಗ್ಯಾನಂತೆ ಕಾಣಿಸುತ್ತಾರೆ. ಪ್ರಾಣಿಗಳಿಗೆ ಮನುಷ್ಯರೂ ಪ್ರಾಣಿಗಳ ತರಾನೆ ಕಾಣುತ್ತಾರೆ ಎಂದರು.
ಗಣೇಶ ಚತುರ್ಥಿಯಲ್ಲಿ ಜನರು ಸೇರಿರುವ ಸ್ಥಳಗಳಿಗೆ ತೆರಳಿ ಯತ್ನಾಳ ಭಾಷಣ ಮಾಡುತ್ತಾರೆ. ಅವರಿಗೆ ಯಾವುದೇ ಜನಬೆಂಬಲ ಇಲ್ಲ ಎಂಬ ಅರ್ಥದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಬಗ್ಗೆ ಉತ್ತರಿಸಿದ ಅವರು, ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ನನಗೆ ನನ್ನ ಪೂಜ್ಯ ತಂದೆಯವರ, ಮಾಜಿ ಮುಖ್ಯಮಂತ್ರಿಗಳ ಬೆಂಬಲ ಇಲ್ಲ. ನನಗೆ ಲಿಂಗಾಯತರ ಬೆಂಬಲ ಇಲ್ಲ ಎಂದು ವ್ಯಂಗ್ಯವಾಡಿದರು. ಎಲ್ಲವನ್ನೂ ಯಡಿಯೂರಪ್ಪ ಕುಟುಂಬಕ್ಕೆ ಮಾರಿ ಬಿಡಲಾಗಿದೆ. ಹುಚ್ಚ ತಂದೆಯವರು ಎಂದರೆ ಎಲ್ಲರೂ ಪಾದಪೂಜೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ವಿಜಯೇಂದ್ರ ಹಾಗೂ ಆರ್.ಅಶೋಕಗೆ ಅಮಿತ್ ಶಾ ಕ್ಲಾಸ್ ತೆಗೆದುಕೊಂಡಿದ್ದಾರೆಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರವನ್ನು ನಾನು ಹೇಳಿದ್ದರೆ ಅದು ಸುಳ್ಳು ಎಂದು ಹೇಳುತ್ತಿದ್ದೀರಿ. ವಿಜಯೇಂದ್ರ ಹಾಗೂ ಇತರರಿಗೆ ಅಮಿತ್ ಶಾ ಕ್ಲಾಸ್ ತೆಗೆದುಕೊಂಡಿದ್ದನ್ನ ಕೇಂದ್ರ ಸಚಿವರೊಬ್ಬರು ನಮಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಮೇ ಹಮ್ ಬಡಾ ಗಲತಿ ಕಿಯಾ ಹೈ, ವಿಜಯೇಂದ್ರಕ ಬಾತ್ ಸುನಕೆ ಯತ್ನಾಳ ಕೋ ಪಾರ್ಟಿಸೇ ಬಾಹರ್ ಕಿಯಾ. ಬಹುತ್ ಗಲತಿ ಹೋಗಯಾ ಎಂದು ಅಮೀತ್ ಶಾ ಹೇಳಿದ್ದಾರೆ.ಕೋಟ್‌ಮದ್ದೂರಿನಲ್ಲಿ ಹಿಂದುತ್ವ, ಬಿಜೆಪಿ ಇಲ್ಲ ಎಂದು ತಿಳಿದಿದ್ಧೇವು. ಹಿಂದೂಗಳು ಒಂದಾಗದಿದ್ದರೆ ನಮಗೆ ಜೀವನ ಮಾಡಲಾಗಲ್ಲ ಎಂದು ಯುವಕರಿಗೆ ತಿಳಿದಿದೆ. ಸುಮಲತಾ ಅಂಬರೀಶ್ ಪಕ್ಷೇತರ ನಿಂತಾಗ ಎಂಪಿ ಮಾಡಿದರು. ಮದ್ದೂರಿನ ಜನ ಏನು ನಿರ್ಧಾರ ತಗೋತಾರೆ ರಾಜ್ಯ ರಾಜಕೀಯ ಚಿಂತನೆ ಬುಡಮೇಲು ಮಾಡುತ್ತಾರೆ ಎಂಬುದು ಗೊತ್ತಾಗಲ್ಲ. ಬಿಜೆಪಿ ನಾಯಕರು ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಹೊಂದಾಣಿಕೆ ಮಾಡಿಕೊಂಡು ಪಾರ್ಟಿ ಹಾಳು ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ. ಕುಮಾರಸ್ವಾಮಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ನಿಖಿಲ ಕುಮಾರಸ್ವಾಮಿ ಪಕ್ಷ ಕಟ್ಟುತ್ತಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ 2028ಕ್ಕೆ 150 ಗಡಿ ದಾಟಬಹುದು. ಜನರಿಗೆ ಹಿಂದುತ್ವದ ಜೊತೆಗೆ ಅಭಿವೃದ್ಧಿ ಬೇಕು. ಸಾಬರಿಗಾಗಿ ಸಾವಿರಾರು ಕೋಟಿ ಕೊಡುತ್ತಾರೆ. ಇದೆಲ್ಲ ಜನರಿಗೆ ಗೊತ್ತಾಗುತ್ತಿದ್ದು, ಜನರು ಬದಲಾವಣೆ ಬಯಸುತ್ತಿದ್ದಾರೆ.ಬಸನಗೌಡ ಪಾಟೀಲ ಯತ್ನಾಳ, ಶಾಸಕ